ಭಾರತ ವಿರುದ್ಧದ ಏಕದಿನ ಸರಣಿಗೆ ಬಲಿಷ್ಟ ತಂಡವನ್ನು ಘೋಷಿಸಿದ ವೆಸ್ಟ್ ಇಂಡೀಸ್

ಭಾರತ ವಿರುದ್ಧ ಇದೇ ತಿಂಗಳಿನಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಬಲಿಷ್ಟ 13 ಆಟಗಾರರನ್ನೊಳಗೊಂಡ ತಂಡವನ್ನ ಪ್ರಕಟಿಸಿದೆ. ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅನ್ನು ವಾಪಸ್ ಕರೆಸಲಾಗಿದ್ದು, ಕಳೆದ ಬಾಂಗ್ಲಾದೇಶ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿತ್ತು.
ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ಕಳೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಭಾರೀ ಮುಖಭಂಗ ಎದುರಿಸಿತು. ತವರಿನಲ್ಲೇ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-3 ವೈಟ್‌ವಾಶ್ ಅವಮಾನ ಎದುರಿಸಿತು. ಹೀಗಾಗಿ ಹೇಗಾದರೂ ಮಾಡಿ ಟೀಂ ಇಂಡಿಯಾ ವಿರುದ್ಧ ಸರಣಿ ಗೆಲ್ಲಬೇಕೆಂದು ಕೆರಿಬಿಯನ್ನರು ಪಣತೊಟ್ಟಿದ್ದಾರೆ.

ಬೆಂಚ್ ಸ್ಟ್ರೆಂಥ್ ಪರೀಕ್ಷಿಸಲಿರುವ ಟೀಂ ಇಂಡಿಯಾ
ಜುಲೈ 22ರಿಂದ ಆರಂಭಗೊಳ್ಳಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಲಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯಲ್ಲಿ ಬೆಂಚ್‌ನಲ್ಲಿ ಕೂತಿದ್ದ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ಶಿಖರ್ ಧವನ್ ಭಾರತವನ್ನ ಮುನ್ನಡೆಸಲಿದ್ದಾರೆ.

ಕೆಲವೇ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿರುವ ವಿಂಡೀಸ್
ವೆಸ್ಟ್ ಇಂಡೀಸ್ ತಂಡದ ಹಿನ್ನಡೆಗೆ ಪ್ರಮುಖ ಕಾರಣ ಕೆಲವೇ ಆಟಗಾರರ ಮೇಲೆ ಹೆಚ್ಚು ಅವಲಂಬಿತರಾಗಿರುವುದು. ನಾಯಕ ಮತ್ತು ಉಪನಾಯಕ ನಿಕೋಲಸ್ ಪೂರನ್ ಮತ್ತು ಶೈ ಹೋಪ್ ಮೇಲೆ ತಂಡವು ಹೆಚ್ಚು ನಂಬಿಕೊಂಡಿದ್ದು, ಟಾಪ್ ಆರ್ಡರ್ ಬ್ಯಾಟಿಂಗ್ ವಿಫಲಗೊಳ್ಳುತ್ತಿರುವುದು ನಾಯಕನಿಗೆ ತಲೆನೋವಾಗಿದೆ.
ಆದ್ರೆ ಈ ಸರಣಿಯಲ್ಲಿ ರೋವ್ಮನ್ ಪೋವೆಲ್ ಮತ್ತು ಜೇಸನ್ ಹೋಲ್ಡರ್ ಪ್ರದರ್ಶನವು ಕುತೂಹಲ ಮೂಡಿಸಿದ್ದು, ಬಾಂಗ್ಲಾದೇಶ ವಿರುದ್ಧ ಆಡಿದ್ದ ಆ್ಯಂಡರ್ಸನ್ ಫಿಲಿಪ್ ಮತ್ತು ರೊಮಾರಿಯೊ ಶೆಫರ್ಡ್ ಸ್ಥಾನ ಕಳೆದುಕೊಂಡಿರುವ ಇಬ್ಬರು ಆಟಗಾರರಾಗಿದ್ದಾರೆ.
"ನಮಗೆ ತಿಳಿದಿರುವಂತೆ ಜೇಸನ್ ವಿಶ್ವದ ಪ್ರಮುಖ ಆಲ್‌ರೌಂಡ್ ಕ್ರಿಕೆಟಿಗರಲ್ಲಿ ಒಬ್ಬರು ಮತ್ತು ಅವರನ್ನು ತಂಡಕ್ಕೆ ಮರಳಿ ಪಡೆದಿರುವುದಕ್ಕೆ ನಮಗೆ ಸಂತೋಷವಾಗಿದೆ. ಅವರು ರಿಫ್ರೆಶ್ ಆಗಿ ತಂಡಕ್ಕೆ ಮರಳಿರುವುದು, ಮರು-ಚೈತನ್ಯವನ್ನು ನೀಡಿದೆ. ಜೊತೆಗೆ ಕಂಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. ಮೈದಾನದಲ್ಲಿ ಅವರ ತೇಜಸ್ಸು ಮತ್ತು ಮೈದಾನದ ಹೊರಗೆ ಅರ್ಥಪೂರ್ಣ ಕೊಡುಗೆಗಳನ್ನು ನಾವು ನೋಡಬಹುದು'' ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಈತ ಭಾರತದ ಪ್ರಮುಖ ಆಟಗಾರನಾಗುತ್ತಿದ್ದಾನೆ; ಆಕಾಶ್ ಚೋಪ್ರಾ

ವೆಸ್ಟ್ ಇಂಡೀಸ್ ಒಡಿಐ ಸ್ಕ್ವಾಡ್
ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್, ಜೇಡನ್ ಸೀಲ್ಸ್
ರಿಷಭ್ ಪಂತ್ ಟೀಂ ಇಂಡಿಯಾದ ಬಹುದೊಡ್ಡ ಆಸ್ತಿ: ತಾಳ್ಮೆಯಿಂದ ಕಾಯಿರಿ ಎಂದ ಆಶಿಶ್ ನೆಹ್ರಾ

ವಿಂಡೀಸ್ ವಿರುದ್ಧದ ಸರಣಿಗೆ ಭಾರತದ ಒಡಿಐ ಸ್ಕ್ವಾಡ್
ಜುಲೈ 22, 24, 27ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದ್ದು, ಟೀಂ ಇಂಡಿಯಾದ 16 ಆಟಗಾರರನ್ನೊಳಗೊಂಡ ಸ್ಕ್ವಾಡ್ ಈ ಕೆಳಗಿದೆ.
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications