ಶನಿವಾರ, ಜುಲೈ 29ರಂದು ಬಾರ್ಬಡೋಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್‌ಗಳ ಸೋಲು ಅನುಭವಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿತು.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಉಪನಾಯಕ ಮತ್ತು ಆಲ್‌ರೌಂಡರ್ ಸೂರ್ಯಕುಮಾರ್ ಯಾದವ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾದರು.

ಭಾರತ ತಂಡದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಇತ್ತೀಚಿನ ತಿಂಗಳುಗಳಲ್ಲಿ ಕಳಪೆ ಫಾರ್ಮ್ ನಂತರ, ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಏಪ್ರಿಲ್ 2022ರಲ್ಲಿ ಗಾಯದಿಂದ ಮರಳಿದಾಗಿನಿಂದ, ಹಾರ್ದಿಕ್ ಪಾಂಡ್ಯ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದರು.
ಆದರೆ, 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಕಳಪೆ ಪ್ರದರ್ಶನ ಹೊಂದಿದ್ದರು ಮತ್ತು ರನ್ ಗಳಿಸುವಲ್ಲಿ ಎಡವಿದರು. ಸಿಎಸ್‌ಕೆ ವಿರುದ್ಧ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.
ಸದ್ಯ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ನಡೆಯುತ್ತಿರುವ ಏಕದಿನ ಸರಣಿಯಲ್ಲಿ 29 ವರ್ಷದ ಹಾರ್ದಿಕ್ ಪಾಂಡ್ಯ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ವಿಫಲರಾದರು.
ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 12 ರನ್ ಗಳಿಸಿ ಒಂದು ವಿಕೆಟ್ ಪಡೆದರೆ, ಎರಡನೇ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ, ಬೌಲಿಂಗ್‌ನಲ್ಲಿ ವಿಕೆಟ್ ರಹಿತರಾದರು. ಇನ್ನು ಮಂಗಳವಾರ, ಆಗಸ್ಟ್ 1ರಂದು ನಡೆಯುವ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಬಹುದು ಎಂದು ಭಾರತ ತಂಡ ಭರವಸೆ ಹೊಂದಿದೆ.
ಹಾರ್ದಿಕ್ ಪಾಂಡ್ಯರ ಕಳಪೆ ಪ್ರದರ್ಶನ ನೋಡಿದ ಮಾಜಿ ಭಾರತೀಯ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಕೆಳ ಹಂತದಲ್ಲಿ ಹೋಗುತ್ತಿದೆ. ಏಷ್ಯಾ ಕಪ್ ಮತ್ತು ವಿಶ್ವಕಪ್‌ಗೂ ಮುನ್ನ ಇದನ್ನು ಸರಿಪಡಿಸಿಕೊಳ್ಳಬೇಕು. ಅಲ್ಲದೆ ಶಾರ್ದೂಲ್ ಠಾಕೂರ್ ಮತ್ತು ಉಮ್ರಾನ್ ಮಲಿಕ್ ನಡುವಿನ ಹೋಲಿಕೆಗಳ ಬಗ್ಗೆಯೂ ಮಾತನಾಡಿದರು.
"ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಫಾರ್ಮ್ ಕೆಳಗೆ ಹೋಗಿದೆ. ಅವರು ಈ ಬಾರಿ ಉತ್ತಮ ಐಪಿಎಲ್ ಪಂದ್ಯಾವಳಿಯನ್ನು ಹೊಂದಿರಲಿಲ್ಲ. ವೈಯಕ್ತಿಕವಾಗಿ, ಅತನ ಬ್ಯಾಟಿಂಗ್ ಸ್ಥಾನದಲ್ಲಿ ನನಗೆ ಸ್ಪಷ್ಟತೆ ಕಾಣುತ್ತಿಲ್ಲ," ಎಂದರು.
"ಇನ್ನು ಈ ಹಂತದಲ್ಲಿ ಶಾರ್ದೂಲ್ ಠಾಕೂರ್ ಅವರು ಉಮ್ರಾನ್ ಮಲಿಕ್‌ಗಿಂತ ಸಾಕಷ್ಟು ಮುಂದಿದ್ದಾರೆ. ಆದರೆ, ನ್ಯಾಯೋಚಿತವಾಗಿ, ಉಮ್ರಾನ್ ಮಲಿಕ್‌ಗೂ ಅವಕಾಶ ಸಿಗುತ್ತಿಲ್ಲ, ಆತನಿಗೆ ಕೇವಲ ಒಂದೆರಡು ಓವರ್‌ಗಳನ್ನು ನೀಡಲಾಗಿದೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ಯುವ ವೇಗಿ ಉಮ್ರಾನ್ ಮಲಿಕ್ 2023ರ ಐಪಿಎಲ್‌ನಲ್ಲಿ ಮರೆಯಲಾಗದ ಋತುವನ್ನು ಹೊಂದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಅವರು ಹೆಚ್ಚಿನ ಪ್ರದರ್ಶನ ನೀಡಲಿಲ್ಲ. ಉಮ್ರಾನ್ ಮಲಿಕ್ ಅವರು ವಿಶ್ವಕಪ್‌ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.
ಏಕದಿನ ಸರಣಿಯು ಪ್ರಸ್ತುತ 1-1 ಅಂತರದಲ್ಲಿ ಸಮಬಲಗೊಂಡಿದೆ. ಮೊದಲ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಎರಡನೇ ಪಂದ್ಯವನ್ನು ಗೆದ್ದಿದೆ.
ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಮಂಗಳವಾರ, ಆಗಸ್ಟ್ 1ರಂದು ನಡೆಯಲಿದೆ. ಈಗಾಗಿ ಮೂರನೇ ಪಂದ್ಯವು ಸರಣಿ ನಿರ್ಣಾಯಕವಾಗಿದ್ದು, ಯಾವ ತಂಡ ಸರಣಿ ವಶಪಡಿಸಿಕೊಳ್ಳಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.