ಪಾಕಿಸ್ತಾನಿ ಕ್ರಿಕೆಟಿಗರಿಗೆ ಬ್ಯಾಟಿಂಗ್ ಜೊತೆಗೆ ಹಾಡು ಹೇಳಿ ಮನರಂಜನೆ ನೀಡ್ತಿದ್ದೆ: ಸೆಹ್ವಾಗ್

ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್ ಮಾಡುವಾಗ ಪಾಕ್ ಕ್ರಿಕೆಟಿಗರೊಬ್ಬರು ತನ್ನನ್ನು ಹಾಡು ಹೇಳಲು ಒತ್ತಾಯಿಸಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮಾಡುವಾಗ ಸೆಹ್ವಾಗ್ ಯಾವಾಗಲೂ ಹಾಡನ್ನು ಗುನುಗುತ್ತಿದ್ದರು.
ಕ್ರಿಕ್‌ಬಝ್‌ನ ಕಾಯ್ರಕ್ರಮವೊಂದರಲ್ಲಿ ಸೆಹ್ವಾಗ್ ಅವರು ತಾವು ಹಾಡುತ್ತಿದ್ದ ವಿಭಿನ್ನ ಹಾಡುಗಳ ಬಗ್ಗೆ ಮಾತನಾಡಿದರು. ಕಿಶೋರ್ ಕುಮಾರ್ ಹಾಡಿದ 'ಮೇರೆ ಜೀವನ್ ಸಾಥಿ' ಚಿತ್ರದ 'ಚಲಾ ಜಾತಾ ಹೂ' ಅವರ ನೆಚ್ಚಿನ ಹಾಡು ಎಂದು ಹೇಳಿದರು. 42 ರ ಹರೆಯದ ವೀರೂ ಕೆಲವು ಬಾಲಿವುಡ್ ಹಾಡುಗಳನ್ನು ಹಾಡಿದ್ದಾರೆ.
ಕ್ರಿಕ್‌ಬಝ್ ಲೈವ್‌ನಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್, "ನಾನು ಬ್ಯಾಟಿಂಗ್ ಮಾಡುವಾಗ ತುಂಬಾ ಹಾಡುಗಳನ್ನು ಹಾಡುತ್ತಿದ್ದೆ. ಆದರೆ ನನ್ನ ನೆಚ್ಚಿನ ಹಾಡು 'ಚಲಾ ಜಾತಾ ಹೂ ಕಿಸಿ ಕೆ ಧುನ್ ಮೇ, ಧಡಕ್ಟೆ ದಿಲ್ ಕೆ, ತಾರಾನೆ ಲೈ ಆಗಿದ್ದವು. ಏಕೆಂದರೆ ಈ ಹಾಡುಗಳನ್ನು ನಾನು ಯಾವುದೇ ಮನಸ್ಥಿತಿಯಲ್ಲಿ ಲೆಕ್ಕಿಸದೆ ಹಾಡುತ್ತಿದೆ. ಬಹುತೇಕ ಸಮಯದಲ್ಲಿ ಅದು ನನ್ನ ಮನಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ'' ಎಂದಿದ್ದಾರೆ.
"ಕೆಲವೊಮ್ಮೆ, ನಾನು ರನ್ ಗಳಿಸುವಾಗ, ' ಚಿಟ್ಟಿಯನ್ ಕಲೈಯಾನ್ 'ನಂತಹ ಬಾಲಿವುಡ್ ಹಾಡುಗಳನ್ನು ಹಾಡುತ್ತಿದ್ದೆ. ಆದರೆ ನನಗೆ ರನ್ ಗಳಿಸಲು ಸಾಧ್ಯವಾಗದಿದ್ದಾಗ, ನನಗೆ 'ಭಗವಾನ್ ಕೆ ಭಜನ್' ಕೂಡ ನೆನಪಾಗುತ್ತದೆ. " ಎಂದು ಕಾರ್ಯಕ್ರಮವೊಂದರಲ್ಲಿ ಸೆಹ್ವಾಗ್ ನೆನಪಿಸಿಕೊಂಡಿದ್ದಾರೆ.
ಇದರ ಜೊತೆಗೆ ಪಾಕಿಸ್ತಾನಿ ಕ್ರಿಕೆಟಿಗರೊಬ್ಬರು ಮೈದಾನದಲ್ಲಿ ಹಾಡನ್ನು ಕೇಳಿದ ಘಟನೆಯನ್ನು ಸೆಹ್ವಾಗ್ ಮೆಲುಕುಹಾಕಿದ್ದಾರೆ. ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸೆಹ್ವಾಗ್‌ರನ್ನು ಶಾರ್ಟ್ ಲೆಗ್‌ನಲ್ಲಿ ನಿಂತಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಯಾಸೀರ್ ಹಮೀದ್ ಅವರು ಕಿಶೋರ್ ಕುಮಾರ್ ಹಾಡನ್ನು ಹೇಳಿ ಎಂದು ಕೇಳಿಕೊಂಡರು ಎಂದು ಹೇಳಿದ್ದಾರೆ.
150 ರ ಸಮೀಪದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸೆಹ್ವಾಗ್ ಸಂತೋಷದಿಂದ ಆ ಹಾಡನ್ನು ಹಾಡಿದ್ದರಂತೆ. ಈ ಮೂಲಕ ತಮ್ಮ ಬ್ಯಾಟಿಂಗ್ ಮತ್ತು ಗಾಯನದ ಮೂಲಕ ಪಾಕಿಸ್ತಾನಿ ಆಟಗಾರರನ್ನು ರಂಜಿಸಿದ್ದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಆ ಟೆಸ್ಟ್ ಪಂದ್ಯದಲ್ಲಿ ಸೆಹ್ವಾಗ್ 201 ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications