ಧೋನಿ ವಿರುದ್ಧ ಯಾವುದೇ ದ್ವೇಷವಿಲ್ಲ, ಆದ್ರೆ ಆಯ್ಕೆಗಾರರು ನ್ಯಾಯ ಒದಗಿಸಿಲ್ಲ: ಹರ್ಭಜನ್ ಸಿಂಗ್

ಭಾರತ ಕ್ರಿಕೆಟ್‌ನ ಅತ್ಯಂತ ಪ್ರತಿಭಾನ್ವಿತ ಹಾಗೂ ಲೆಜೆಂಡರಿ ಕ್ರಿಕೆಟರ್‌ಗಳಲ್ಲಿ ಒಬ್ಬರು ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್. ಸುಮಾರು 24 ವರ್ಷಗಳ ಕಾಲ ಭಾರತ ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿದ್ದ ಭಜ್ಜಿ ಅನೇಕ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ.
ಆನ್‌ಫೀಲ್ಡ್‌ನಲ್ಲಿ ಸಾಕಷ್ಟು ಏರಿಳಿತಗಳನ್ನ ಹೊಂದಿದ್ದ ಹರ್ಭಜನ್ ಸಿಂಗ್ ಸಿಂಗ್ ಲೆಗ್ಗಿ ಅನಿಲ್ ಕುಂಬ್ಳೆ ಕಠಿಣ ಸ್ಪರ್ಧೆಯನ್ನೊಡ್ಡಿದ್ರು. 2007 ರ ಟಿ20 ವಿಶ್ವಕಪ್ ಮತ್ತು 2011 ODI ವಿಶ್ವಕಪ್ ಸೇರಿದಂತೆ ಭಾರತದ ಎರಡು ವಿಶ್ವಕಪ್ ವಿಜಯಗಳಲ್ಲಿ ಕಾಣಿಸಿಕೊಂಡ ಕೆಲವೇ ಆಟಗಾರರಲ್ಲಿ ಹರ್ಭಜನ್ ಸಿಂಗ್ ಒಬ್ಬರು.
ಹರ್ಭಜನ್ ಸಿಂಗ್ ಆನ್‌ಫೀಲ್ಡ್‌ನಲ್ಲಿ ಕೆಲವು ವಿವಾದಗಳನ್ನ ಸೃಷ್ಟಿಸಿದ್ರು, ಐಪಿಎಲ್‌ನಲ್ಲಿ ವೇಗಿ ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿ ನಿಷೇಧಕ್ಕೊಳಗಾಗಿದ್ರು. ನಿವೃತ್ತಿ ನಂತರವು ಮಾಜಿ ನಾಯಕ ಎಂ.ಎಸ್ ಧೋನಿ ಕುರಿತಾಗಿ ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ರು.
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದು ಐದು ವರ್ಷಗಳೇ ಕಳೆದು ಹೋದ ಬಳಿಕ, ಕೇವಲ ಐಪಿಎಲ್‌ನಲ್ಲಿ ಆಡ್ತಿದ್ದ ಹರ್ಭಜನ್ ಸಿಂಗ್ ಇತ್ತೀಚೆಗಷ್ಟೇ ಹೊಸ ವರ್ಷದ ಸಮೀಪದಲ್ಲಿ ನಿವೃತ್ತಿ ಘೋಷಿಸಿದ್ರು. ಈ ವೇಳೆ ಹರ್ಭಜನ್ ಅವರು ಮಾಜಿ ಭಾರತ ನಾಯಕ ಎಂಎಸ್ ಧೋನಿ ಅವರಂತೆ ಮ್ಯಾನೇಜ್‌ಮೆಂಟ್‌ನಿಂದ ಬೆಂಬಲವನ್ನು ಪಡೆದಿದ್ರೆ, ಇನ್ನೂ ಕೆಲವು ವರ್ಷಗಳ ಕಾಲ ಆಡಬಹುದಿತ್ತು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ರು.
"ಧೋನಿ ಇತರ ಆಟಗಾರರಿಗಿಂತ ಉತ್ತಮ ಬೆಂಬಲವನ್ನು ಹೊಂದಿದ್ದರು ಮತ್ತು ಉಳಿದ ಆಟಗಾರರು ಅದೇ ರೀತಿಯ ಬೆಂಬಲವನ್ನು ಪಡೆದಿದ್ದರೆ, ಅವರು ಕೂಡ ಆಡುತ್ತಿದ್ದರು. ಉಳಿದ ಆಟಗಾರರು ಬ್ಯಾಟ್ ಬೀಸುವುದನ್ನು ಮರೆತಿದ್ದಾರ ಅಥವಾ ಬೌಳರ್‌ಗಳು ಸ್ವಿಂಗ್ ಮಾಡುವುದನ್ನ ಬಿಟ್ಟಿದ್ದರಾ ತಿಳಿದಿಲ್ಲ, "ಎಂದು ಅವರು ಜೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಎಂ.ಎಸ್ ಧೋನಿ ನನಗೆ ಸ್ನೇಹಿತ, ಆತನ ವಿರುದ್ಧ ಯಾವುದೇ ದೂರಿಲ್ಲ
ಎಂ.ಎಸ್ ಧೋನಿ ಕುರಿತಾಗಿ ಇತ್ತೀಚೆಗೆ ನೀಡಿದ ಹೇಳಿಕೆಯ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಭಜ್ಜಿ, ಎಂಎಸ್ ಧೋನಿ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ.
"ಅಲ್ಲವೇ ಅಲ್ಲ. ಎಂಎಸ್ ವಿರುದ್ಧ ನನಗೆ ಯಾವುದೇ ದ್ವೇಷವಿಲ್ಲ. ವಾಸ್ತವವಾಗಿ, ಅವರು ಇಷ್ಟು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದರು. ಆ ಕಾಲದ ಸರ್ಕಾರ್ ಬಿಸಿಸಿಐ ವಿರುದ್ಧ ನನ್ನ ದೂರು ಇದೆ. ನಾನು ಬಿಸಿಸಿಐ ಅನ್ನು ಸರ್ಕಾರ್ ಎಂದು ಕರೆಯುತ್ತೇನೆ. ಆಗಿನ ಆಯ್ಕೆಗಾರರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲಿಲ್ಲ. ಅವರು ತಂಡವನ್ನು ಒಗ್ಗೂಡಿಸಲು ಬಿಡಲಿಲ್ಲ "ಎಂದು ನ್ಯೂಸ್ 18 ಉಲ್ಲೇಖಿಸಿದಂತೆ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 417 ವಿಕೆಟ್‌ಗಳನ್ನು ಪಡೆದಿರುವ ಹರ್ಭಜನ್, 103 ಟೆಸ್ಟ್‌ಗಳು, 236 ಏಕದಿನ ಪಂದ್ಯಗಳು ಮತ್ತು 28 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2007 ಟಿ20 ವಿಶ್ವ ಮತ್ತು 2011 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
IPL 2022 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಲ್ಲ 5 ಬೌಲರ್ಸ್:ಆಕಾಶ್ ಚೋಪ್ರಾ

2011ರ ವಿಶ್ವಕಪ್ ಬಳಿಕ ಒಟ್ಟಾಗಿ ಆಡಲು ಬಿಡಲೇ ಇಲ್ಲ!
2011ರ ವಿಶ್ವಕಪ್ ವಿಜೇತ ತಂಡದಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು. ಆದ್ರೆ ಆ ಸಮಯದಲ್ಲಿ ಆಡಿದ್ದ ಬಹುತೇಕ ಟೀಂ ಇಂಡಿಯಾ ಆಟಗಾರರು ಮುಂದಿನ ವಿಶ್ವಕಪ್‌ನಲ್ಲಿ ಮತ್ತೆ ಆಡಲು ಬಿಡಲಿಲ್ಲ ಎಂದು ಭಜ್ಜಿ ದೂರಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ 2011ರ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ತಂಡ ಮತ್ತೆ ಒಂದಾಗಿ ಕಾಣಿಸಲೇ ಇಲ್ಲ ಎಂದಿದ್ದಾರೆ.
"ನೋಡಿ, ಪ್ರತಿಯೊಬ್ಬರೂ ಉಲ್ಲೇಖವನ್ನು ವಿಭಿನ್ನವಾಗಿ ಅರ್ಥೈಸುತ್ತಾರೆ. 2012 ರ ನಂತರ ಬಹಳಷ್ಟು ಸಂಗತಿಗಳು ಉತ್ತಮವಾಗಿರಲಿಲ್ಲ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಸೆಹ್ವಾಗ್, ನಾನು, ಯುವರಾಜ್ , ಗಂಭೀರ್ ಅವರು ಐಪಿಎಲ್‌ನಲ್ಲೂ ಸಕ್ರಿಯರಾಗಿದ್ದರೂ ಭಾರತ ತಂಡಕ್ಕಾಗಿ ನಿವೃತ್ತಿ ಹೊಂದಬಹುದಿತ್ತು. 2011ರ ಚಾಂಪಿಯನ್ನರು ಮತ್ತೆ ಒಟ್ಟಿಗೆ ಆಡಲಿಲ್ಲ ಎಂಬುದು ವಿಪರ್ಯಾಸ! ಏಕೆ? ಅವರಲ್ಲಿ ಕೆಲವರು ಮಾತ್ರ 2015 ರ ವಿಶ್ವಕಪ್‌ನಲ್ಲಿ ಆಡಿದ್ದಾರೆ, ಏಕೆ? " ಎಂದು ಹರ್ಭಜನ್ ಪ್ರಶ್ನಿಸಿದ್ದಾರೆ.

2016ರಲ್ಲಿ ಕೊನೆಯ ಬಾರಿ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಭಜ್ಜಿ
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದು ಐದು ವರ್ಷಗಳ ಬಳಿಕ ನಿವೃತ್ತಿ ಘೋಷಿಸಿದ್ದ ಹರ್ಭಜನ್ ಸಿಂಗ್ 2016ರಲ್ಲಿ ಕೊನೆಯ ಬಾರಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತದ ಪರ ಆಡಿದ್ದರು. ಹರ್ಭಜನ್ ಸಿಂಗ್ ಕೊನೆಯದಾಗಿ 2016 ರಲ್ಲಿ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು ಮತ್ತು ಇದು ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಅವರ ಕೊನೆಯ ಪ್ರದರ್ಶನವಾಗಿತ್ತು.
ಮಹೇಂದ್ರ ಸಿಂಗ್ ಧೋನಿ ಇನ್ನೂ ಸೀಮಿತ ಓವರ್‌ಗಳ ನಾಯಕರಾಗಿದ್ದಾಗ ಭಜ್ಜಿ ತಂಡದಿಂದ ಹೊರಬಿದ್ದ ಪರಿಣಾಮ ಇಬ್ಬರ ನಡುವಿನ ಸಂಬಂಧದ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications