ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ಆಡಲು ಅವಕಾಶ ಸಿಗುತ್ತೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ: ಕೆ.ಎಲ್ ರಾಹುಲ್

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದ ಉಪನಾಯನಾಗಿ ಆಯ್ಕೆಗೊಂಡಿರುವ ಕೆ.ಎಲ್ ರಾಹುಲ್ ತನ್ನ ಕರ್ನಾಟಕದ ಸಹ ಕ್ರಿಕೆಟಿಗ ಮಯಾಂಕ್ ಅಗರ್ವಾಲ್‌ರೊಂದಿಗೆ ಕಣಕ್ಕಿಳಿಯಲು ಸಕಲ ತಯಾರಿ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾದ ಪೇಸ್ ಮತ್ತು ಬೌನ್ಸಿ ಪಿಚ್‌ನಲ್ಲಿ ರನ್‌ಗಳಿಸೋದು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಾಗಲಿದೆ.
ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಡಿ.26ರಂದು ಬಾಕ್ಸಿಂಗ್ ಡೇ ಟೆಸ್ಟ್ ಆಡಲಿದ್ದು, ಕನ್ನಡಿಗರಿಬ್ಬರು ಉತ್ತಮ ಆರಂಭ ನೀಡಬೇಕೆಂದು ಸಜ್ಜಾಗಿದ್ದಾರೆ. ರಾಹುಲ್ ಮತ್ತು ಮಯಾಂಕ್ ಕಣಕ್ಕಿಳಿದ್ರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುತ್ತಿರುವ ಮೊದಲ ಕರ್ನಾಟಕದ ಜೋಡಿಯಾಗಿ ದಾಖಲೆಯನ್ನ ಬರೆಯಲಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಮಯಾಂಕ್ ಮತ್ತು ರಾಹುಲ್ ತಮ್ಮ ವೃತ್ತಿಜೀವನದ ಬಗ್ಗೆ ಮೆಲುಕು ಹಾಕಿದ್ದಾರೆ. ದಕ್ಷಿಣ ಆಫ್ರಿಕಾದಂತಹ ಪಿಚ್‌ನಲ್ಲಿ ಟೀಂ ಇಂಡಿಯಾದ ಉಪನಾಯಕನಾಗಿ ಆಯ್ಕೆಗೊಂಡಿರುವ ಕೆ.ಎಲ್ ರಾಹುಲ್ ಮೇಲಿನ ಜವಾಬ್ದಾರಿ ಹೆಚ್ಚಿದ್ದು, ಮಯಾಂಕ್ ಜೊತೆಗೆ ಕಣಕ್ಕಿಳಿಯುವ ಹಿಂಟ್ ನೀಡಿದ್ದಾರೆ.
ಇದು ಸಂಭವಿಸಿದ್ದೇ ಆದಲ್ಲಿ ಈ ಜೋಡಿ ಎಲ್ಲಾ ಫಾರ್ಮೆಟ್‌ಗಳಿಂದ ಇನ್ನಿಂಗ್ಸ್ ತೆರೆಯುವುದು ನಾಲ್ಕನೇ ಸಂದರ್ಭವಾಗಲಿದೆ. ಅವರು ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ 2019ರ ಆಗಸ್ಟ್ ತಿಂಗಳಿನಲ್ಲಿ ಭಾರತಕ್ಕಾಗಿ ಒಟ್ಟಿಗೆ ಇನ್ನಿಂಗ್ಸ್ ತೆರೆಯಲಿದ್ದಾರೆ. ಈ ಹಿಂದಿನ ಮೂರು ಸಂದರ್ಭಗಳಲ್ಲಿ ಇಬ್ಬರೂ 50ರನ್‌ಗಳ ಜೊತೆಯಾಟವನ್ನು ಆಡಲು ಸಾಧ್ಯವಾಗಿಲ್ಲ.

2019ರಲ್ಲಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದ ರಾಹುಲ್
2019 ರಲ್ಲಿ ಕೆಲವು ಸಾಧಾರಣ ಪ್ರದರ್ಶನಗಳ ನಂತರ ಭಾರತೀಯ ಆಯ್ಕೆಗಾರರು ರಾಹುಲ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟರು. ಕೆ.ಎಲ್ ರಾಹುಲ್ ನಾಲ್ಕು ಪಂದ್ಯಗಳಲ್ಲಿ 22 ರ ಸರಾಸರಿಯಲ್ಲಿ 110 ರನ್ ಗಳಿಸಿದರು. ಇನ್ನು 2020 ರಲ್ಲಿ ರಾಹುಲ್ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ , ಹೀಗಾಗಿ, ಸಂಪೂರ್ಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕಳೆದುಕೊಂಡರು.
ಭಾರತವು ಟಾಪ್ ಆರ್ಡರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು ಆದ್ರೆ ಎಲ್ಲೂ ಕೂಡ ಯಶಸ್ವಿಯಾಗಲಿಲ್ಲ.
"ಹೀಗಿದ್ದರೆ ಹಾರ್ದಿಕ್ ಯಾವ ಮಾದರಿಯಲ್ಲಿಯೂ ಉಳಿದುಕೊಳ್ಳಲ್ಲ": ಭವಿಷ್ಯ ನುಡಿದ ಮಾಜಿ ಪಾಕ್ ಆಟಗಾರ

ಇಂಗ್ಲೆಂಡ್ ಪ್ರವಾಸಕ್ಕೆ ವಾಪಸ್ಸಾದ ರಾಹುಲ್
ಟೀಂ ಇಂಡಿಯಾ ಆರಂಭಿಕ ಜೋಡಿ ಯಶಸ್ಸು ಸಿಗದೇ ಇದ್ದಾಗ, ಇಂಗ್ಲೆಂಡ್ ಪ್ರವಾಸದಲ್ಲಿ ಕೆ.ಎಲ್ ರಾಹುಲ್ ಅವರನ್ನು ವಾಪಸ್ ಕರೆಸಲಾಗಿತ್ತು. ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಅರ್ಧಶತಕ ಮತ್ತು ಲಾರ್ಡ್ಸ್‌ನಲ್ಲಿ ಶತಕ ಸೇರಿದಂತೆ ನಾಲ್ಕು ಪಂದ್ಯಗಳಲ್ಲಿ ರಾಹುಲ್ 315 ರನ್ ಕಲೆಹಾಕಿದ್ರು. ಈ ಮೂಲಕ ಕೆ.ಎಲ್ ರಾಹುಲ್ ವೃತ್ತಿ ಜೀವನದಲ್ಲಿ ಆ ಸರಣಿಯು ಮಹತ್ವದ ತಿರುವು ತಂದುಕೊಟ್ಟಿತು.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ರು. ಆ ಮೂಲಕ ಕೆ.ಎಲ್ ರಾಹುಲ್ ತಂಡದಲ್ಲಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಂಡ್ರು.

ವರ್ಷದ ಹಿಂದೆ ನಾನು ಮತ್ತೆ ಟೆಸ್ಟ್ ಕ್ರಿಕೆಟ್ ಆಡುತ್ತೇನೆ ಎಂದುಕೊಂಡಿರ್ಲಿಲ್ಲ!
ಭಾರತ ಕ್ರಿಕೆಟ್ ತಂಡದ ಉಪನಾಯಕತ್ವದ ಬಗ್ಗೆ ಮಯಾಂಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, "ಆರು, ಏಳು ತಿಂಗಳ ಹಿಂದೆ ಅಥವಾ ಒಂದು ವರ್ಷದ ಹಿಂದೆ ನಾನು ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್ ಆಡುತ್ತೇನೆ ಎಂದು ಭಾವಿಸಿರಲಿಲ್ಲ . ಆದ್ರೀಗ ನನಗೆ ಅಂತಹ ದೊಡ್ಡ ಜವಾಬ್ದಾರಿ ನೀಡಿರುವುದಕ್ಕೆ ತುಂಬಾ ಗೌರವವಾಗಿದೆ, ನಾನು ಸಂತೋಷಗೊಂಡಿದ್ದು, ಕೃತಜ್ಞನಾಗಿದ್ದೇನೆ. ತಂಡವು ಹೆಚ್ಚಿನ ಯಶಸ್ಸನ್ನು ಸಾಧಿಸಲು ನಾನು ಪ್ರಯತ್ನಿಸುತ್ತೇನೆ ಮತ್ತು ಸಹಾಯ ಮಾಡುತ್ತೇನೆ'' ಎಂದಿದ್ದಾರೆ.
ಟೀಂ ಇಂಡಿಯಾ ಉಪನಾಯಕತ್ವ ಪಟ್ಟ ಸಿಕ್ಕಿರುವುದು ನಿಜಕ್ಕೂ ದೊಡ್ಡ ಗೌರವವಾಗಿದೆ ಎಂದು ಹೇಳಿರುವ ಕೆ.ಎಲ್ ರಾಹುಲ್ ತಂಡದ ಯಶಸ್ಸಿಗೆ ಹೆಚ್ಚು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications