
ಪಾರ್ಟಿಯಲ್ಲಿ ಕುಡಿದು ಬಿದ್ರಾ ಗ್ಲೆನ್ ಮ್ಯಾಕ್ಸ್‌ವೆಲ್?
ನವೆಂಬರ್ 19, ಶನಿವಾರ ರಾತ್ರಿ ಗ್ಲೆನ್ ಮ್ಯಾಕ್ಸ್‌ವೆಲ್ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಈ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಮ್ಯಾಕ್ಸ್‌ವೆಲ್ ಬಿದ್ದು ಕಾಲು ಮುರಿದುಕೊಂಡರು. ಈ ಘಟನೆ ಬೆಳಕಿಗೆ ಬಂದ ಮೇಲೆ ಮಾದ್ಯಮಗಳು ನಾನಾ ರೀತಿಯಲ್ಲಿ ವರದಿ ಮಾಡಿದ್ದವು. ಕುಡಿದು ಬಿದ್ದು ಮ್ಯಾಕ್‌ವೆಲ್ ಕಾಲು ಮುರಿದುಕೊಂಡಿರಬಹುದು ಎಂಬೆಲ್ಲಾ ಸುದ್ದಿ ಹರಿದಾಡಿತು. ಈ ಅಪಘಾತದಿಂದಾಗಿ ಮ್ಯಾಕ್ಸ್‌ವೆಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳಲು ಸುರ್ದೀಘ ಕಾಲದ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂಗ್ಲೆಂಡ್ ಗರ್ವ ಭಂಗ: ಅಂತಿಮ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾಗೆ ಅಮೋಘ ವಿಜಯ

ಅಪಘಾತಕ್ಕೆ ಕಾರಣ ತಿಳಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
ಆದ್ರೀಗ ಮ್ಯಾಕ್ಸ್‌ವೆಲ್ ಕಾಲು ಮುರಿತಕ್ಕೆ ಸ್ವತ್ವ ಅವರೇ ಕಾರಣ ಏನೆಂದು ತಿಳಿಸಿದ್ದಾರೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಗಿದ್ದೇನು ಎಂಬುದನ್ನ ಬಹಿರಂಗಪಡಿಸಿದ್ದಾರೆ.
''ನನ್ನ ಸಹಪಾಟಿಯಲ್ಲೊಬ್ಬ, ಯಾರೂ ನನ್ನ ಸ್ಕೂಲ್ ಟೀಚರ್ ಕೂಡ ಆಗಿದ್ದರೋ ಅವರ ಜೊತೆಯಲ್ಲಿ ಮಾತನಾಡುತ್ತಾ, ನಗುತ್ತಾ ಸಮಯ ಕಳೆಯುತ್ತಿದ್ದೆನು. ಏನೋ ಒಂದು ವಿಚಾರಕ್ಕೆ ಆತನನ್ನು ನಾನು ಬೆನ್ನಟ್ಟಿದೆ. ಕೇವಲ ಮೂರು ಅಥವಾ ನಾಲ್ಕು ಹೆಜ್ಜೆಗಳನ್ನಷ್ಟೇ ಇಟ್ಟಿರಬಹುದು, ಇಬ್ಬರು ಒಂದೇ ಸಮಯದಲ್ಲಿ ಜಾರಿಬಿಟ್ಟೆವು. ನನ್ನ ಕಾಲು ಸ್ವಲ್ಪ ಜಾರಿತು, ಮತ್ತು ದುರಾದೃಷ್ಟವಶಾತ್ ಆತ ಕೆಟ್ಟ ರೀತಿಯಲ್ಲಿ ಬಿದ್ದಿದ್ದಲ್ಲದೆ, ಸೀದಾ ನನ್ನ ಕಾಲಿನ ಮೇಲೆ ಜಾರಿಬಿದ್ದನು'' ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
'' ತಕ್ಷಣವೇ ನನ್ನ ದೇಹದ ಪ್ರತಿಯೊಂದು ಭಾಗವೂ ನೋವಾದಂತೆ ಭಾಸವಾಯಿತು. ಅದು ತುಂಬಾ ನೋವಾಗಿತ್ತು. ನಾನು ನೋವಿನಿಂದ ಅರಚುತ್ತಿದ್ದೆನು, ಆತ ನೀನು ತಮಾಶೆ ಮಾಡುತ್ತಿಲ್ಲ ತಾನೇ, ಎಂದು ಪದೇ ಪದೇ ಕೇಳಿದ'' ಎಂದು ಮ್ಯಾಕ್ಸ್‌ವೆಲ್ ಸನ್ನಿವೇಶವನ್ನು ವಿವರಿಸಿದ್ದಾರೆ.
ಬಲಿಷ್ಠ ಅರ್ಜೆಂಟೀನಾಗೆ ಸೋಲು:ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕಂಡಂತಹ ಅಚ್ಚರಿಯ ಫಲಿತಾಂಶಗಳು

ಈ ಘಟನೆಯಿಂದಾಗಿ ಎಲ್ಲಕ್ಕಿಂತ ಹೆಚ್ಚು ನಿರಾಸೆಯಾಗಿದೆ ಎಂದ ಮ್ಯಾಕ್ಸ್‌ವೆಲ್
ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನನ್ನು ಉತ್ತಮವಗಿ ಸಾಭೀತುಪಡಿಸಬೇಕು ಎಂದು ಗುರಿ ನೆಟ್ಟಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಶೆಫೀಲ್ಡ್ ಶೀಲ್ಡ್ ಪಂದ್ಯಗಳಲ್ಲಿ ವಿಕ್ಟೋರಿಯಾ ಪರ ಕಣಕ್ಕಿಳಿಯಲು ಎದುರು ನೋಡುತ್ತಿದ್ದರು. ಆದ್ರೀಗ ಎಲ್ಲಾ ಪಂದ್ಯಗಳನ್ನ ಕಳೆದುಕೊಂಡಿದ್ದರ ಜೊತೆಗೆ ಭಾರತದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೂಡ ಮ್ಯಾಕ್ಸ್‌ವೆಲ್ ಭಾಗಿವಹಿಸುವುದು ಅನುಮಾನವಾಗಿದೆ. ಈ ಘಟನೆಯಿಂದಾಗಿ ಮ್ಯಾಕ್ಸ್‌ವೆಲ್ ಮತ್ತಷ್ಟು ನಿರಾಸೆಗೊಂಡಿದ್ದಾರೆ.
''ಇದು ನಿಜಕ್ಕೂ ನಿರಾಶದಾಯಕ ವಿಚಾರವಾಗಿದೆ. ಆನ್ ಫೀಲ್ಡ್‌ನಲ್ಲಿ ಕೆಲವೊಂದು ತಪ್ಪುಗಳನ್ನು ನಾನು ಮಾಡಿದೆ. ಇದೀಗ ಆಫ್ ಫೀಲ್ಡ್‌ನಲ್ಲಿ ಕೆಲವು ದಡ್ಡತನದ ಕೆಲಸ ಮಾಡಿದ್ದೇನೆ. ನಾನು ಇದುವರೆಗೆ ನನಗೆ ನಾನೇ ಸ್ವತಃ ಇಂಜ್ಯುರಿ ಮಾಡಿಕೊಂಡಿದ್ದ ಉದಾಹರಣೆ ಇಲ್ಲ. ಆದ್ರೆ ಅದು ಕೇವಲ ಸ್ವಲ್ಪ ಜಾರಿದ್ದಷ್ಟೇ ಆಗಿತ್ತು ಮತ್ತು ಕೆಲವೊಂದು ತಿಂಗಳು ಕಾಲ ಸುಧಾರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ'' ಎಂದು 34 ವರ್ಷದ ಮ್ಯಾಕ್ಸ್‌ವೆಲ್ ದುರದೃಷ್ಟಕರ ಘಟನೆ ಕುರಿತಾಗಿ ಮಾತನಾಡಿದ್ದಾರೆ.


Click it and Unblock the Notifications












