Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ಇದ್ದರು ಎಂದ ಮಾಜಿ ವೇಗಿ ಅಖ್ತರ್

I was surrounded by fixers such as Aamir and Asif, says Akhtar

ಬೆಂಗಳೂರು, ನವೆಂಬರ್ 03: 'ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ತುಂಬಿದ್ದರು. ಎದುರಾಳಿ ತಂಡದ 11 ಆಟಗಾರರೊಂದಿಗೆ ನನ್ನ ತಂಡದ 10 ಆಟಗಾರರ ವಿರುದ್ಧವೂ ಸೆಣಸಬೇಕಾಗಿತ್ತು ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

2011ರ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರೋಪಿಗಳಾದ ಸಲ್ಮಾನ್ ಬಟ್, ವೇಗಿ ಮೊಹಮ್ಮದ್ ಆಮಿರ್, ಮೊಹಮ್ಮದ್ ಆಸಿಫ್ ಅವರ ಜೊತೆ ಆಡಿದ್ದ ಅಖ್ತರು ನಿಷೇಧಕ್ಕೆ ಒಳಗಾದ ಆಟಗಾರರ ಬಗ್ಗೆ ಮಾತನಾಡಿದರು.

ಪ್ರತಿ ಬಾರಿ ಮೈದಾನಕ್ಕೆ ಇಳಿದರೆ 21 ಆಟಗಾರರ ವಿರುದ್ಧ ಸೆಣಸಬೇಕಾಗಿತ್ತು. ಯಾರು ಮ್ಯಾಚ್ ಫಿಕ್ಸರ್ ಗಳೇ ತುಂಬಿದ್ದರು. ಆಸಿಫ್ ಮಾತ್ರ ಒಮ್ಮೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದ, ನಾನು ಪಾಕಿಸ್ತಾನಕ್ಕೆ ಎಂದಿಗೂ ಮೋಸ ಮಾಡುವುದಿಲ್ಲ ಎಂಬ ನಂಬಿಕೆ ನನ್ನಲ್ಲಿತ್ತು ಎಂದು 'ರಿವೈಂಡ್ ವಿಥ್ ಸಮೀನಾ ಪೀರ್ಜಾದಾ ಶೋದಲ್ಲಿ ಅಖ್ತರ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊಹಮ್ಮದ್ ಆಮಿರ್ ಹಾಗೂ ಆಸಿಫ್ ಭ್ರಷ್ಟಾಚಾರದಲ್ಲಿ ತೊಡಗಿರುವುದು ಗೊತ್ತಾಯ್ತು. ಇಬ್ಬರಿಗೂ ಪ್ರತಿಭೆಯಿತ್ತು. ಇಂಥ ಕೃತ್ಯದಲ್ಲಿ ತೊಡಗಿ ವೃತ್ತಿ ಬದುಕು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು ಎಂದು 44 ವರ್ಷ ವಯಸ್ಸಿನ ವೇಗಿ ಅಖ್ತರ್ ಹೇಳಿದರು.

ಸಲ್ಮಾನ್ ಬಟ್, ವೇಗಿ ಮೊಹಮ್ಮದ್ ಆಮಿರ್, ಮೊಹಮ್ಮದ್ ಆಸಿಫ್ ಮೂವರು ನಿಷೇಧಕ್ಕೊಳಗಾದರು. ನಂತರ ಮೊಹಮ್ಮದ್ ಆಮಿರ್ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮತ್ತೆ ಮರಳಲು ಸಾಧ್ಯವಾಯಿತು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಯಿತು. ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದಲ್ಲಿದ್ದರು.

Story first published: Sunday, November 3, 2019, 12:55 [IST]
Other articles published on Nov 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+