Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ಗೆ ಮುನ್ನ ನಡೆಯುವ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಮುನ್ನ ಐಸಿಸಿ ಎಲ್ಲಾ 16 ತಂಡಗಳ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಎಲ್ಲಾ ಅಭ್ಯಾಸ ಪಂದ್ಯಗಳು ಮೆಲ್ಬೋರ್ನ್ ಮತ್ತು ಬ್ರಿಸ್ಬೇನ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೊದಲ ಸುತ್ತಿನ ತಂಡಗಳು ತಮ್ಮ ಅಭ್ಯಾಸ ಪಂದ್ಯಗಳನ್ನು ಅಕ್ಟೋಬರ್ 10 ಮತ್ತು 13 ರ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಮತ್ತು ಜಂಕ್ಷನ್ ಓವಲ್‌ನಲ್ಲಿ ಆಡಲಿವೆ. ಸೂಪರ್ 12 ಸುತ್ತಿಗೆ ನೇರವಾಗಿ ಅರ್ಹತೆ ಪಡೆದಿರುವ ತಂಡಗಳು ಅಕ್ಟೋಬರ್ 17 ಮತ್ತು 19 ರಂದು ಬ್ರಿಸ್ಬೇನ್‌ನಲ್ಲಿ ತಮ್ಮ ಅಭ್ಯಾಸ ಪಂದ್ಯಗಳನ್ನು ಆಡಲಿವೆ.

ಅಕ್ಟೋಬರ್ 10 ರಂದು ವೆಸ್ಟ್ ಇಂಡೀಸ್ ಮತ್ತು ಯುಎಇ ನಡುವೆ ಜಂಕ್ಷನ್ ಓವಲ್‌ನಲ್ಲಿ ಮೊದಲ ಅಭ್ಯಾಸ ಪಂದ್ಯ ನಡೆಯಲಿದೆ. ಸ್ಕಾಟ್ಲೆಂಡ್-ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ-ಜಿಂಬಾಬ್ವೆ ನಡುವಿನ ಪಂದ್ಯಗಳು ಒಂದೇ ದಿನ ನಡೆಯಲಿವೆ. ಅಕ್ಟೋಬರ್ 16ರಿಂದ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. ಭಾರತ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

 ಟೀಂ ಇಂಡಿಯಾಗೆ ಎರಡು ಅಭ್ಯಾಸ ಪಂದ್ಯ

ಟೀಂ ಇಂಡಿಯಾಗೆ ಎರಡು ಅಭ್ಯಾಸ ಪಂದ್ಯ

ಅಭ್ಯಾಸ ಪಂದ್ಯಗಳು ಅಧಿಕೃತ ಟಿ20 ಅಂತರಾಷ್ಟ್ರೀಯ ಸ್ಥಾನಮಾನವನ್ನು ಹೊಂದಿರುವುದಿಲ್ಲ. ಅಕ್ಟೋಬರ್ 16 ರಂದು ಶ್ರೀಲಂಕಾ ನಮೀಬಿಯಾವನ್ನು ಎದುರಿಸುವುದರೊಂದಿಗೆ ಪ್ರಮುಖ ಪಂದ್ಯಾವಳಿಯು ಗೀಲಾಂಗ್‌ನಲ್ಲಿ ಪ್ರಾರಂಭವಾಗುತ್ತದೆ.

ಆತಿಥೇಯ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಮೊದಲ ಮತ್ತು ಏಕೈಕ ಅಭ್ಯಾಸ ಪಂದ್ಯವನ್ನು ಭಾರತದ ವಿರುದ್ಧ ಅಕ್ಟೋಬರ್ 17 ರಂದು ಗಬ್ಬಾದಲ್ಲಿ ಆಡುತ್ತದೆ. ಭಾರತವು ಎರಡು ದಿನಗಳ ನಂತರ ಅದೇ ಸ್ಥಳದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಆಡಲಿದೆ.

ಪಾಕ್ vs ಅಫ್ಘಾನ್: ಎಲ್ಲೆ ಮೀರಿದ ಅಭಿಮಾನಿಗಳ ವರ್ತನೆ: ರೋಚಕ ಸೆಣೆಸಾಟದ ಬಳಿಕ ಸ್ಟೇಡಿಯಂನಲ್ಲಿ ಭಾರೀ ದಾಂಧಲೆ

 ಅಭ್ಯಾಸ ಪಂದ್ಯಗಳ ವೇಳಾಪಟ್ಟಿ

ಅಭ್ಯಾಸ ಪಂದ್ಯಗಳ ವೇಳಾಪಟ್ಟಿ

ಅಕ್ಟೋಬರ್ 10, ಜಂಕ್ಷನ್ ಓವಲ್‌ನಲ್ಲಿ ಸ್ಥಳಿಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ವೆಸ್ಟ್ ಇಂಡೀಸ್ ವಿರುದ್ಧ ಯುಎಇ ಪಂದ್ಯ ನಡೆಯಲಿದೆ. ಜಂಕ್ಷನ್ ಓವಲ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಸ್ಕಾಟ್ಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್ ಸೆಣೆಸಲಿದೆ. ಸಂಜೆ 7 ಗಂಟೆಗೆ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ ಆಡಲಿದ್ದು, ಎಂಸಿಜಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಅಕ್ಟೋಬರ್ 11 ರಂದು ಸಂಜೆ 7 ಗಂಟೆಗೆ ಎಂಸಿಜಿ ಕ್ರೀಡಾಂಗಣದಲ್ಲಿ ನಮೀಬಿಯಾ ವಿರುದ್ಧ ಐರ್ಲೆಂಡ್ ಪಂದ್ಯ ನಡೆಯಲಿದೆ.

ಅಕ್ಟೋಬರ್ 12ರಂದು ಸಂಜೆ 7 ಗಂಟೆಗೆ ಎಂಸಿಜಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ -ನೆದರ್ಲ್ಯಾಂಡ್ಸ್ ಪಂದ್ಯ ನಡೆಯಲಿದೆ.

ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಜಿಂಬಾಬ್ವೆ v ನಮೀಬಿಯಾ ಪಂದ್ಯ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾ v ಐರ್ಲೆಂಡ್ ಪಂದ್ಯ ನಡೆಯಲಿದೆ. ಎರಡೂ ಪಂದ್ಯಗಳು ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಸಂಜೆ 7 ಗಂಟೆಗೆ ಎಂಸಿಜಿ ಕ್ರೀಡಾಂಗಣದಲ್ಲಿ ಸ್ಕಾಟ್ಲೆಂಡ್ v ಯುಎಇ ಪಂದ್ಯ ನಡೆಯಲಿದೆ

ಸ್ಟೇಡಿಯಂನಲ್ಲಿ ಕಿತ್ತಾಡಿ , ಧ್ವಂಸ ಮಾಡಿದ ಅಭಿಮಾನಿಗಳು | Oneindia Kannada
 ಸೂಪರ್ 12 ಗುಂಪಿನ ಅರ್ಹತಾ ಪಂದ್ಯ

ಸೂಪರ್ 12 ಗುಂಪಿನ ಅರ್ಹತಾ ಪಂದ್ಯ

ಅಕ್ಟೋಬರ್ 17ರಂದು ಮಧ್ಯಾಹ್ನ 2 ಗಂಟೆಗೆ ಗಬ್ಬಾದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಅಲನ್ ಬಾರ್ಡರ್ ಫೀಲ್ಡ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಆಡಲಿದ್ದು, ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಅಕ್ಟೋಬರ್ 17, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ, ಗಬ್ಬಾ, ಸಂಜೆ 6 ಗಂಟೆಗೆ, ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ, ಅಲನ್ ಬಾರ್ಡರ್ ಫೀಲ್ಡ್, ಸಂಜೆ 6 ಗಂಟೆಗೆ ಪಂದ್ಯ ಆರಂಭ.

ಅಕ್ಟೋಬರ್ 19, ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ, ಗಬ್ಬಾ, ಮಧ್ಯಾಹ್ನ 1 ಗಂಟೆಗೆ, ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ, ಅಲನ್ ಬಾರ್ಡರ್ ಫೀಲ್ಡ್, ಸಂಜೆ 6 ಗಂಟೆಗೆ, ನ್ಯೂಜಿಲೆಂಡ್ ವಿರುದ್ಧ ಭಾರತ, ಗಬ್ಬಾ, ಸಂಜೆ 6 ಗಂಟೆಗೆ ಆರಂಭ.

Story first published: Thursday, September 8, 2022, 16:52 [IST]
Other articles published on Sep 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+