Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್ vs ಅಫ್ಘಾನ್: ಎಲ್ಲೆ ಮೀರಿದ ಅಭಿಮಾನಿಗಳ ವರ್ತನೆ: ರೋಚಕ ಸೆಣೆಸಾಟದ ಬಳಿಕ ಸ್ಟೇಡಿಯಂನಲ್ಲಿ ಭಾರೀ ದಾಂಧಲೆ

Pak vs Afg: Fans clash between Afghanistan and Pakistan Shocking videos

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಸೂಪರ್ 4 ಹಂತದ ಸೆಣೆಸಾಟ ಈ ಟೂರ್ನಿಯ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿದೆ. ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿ ನಡೆಸಿದ್ದು ಅಂತಿಮ ಹಂತದವರೆಗೂ ತೀವ್ರ ಸೆಣೆಸಾಟ ನಡೆಸಿದೆ. ಈ ಪೈಪೋಟಿಯ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬೌಲರ್ ಫರೀದ್ ಅಹ್ಮದ್ ಹಾಗೂ ಆಸಿಫ್ ಅಲಿ ನಡುವಿನ ಒಂದು ಅಹಿತಕರ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿರುವ ಹೊತ್ತಿನಲ್ಲೇ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ವರ್ತನೆಯ ವಿಡಿಯೋಗಳು ಹೊರಬಂದಿದ್ದು ಆಘಾತವುಂಟು ಮಾಡುವಂತಿದೆ.

ಈ ಪಂದ್ಯ ರೋಚಕವಾಗಿ ಮುಕ್ತಾಯವಾಗಿ ಪಾಕಿಸ್ತಾನ ಅಮೋಘ ಗೆಲುವು ಸಾಧಿಸಿತು. ಈ ಫಲಿತಾಂಶದ ಬಳಿಕ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಯಾರೂ ನಿರೀಕ್ಷಿಸದ ರೀತಿಯ ಘಟನೆಗಳು ನಡೆದಿದೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳ ಅಭಿಮಾನಿಗಳು ಭಾರೀ ದಾಂಧಲೆಯನ್ನೇ ನಡೆಸಿದ್ದಾರೆ. ಮಾತ್ರವಲ್ಲ ಪರಸ್ಪರ ಹಲ್ಲೆಯನ್ನು ಕೂಡ ನಡೆಸಿರುವ ವಿಡಿಯೋಗಳು ಬಹಿರಂಗವಾಗಿದೆ.

ಒಂದು ದೃಶ್ಯದಲ್ಲಿ ಸ್ಟೇಡಿಯಂನ ಆಸನಗಳನ್ನು ಕಿತ್ತು ಎಸೆದು ದಾಂಧಲೆ ಮಾಡುತ್ತಿರುವ ದೃಶ್ಯಗಳಿದ್ದರೆ ಮತ್ತೊಂದೆಡೆ ಪಾಕಿಸ್ತಾನದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕೂಡ ಇದೆ. ಇನ್ನು ಈ ಕಾದಾಟ ಸ್ಟೇಡಿಯಂನಲ್ಲಿ ಮಾತ್ರವಲ್ಲದೆ ಶಾರ್ಜಾ ಸ್ಟೇಡಿಯಂನ ಆಚೆಹೂ ನಡೆದಿದ್ದು ಪ್ರತ್ಯೇಕ ಗುಂಪುಗಳ ಮಧ್ಯೆ ಭಾರೀ ಕಾದಾಟಗಳು ನಡೆದಿರುವುದು ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದೆ.

ರೋಚಕವಾಗಿ ಅಂತ್ಯವಾದ ಪಂದ್ಯ: ಅಫ್ಘಾನಿಸ್ತಾನ ವಿರುದ್ಧದ ಸೂಪರ್ 4 ಹಂತದ ಈ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಅಂತಿಮ ಓವರ್‌ನಲ್ಲಿ 11 ರನ್‌ಗಳ ಅವಶ್ಯಕತೆಯಿತ್ತು. ಪಾಕಿಸತಾನದ ಕೈಯಲ್ಲಿ ಕೇವಲ ಒಂದು ವಿಕೆಟ್ ಮಾತ್ರವೇ ಇತ್ತು. ಹೀಗಾಘಿ ಅಫ್ಘಾನಿಸ್ತಾನ ಪಂದ್ಯದಲ್ಲಿ ಬಹುತೇಕ ಹಿಡಿತ ಸಾಧಿಸಿತ್ತು. ಆದರೆ ಫಾರೂಕಿ ಎಸೆದ ಅಂತಿಮ ಓವರ್‌ನಲ್ಲಿ ನಸೀಮ್ ಶಾ ಎರಡು ಸಿಕ್ಸರ್ ಬಾರಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ರೋಮಾಂಚಕಾರಿ ಗೆಲುವು ಸಾರಿದರು. ಈ ಮೂಲಕ ಪಾಕಿಸ್ತಾನ ಫೈನಲ್‌ಗೆ ಪ್ರವೇಶ ಪಡೆದರೆ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಟೂರ್ನಿಯಿಂದ ಹೊರಬಿದ್ದವು.

Story first published: Thursday, September 8, 2022, 11:47 [IST]
Other articles published on Sep 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+