ಕ್ರಿಕೆಟ್: ಆಟದ ನಿಯಮಾವಳಿಗಳಲ್ಲಿ ಭಾರಿ ಬದಲಾವಣೆ ತಂದ ಐಸಿಸಿ

ದುಬೈ, ಸೆಪ್ಟೆಂಬರ್ 29: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕ್ರಿಕೆಟ್ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ.

ಡಕ್ವರ್ಥ್ ಲೂಯಿಸ್ ಸ್ಟರ್ನ್ ಸಿಸ್ಟಂ ಸೇರಿದಂತೆ ನೀತಿ ಸಂಹಿತೆಯ ಕುರಿತಾದ ಕಾನೂನುಗಳಲ್ಲಿ ಸಹ ಬದಲಾವಣೆಗಳನ್ನು ತರಲಾಗಿದೆ.

ಆಟಗಾರರು ಮತ್ತು ಆಟಗಾರರಿಗೆ ನೆರವು ನೀಡುವ ಸಿಬ್ಬಂದಿಯ ನೀತಿ ಸಂಹಿತೆಗೆ ನಾಲ್ಕು ಹೊಸ ಅಪರಾಧಗಳನ್ನು ಅಳವಡಿಸಲಾಗಿದೆ.

ನ್ಯಾಯಯುತವಲ್ಲದ ಲಾಭ ಪಡೆಯಲು ನಡೆಸುವ ಯಾವುದೇ ಪ್ರಯತ್ನ ಮತ್ತು ವೈಯಕ್ತಿಕ ನಿಂದನೆಗಳು ಇನ್ನು ಮುಂದೆ 2 ಅಥವಾ 3ನೇ ಹಂತದ ಅಪರಾಧ ಎನಿಸಿಕೊಳ್ಳಲಿವೆ. ಆಟಗಾರ ಅಂಪೈರ್ ಸೂಚನೆಯನ್ನು ಅಗೌರವಿಸಿದರೆ ಅಥವಾ ಯಾವುದಾದರೂ ಅಶ್ಲೀಲ ಮಾತುಗಳು ಕೇಳಿಸಿದರೆ ಅದನ್ನು 1ನೇ ಹಂತದ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಏಷ್ಯಾ ಕಪ್: ಭಾರತ-ಬಾಂಗ್ಲಾದೇಶ ಪಂದ್ಯದ ಕುತೂಹಲಕಾರಿ ಅಂಕಿ ಅಂಶಗಳು

3ನೇ ಹಂತದ ಅಪರಾಧಕ್ಕೆ ಇದ್ದ ಗರಿಷ್ಠ ಶಿಕ್ಷೆಯ ಎಂಟು ಅಮಾನತ್ತಿನ ಪಾಯಿಂಟ್‌ಗಳನ್ನು 12ಕ್ಕೆ ಏರಿಸಲಾಗಿದೆ. ಅಂದರೆ, ಇದರಿಂದ ತಪ್ಪಿತಸ್ಥ ಆಟಗಾರರು 12 ಏಕದಿನ ಅಥವಾ ಆರು ಟೆಸ್ಟ್ ಪಂದ್ಯಗಳ ನಿಷೇಧಕ್ಕೆ ಒಳಗಾಗುತ್ತಾರೆ.

ಯಾವುದೇ 1,2 ಅಥವಾ 3 ಹಂತದ ಆರೋಪಗಳ ಕುರಿತು ಪಂದ್ಯದ ರೆಫರಿ ವಿಚಾರಣೆ ನಡೆಸಿದರೆ, 4ನೇ ಹಂತದ ಆರೋಪಗಳು ಮತ್ತು ಮನವಿಗಳನ್ನು ಮಾತ್ರ ನ್ಯಾಯಾಂಗ ಕಮಿಷನರ್ ವಿಚಾರಣೆಗೆ ಒಳಪಡಿಸುತ್ತಾರೆ.

ಟೆಸ್ಟ್ ಪಂದ್ಯಗಳಲ್ಲಿ ಸ್ವಲ್ಪ ಹೆಚ್ಚುವರಿ ಸಮಯದ ಆಟಕ್ಕೆ ಅವಕಾಶ ನೀಡಲಾಗಿದ್ದರೆ, ಏಕದಿನ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ನಡುವಿನ ವಿರಾಮದ ಅವಧಿಯನ್ನು ವಿಸ್ತರಿಸಲಾಗಿದೆ.

ಟೆಸ್ಟ್ ಪಂದ್ಯ (ನಿಯಮ 11.7)

ಟೆಸ್ಟ್ ಪಂದ್ಯ (ನಿಯಮ 11.7)

ಊಟ ಅಥವಾ ಚಹಾ ವಿರಾಮಕ್ಕೆ ಮೂರು ನಿಮಿಷ ಇರುವ ಮುನ್ನ ಅಥವಾ ಮೊದಲೇ ತಂಡವೊಂದರ 9 ವಿಕೆಟ್ ಪತನಗೊಂಡಿದ್ದರೆ ಅಥವಾ ನಿಗದಿತ ವಿರಾಮದ ಅವಧಿ ವೇಳೆಗೆ ಕೊನೆಯ ಎಸೆತ ಬಾಕಿ ಇದ್ದರೆ, 12.5.2ರ ನಿಯಮ ಅನ್ವಯವಾಗುವುದಿಲ್ಲ. ಓವರ್ ಅಂತ್ಯವಾಗುವವರೆಗೂ ಅಥವಾ 30 ನಿಮಿಷಗಳವರೆಗೂ ವಿರಾಮ ತೆಗೆದುಕೊಳ್ಳುವುದಿಲ್ಲ.

ಏಷ್ಯಾ ಕಪ್ 2018 ಫೈನಲ್: ಮೂರು ವಿಭಿನ್ನ ಸಂಭ್ರಮಾಚರಣೆಗಳ ಸುತ್ತ!

ಒಂದು ವೇಳೆ ಪಂದ್ಯ ಗೆಲ್ಲಲು ಕೆಲವೇ ರನ್‌ಗಳ ಅಗತ್ಯವಿದ್ದರೆ, ಎರಡೂ ತಂಡಗಳ ನಾಯಕರು ನಿಶ್ಚಿತ ಫಲಿತಾಂಶಕ್ಕಾಗಿ ಆಡಲು ಬಯಸಿದ್ದರೆ, ಪಂದ್ಯ ಮುಗಿಯುವವರೆಗೆ ಅಥವಾ ಆಟಗಾರರು ಬೇರೆ ಯಾವುದೋ ಕಾರಣಕ್ಕೆ ಮೈದಾನದಿಂದ ಹೊರಹೋಗುವಂತಾಗುವವರೆಗೂ 30 ನಿಮಿಷ ಹೆಚ್ಚುವರಿ ಸಮಯ ಆಡಲು ಅವಕಾಶವಿದೆ.

ಬ್ಯಾಟ್ಸ್‌ಮನ್‌ನ ನಿವೃತ್ತಿಯನ್ನು ವಿಕೆಟ್ ಪತನದ ಅವಧಿಗೆ ಸಮನಾಗಿ ಪರಿಗಣಿಸಲು ಸಾಧ್ಯವಿಲ್ಲ.

ಹೆಚ್ಚುವರಿ ಸಮಯ (ನಿಯಮ 12.8)

ಹೆಚ್ಚುವರಿ ಸಮಯ (ನಿಯಮ 12.8)

ಟೆಸ್ಟ್ ಪಂದ್ಯದ ಯಾವುದೇ ದಿನದ ಅಂತ್ಯಕ್ಕೆ (12.8.1) ಹೆಚ್ಚುವರಿ ಅವಧಿ ಆಡಲು ನಾಯಕ ಮನವಿ ಮಾಡಿದರೆ ಅಥವಾ ಅಂಪೈರ್ ಅಭಿಪ್ರಾಯದಂತೆ ಆ ದಿನ ಫಲಿತಾಂಶ ಬರುವುದು ನಿಶ್ಚಿತ ಎಂಬುದಾದರೆ 30 ನಿಮಿಷಗಳ (ಕನಿಷ್ಠ 8 ಓವರ್‌) ಆಟ ಆಡಿಸಲು ಅಂಪೈರ್ ನಿರ್ಧರಿಸಬಹುದು.

ಫಲಿತಾಂಶ ಬರುವುದು ಸಾಧ್ಯವಿಲ್ಲ ಎಂದು ಅಂಪೈರ್‌ಗಳಿಗೆ ಅನಿಸಿದರೆ ಅವರು ಹೆಚ್ಚುವರಿ ಸಮಯದ ಅವಕಾಶ ನೀಡುವ ಅಗತ್ಯವಿಲ್ಲ.

ಈ ಹೆಚ್ಚುವರಿ ಅವಧಿ ಮುಗಿದ ಬಳಿಕವೂ ಗೆಲುವಿಗೆ ಅಲ್ಪ ಪ್ರಮಾಣದ ರನ್ ಅಗತ್ಯವಿದ್ದರೆ, ಮತ್ತು ಉಭಯ ತಂಡಗಳ ನಾಯಕರು ನಿಶ್ಚಿತ ಫಲಿತಾಂಶ ಪಡೆಯುವ ಸಲುವಾಗಿ ಆಡಲು ಬಯಸಿದರೆ, ಆಟ ಮುಂದುವರಿಸಲು ಅವಕಾಶವಿದೆ.

ಬಳಿಸಿಕೊಂಡ ಹೆಚ್ಚುವರಿ ಅವಧಿಯನ್ನು ಒಟ್ಟಾರೆಯಾಗಿ ಉಳಿದಿರುವ ಆಟದ ಅವಧಿಯಿಂದ ಕಡಿತಗೊಳಿಸಲಾಗುತ್ತದೆ. ಹೀಗಾಗಿ ಹಿಂದಿನ ದಿನಗಳಲ್ಲಿ ಅವಧಿ ಹೆಚ್ಚುವರಿಯಾಗಿ ಬಳಸಿಕೊಂಡಿದ್ದರೆ, ಅಂತಿಮ ದಿನದಂದು ಆ ಸಮಯವನ್ನು ಕಡಿತಗೊಳಿಸಬಹುದು.

ಹರ್ಷ ಭೋಗ್ಲೆ ಆಯ್ಕೆಯ ಏಷ್ಯಾ ಕಪ್ 2018 XIರಲ್ಲಿ ಧೋನಿ ಇಲ್ಲ

ಊಟ ಅಥವಾ ಚಹಾ ವಿರಾಮ (ನಿಯಮ 12.8.2)

ಊಟ ಅಥವಾ ಚಹಾ ವಿರಾಮ (ನಿಯಮ 12.8.2)

ನಿಖರ ಫಲಿತಾಂಶ ಬರುವ ನಿರೀಕ್ಷೆಯೊಂದಿಗೆ ತಂಡವೊಂದರ ನಾಯಕನ ಮನವಿ ಮೇರೆಗೆ ಅಥವಾ ಅಂಪೈರ್‌ಗಳ ಅಭಿಪ್ರಾಯದಂತೆ ನಿಗದಿತ ಊಟ ಅಥವಾ ಚಹಾ ಸಮಯದವರೆಗಿನ ಆಟವನ್ನು 15 ದಿನಗಳವರೆಗೆ ವಿಸ್ತರಿಸಲು ಅಂಪೈರ್ ನಿರ್ಧರಿಸಬಹುದು.

ಒಂದು ವೇಳೆ ಅಂಪೈರ್‌ಗಳಿಗೆ ಫಲಿತಾಂಶ ದೊರಕುವುದಿಲ್ಲ ಎನಿಸಿದರೆ ಹೆಚ್ಚುವರಿ ಸಮಯ ನೀಡುವ ಅಗತ್ಯವಿಲ್ಲ.

ತಂಡವೊಂದು 9 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಹೆಚ್ಚುವರಿ ಹದಿನೈದು ನಿಮಿಷ ಆಡಿಸಿದ ಬಳಿಕವೂ ಮತ್ತೆ ಹೆಚ್ಚಿನ ಸಮಯ ನೀಡಲಾಗುವುದಿಲ್ಲ.

ದಕ್ಷಿಣ ಆಫ್ರಿಕಾದ ವಿರುದ್ಧ ಈ ವರ್ಷ ನಡೆದ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಕೇವಲ ಎರಡು ರನ್ ಬೇಕಿದ್ದಾಗಲೂ ಅಂಪೈರ್‌ಗಳು ಊಟಕ್ಕೆ ವಿರಾಮ ತೆಗೆದುಕೊಂಡಿದ್ದು ತೀವ್ರ ಟೀಕೆಗೆ ಒಳಗಾಗಿತ್ತು. ಈ ಕಾರಣದಿಂದಾಗಿ ವಿರಾಮದ ಅವಧಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ವಿರಾಮದ ನಿಯಮ ಹೇಗೆ?

ವಿರಾಮದ ನಿಯಮ ಹೇಗೆ?

ನಿಗದಿತ ವಿರಾಮದ ಸಮಯಕ್ಕೂ ಮೊದಲೇ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಇನ್ನಿಂಗ್ಸ್ ಮುಗಿದರೆ ಕೂಡಲೇ ವಿರಾಮ ತೆಗೆದುಕೊಳ್ಳಬೇಕು. ಮತ್ತು ವಿರಾಮಕ್ಕೆ ನೀಡಿರುವ ಒಟ್ಟಾರೆ ಸಮಯ ಮುಗಿದ ಬಳಿಕ ಕೂಡಲೇ ಎರಡನೆಯ ಇನ್ನಿಂಗ್ಸ್ ಆರಂಭಿಸಬೇಕು.

ಒಂದು ವೇಳೆ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಇನ್ನಿಂಗ್ಸ್ 30 ನಿಮಿಷಕ್ಕೂ ಮೊದಲೇ ಮುಗಿದರೆ 10 ನಿಮಿಷದ ಬ್ರೇಕ್ ಬಳಿಕ ಎರಡನೆಯ ಇನ್ನಿಂಗ್ಸ್ ಆರಂಭಿಸಬೇಕು. ಮತ್ತು ಭೋಜನಾ ವಿರಾಮ ನಿಗದಿತ ಸಮಯಕ್ಕೇ ಆರಂಭವಾಗುತ್ತದೆ.

ಮೊದಲು ಬ್ಯಾಟಿಂಗ್ ಮಾಡುವ ತಂಡದ ಆಟ ವಿಳಂಬವಾದರೆ ಅಥವಾ ಅದಕ್ಕೆ ಅಡ್ಡಿಯುಂಟಾದರೆ, ವಿರಾಮದ ಅವಧಿಯ ಪ್ರಮಾಣವನ್ನು ಬದಲಿಸಲಾಗುತ್ತದೆ.

ಇದರ ಅಡಿಯಲ್ಲಿ ವಿರಾಮದ ಅವಧಿಯನ್ನು ಕಳೆದುಕೊಂಡ ಸಮಯದ ಅವಧಿಗೆ ಅನುಗುಣವಾಗಿ ಕಡಿತ ಮಾಡಬಹುದು.

ವಿರಾಮದ ಕನಿಷ್ಠ ಅವಧಿ 10 ನಿಮಿಷಕ್ಕಿಂತ ಕಡಿಮೆ ಇರುವಂತಿಲ್ಲ.

ನಿಗದಿತ ವಿರಾಮದ ಅವಧಿ ವೇಳೆಗೆ ಎರಡನೆಯ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ತಂಡ 9 ವಿಕೆಟ್ ಕಳೆದುಕೊಂಡಿದ್ದರೆ ಅಥವಾ 25ಕ್ಕಿಂತ ಹೆಚ್ಚು ರನ್ ಗೆಲುವಿಗೆ ಅಗತ್ಯವಿಲ್ಲದಿದ್ದರೆ ಫಲಿತಾಂಶ ಸಿಗುವವರೆಗೂ ಆಡಬಹುದು. ಇದಕ್ಕೆ ಪಂದ್ಯದ ರೆಫರಿ ವಿರಾಮದ ಅವಧಿಯನ್ನು ಕಡಿತಗೊಳಿಸಿ ಸಮಯ ಹೊಂದಾಣಿಕೆ ಮಾಡಬಹುದು.

ಡಕ್ವರ್ಥ್ ಲೂಯಿಸ್‌ನಲ್ಲಿ ಬದಲಾವಣೆ

ಡಕ್ವರ್ಥ್ ಲೂಯಿಸ್‌ನಲ್ಲಿ ಬದಲಾವಣೆ

ಪಂದ್ಯಕ್ಕೆ ಮಳೆ ಅಥವಾ ಇತರೆ ಕಾರಣಗಳಿಂದ ಅಡ್ಡಿಯಾದಾಗ ಓವರ್‌ಗಳಲ್ಲಿ ಮತ್ತು ರನ್‌ಗಳ ಗುರಿಯನ್ನು ನಿಗದಿ ಮಾಡುವ ಡಕ್ವರ್ಥ್ ಲೂಯಿಸ್ ವ್ಯವಸ್ಥೆಯಲ್ಲಿಯೂ ಕೆಲವು ಬದಲಾವಣೆ ಮಾಡಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ನಡೆದ 700 ಏಕದಿನ ಮತ್ತು 428 ಟಿ20 ಪಂದ್ಯಗಳಲ್ಲಿನ ರನ್ ಗಳಿಕೆ ಪ್ರಮಾಣವನ್ನು ವಿಶ್ಲೇಷಿಸಿರುವ ಐಸಿಸಿ, ರನ್ ಗಳಿಕೆಯ ಲೆಕ್ಕಾಚಾರದಲ್ಲಿ ಬದಲಾವಣೆ ತಂದಿದೆ.

ತಂಡಗಳು ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಿರುವುದರಿಂದ ಇನ್ನಿಂಗ್ಸ್‌ ಕೊನೆಯಲ್ಲಿ ಹೆಚ್ಚು ರನ್ ಗಳಿಸಬಹುದು ಎಂಬುದನ್ನು ಐಸಿಸಿ ಪರಿಗಣನೆಗೆ ತೆಗೆದುಕೊಂಡಿದೆ.

ಈ ಎಲ್ಲ ಬದಲಾವಣೆಗಳು ಸೆ.30ರಿಂದಲೇ ಅನ್ವಯವಾಗಲಿದೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳ ನಡುವೆ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಈ ನಿಯಮಗಳು ಜಾರಿಯಾಗಲಿವೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, September 29, 2018, 18:32 [IST]
Other articles published on Sep 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more