ಐಸಿಸಿ ಪುರುಷರ ಟಿ20 ವಿಶ್ವಕಪ್ 2022ಗೆ ಫೈನಲ್ ಆಗಿರುವ ತಂಡಗಳು
ಆತಿಥೇಯ ತಂಡ: ಆಸ್ಟ್ರೇಲಿಯಾ
2021ರ ICC ಪುರುಷರ T20 ವಿಶ್ವಕಪ್‌ನಿಂದ ಟಾಪ್ 11 ತಂಡಗಳು: ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನಮೀಬಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್
ಗ್ಲೋಬಲ್ ಕ್ವಾಲಿಫೈಯರ್ ಎ ನಿಂದ ಅಗ್ರ ಎರಡು ತಂಡಗಳು: ಐರ್ಲೆಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್
ಗ್ಲೋಬಲ್ ಕ್ವಾಲಿಫೈಯರ್ ಬಿ ನಿಂದ ಅಗ್ರ ಎರಡು ತಂಡಗಳು: ನೆದರ್ಲೆಂಡ್ಸ್ ಮತ್ತು ಜಿಂಬಾಬ್ವೆ
ಭಾರತ vs ಇಂಗ್ಲೆಂಡ್: ನಿರ್ಣಾಯಕ ಏಕದಿನ ಪಂದ್ಯದ ಪ್ರಿವ್ಯೂ, ಸಮಯ ಹಾಗೂ ಸಂಭಾವ್ಯ ತಂಡ
ಎರಡು ತಂಡಗಳು ವಿಶ್ವಕಪ್‌ಗೆ ಸೂಪರ್ 12 ಪ್ರವೇಶಿಸಲಿವೆ
ಎರಡು ಗುಂಪುಗಳನ್ನು ಒಳಗೊಂಡ ಮೊದಲ ಸುತ್ತಿನಲ್ಲಿ ಕೆಳಗಿನ ತಂಡಗಳು ಆಡುತ್ತವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 12 ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಸೇರಿಕೊಳ್ಳುತ್ತವೆ.
ಗ್ರೂಪ್ ಎ: ನಮೀಬಿಯಾ, ಶ್ರೀಲಂಕಾ, ಯುಎಇ, ನೆದರ್ಲೆಂಡ್ಸ್/ ಜಿಂಬಾಬ್ವೆ
ಗ್ರೂಪ್ ಬಿ: ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್, ನೆದರ್ಲೆಂಡ್ಸ್/ಜಿಂಬಾಬ್ವೆ
ದಕ್ಷಿಣ ಆಫ್ರಿಕಾ ವಿರುದ್ಧದ ODI, T20 ಸರಣಿಗೆ ತಂಡವನ್ನ ಘೋಷಿಸಿದ ಇಂಗ್ಲೆಂಡ್: ಆದಿಲ್ ರಶೀದ್ ಕಂಬ್ಯಾಕ್ 26025.html

ಏಳು ನಗರಗಳಲ್ಲಿ ವಿಶ್ವಕಪ್ ಪಂದ್ಯಗಳು
ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯುವ ವಿಶ್ವಕಪ್ ಪಂದ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಏಳು ನಗರಗಳು ಆತಿಥ್ಯ ವಹಿಸಿವೆ. ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ ವಹಿಸಲಿದ್ದು, ಒಟ್ಟು 45 ಪಂದ್ಯಗಳನ್ನು ಆಯೋಜಿಸಲಿದೆ.
ಟಿ20 ವಿಶ್ವಕಪ್ 2022ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ದಿನಾಂಕವೂ ಹೊರಬಿದ್ದಿದ್ದು, ನವೆಂಬರ್ 9 ಮತ್ತು 10ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ಹಾಗೂ ಅಡಿಲೇಡ್ ಓವಲ್‌ನಲ್ಲಿ ಸೆಮಿಫೈನಲ್ಸ್ ನಡೆಯಲಿದೆ. ಇನ್ನು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನವೆಂಬರ್ 13, 2022ರಂದು ಫೈನಲ್ ಪಂದ್ಯ ನಡೆಯಲಿದೆ.
ಅಕ್ಟೋಬರ್ 23 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಹೊರತುಪಡಿಸಿ, ಎಲ್ಲಾ ಪಂದ್ಯಗಳಿಗೆ ಹೆಚ್ಚುವರಿ ಟಿಕೆಟ್‌ಗಳೊಂದಿಗೆ 800,000 ಕ್ಕೂ ಹೆಚ್ಚು ಅಭಿಮಾನಿಗಳು ಐಸಿಸಿ ಪುರುಷರ T20 ವಿಶ್ವಕಪ್ 2022 ಗೆ ಹಾಜರಾಗುವ ನಿರೀಕ್ಷೆಯಿದೆ.


Click it and Unblock the Notifications












