T20 World Cup: ವೆಸ್ಟ್ ಇಂಡೀಸ್ & ಯುಎಸ್ಎನಲ್ಲಿ 2024ರ ಟಿ20 ವಿಶ್ವಕಪ್ ಈ ದಿನಾಂಕದಂದು ನಡೆಯುವ ಸಾಧ್ಯತೆ
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ನವೀಕರಿಸಿದ ವೇಳಾಪಟ್ಟಿಗಾಗಿ ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವಾಗ, ಮುಂದಿನ ವರ್ಷ ನಡೆಯುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ದಿನಾಂಕ ಹೊರಬಿದ್ದಿದೆ.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆಯೋಜಿಸಲಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯು ಜೂನ್ 4ರಿಂದ ಜೂನ್ 30ರವರೆಗೆ ನಡೆಯುವ ಸಾಧ್ಯತೆ ಇದೆ ಎಂದು ESPNcricinfo ವರದಿ ಮಾಡಿದೆ. ವರದಿಗಳ ಪ್ರಕಾರ, ಐಸಿಸಿ ನಿಯೋಗವು ಈ ವಾರ ಯುಎಸ್ಎನ ಐದು ಶಾರ್ಟ್‌ಲಿಸ್ಟ್ ಸ್ಥಳಗಳಿಗೆ ಭೇಟಿ ನೀಡಿದೆ.

ಯುಎಸ್ಎ ಸ್ಥಳಗಳು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಿವೆ. ಇವುಗಳಲ್ಲಿ ಮೋರಿಸ್ವಿಲ್ಲೆ, ಡಲ್ಲಾಸ್ ಮತ್ತು ನ್ಯೂಯಾರ್ಕ್ ಪಂದ್ಯಾವಳಿಯ ಪಂದ್ಯಗಳಿಗಾಗಿ ಮತ್ತು ಅಭ್ಯಾಸ ಪಂದ್ಯಗಳಿಗಾಗಿ ಫ್ಲೋರಿಡಾದ ಲಾಡರ್‌ಹಿಲ್ ಸೇರಿವೆ.
ಮಾರಿಸ್ವಿಲ್ಲೆ ಮತ್ತು ಡಲ್ಲಾಸ್ ಪ್ರಸ್ತುತ ಯುಎಸ್ಎನ ಮೇಜರ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಆವೃತ್ತಿಯನ್ನು ಆಯೋಜಿಸುತ್ತಿವೆ. ಆದರೂ ಈ ಮೈದಾನಗಳು ಇನ್ನೂ ಅಂತಾರಾಷ್ಟ್ರೀಯ ಮೈದಾನದ ಸ್ಥಾನಮಾನ ಪಡೆದಿಲ್ಲ. ಇದು ಐಸಿಸಿ ನಿಯಮಗಳ ಪ್ರಕಾರ ಕಡ್ಡಾಯವಾಗಿದೆ.
ಮುಂದಿನ ದಿನಗಳಲ್ಲಿ ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತು ಯುಎಸ್ ಕ್ರಿಕೆಟ್ ಜೊತೆಗೆ ಐಸಿಸಿ ನಿಯೋಗವು, ಈ ಕ್ರೀಡಾಂಗಣಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಪಪುವಾ ನ್ಯೂಗಿನಿ 20 ತಂಡಗಳು ಇತ್ತೀಚಿಗೆ ಟಿ20 ವಿಶ್ವಕಪ್‌ಗೆ ಐಸಿಸಿ ಪ್ರಾದೇಶಿಕ ಅರ್ಹತಾ ವ್ಯವಸ್ಥೆಯನ್ನು ಬಳಸಿಕೊಂಡು 2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿವೆ.
ಪಪುವಾ ನ್ಯೂಗಿನಿ ಪೂರ್ವ ಏಷ್ಯಾ-ಪೆಸಿಫಿಕ್ ವಲಯದ ಅರ್ಹತಾ ಪಂದ್ಯವನ್ನು ಗೆದ್ದರೆ, ಯುರೋಪ್ ವಲಯದ ಅರ್ಹತಾ ಪಂದ್ಯದಲ್ಲಿ ಅಗ್ರ ಎರಡು ಸ್ಥಾನ ಪಡೆದವರು ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಾಗಿವೆ.
ಮುಂಬರುವ ತಿಂಗಳುಗಳಲ್ಲಿ ಅಮೆರಿಕ (ಒಂದು ಸ್ಥಾನಕ್ಕಾಗಿ), ಆಫ್ರಿಕಾ (ಎರಡು ಸ್ಥಾನಗಳು) ಮತ್ತು ಏಷ್ಯಾ (ಎರಡು ಸ್ಥಾನಗಳು) ಪ್ರಾದೇಶಿಕ ಪ್ರದೇಶಗಳ ಅರ್ಹತಾ ತಂಡಗಳನ್ನು ನಿರ್ಧರಿಸಲಾಗುತ್ತದೆ.
ಪ್ರಾದೇಶಿಕ ಅರ್ಹತೆಗಳ ಮೊದಲು, ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನೇರವಾಗಿ ಅರ್ಹತೆ ಪಡೆದಿದ್ದರೆ, 2022ರ ಟಿ20 ವಿಶ್ವಕಪ್‌ನಿಂದ ಅಗ್ರ ಎಂಟು ತಂಡಗಳು ಸೇರಿದಂತೆ ಹನ್ನೆರಡು ದೇಶಗಳು ಈಗಾಗಲೇ ಸ್ಪರ್ಧೆಗೆ ಅರ್ಹತೆ ಪಡೆದಿವೆ.
ಅವುಗಳೆಂದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಟಿ20 ಶ್ರೇಯಾಂಕದಲ್ಲಿ ತಮ್ಮ ಸ್ಥಾನಗಳ ಆಧಾರದ ಮೇಲೆ ಅರ್ಹತೆ ಪಡೆದಿವೆ.
2024ರ ಟಿ20 ವಿಶ್ವಕಪ್ ಪಂದ್ಯಾವಳಿಯು ಹಿಂದಿನ ಆವೃತ್ತಿಗಳಿಗಿಂತ ವಿಭಿನ್ನ ಸ್ವರೂಪವನ್ನು ಹೊಂದಿರಲಿದೆ. ಈ ಮುನ್ನ ಮೊದಲ ಸುತ್ತಿನ ನಂತರ ಸೂಪರ್ 12 ಆಡಬೇಕಿತ್ತು. ಆದರೆ, ಮುಂದಿನ ಆವೃತ್ತಿಯಲ್ಲಿ ಮೊದಲ ಸುತ್ತಿಗೆ 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗಳು ನಂತರ ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಭಜಿಸಲ್ಪಡುತ್ತವೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ ಪಂದ್ಯಗಳನ್ನು ಆಡುತ್ತವೆ. ನಂತರ ತಲಾ ಒಂದು ಅಗ್ರ ತಂಡ ಫೈನಲ್‌ಗೆ ಮುನ್ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications