ಆಸಿಸ್ ವಿರುದ್ಧ ನ್ಯೂಜಿಲೆಂಡ್‌ಗೆ ಹೀನಾಯ ಸೋಲು: ಏಕದಿನ ಕ್ರಿಕೆಟ್‌ನಲ್ಲಿ ನಂ. 1 ಪಟ್ಟಕ್ಕೇರಿದ ಇಂಗ್ಲೆಂಡ್

ನ್ಯೂಜಿಲೆಂಡ್ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಸತತ ಎರಡನೇ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು ಕಳೆದುಕೊಂಡಿದ್ದಲ್ಲದೆ, ಏಕದಿನ ರ್ಯಾಂಕಿಗ್‌ನಲ್ಲೂ ಕುಸಿತ ಕಂಡಿದೆ. ಈ ಮೂಲಕ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಮತ್ತೆ ನಂಬರ್ 1 ಪಟ್ಟಕ್ಕೆ ಮರಳಿದೆ.
ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಕಿವೀಸ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಬಳಿಕ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಇಂಗ್ಲೆಂಡ್ ಅನ್ನು ಸ್ಥಾನಪಲ್ಲಟಗೊಳಿಸಿ ಆಂಗ್ಲರು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ರೇಟಿಂಗ್ ಪಾಯಿಂಟ್‌ಗಳು ಈಗ 119 ಆಗಿದೆ.

ನಂಬರ್ 1 ಸ್ಥಾನ ಕಳೆದುಕೊಂಡ ನ್ಯೂಜಿಲೆಂಡ್
ಕಳೆದ ವರ್ಷ ಮೇ ತಿಂಗಳಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯಗಳ ಐಸಿಸಿ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್ ಇಂಗ್ಲೆಂಡ್ ಅನ್ನು ನಂಬರ್ 1 ಸ್ಥಾನದಿಂದ ಕೆಳಗಿಳಿಸಿ ಅಗ್ರಸ್ಥಾನವನ್ನು ಪಡೆದುಕೊಂಡಿತು. ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸತತ ಎರಡು ಏಕದಿನ ಪಂದ್ಯಗಳನ್ನ ಸೋಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕಳೆದುಕೊಂಡಿತು.
ಗುರುವಾರ ನಡೆದ ಎರಡನೇ ಏಕದಿನ ಪಂದ್ಯದ ಸೋಲಿನ ನಂತರ ನ್ಯೂಜಿಲೆಂಡ್‌ನ ರೇಟಿಂಗ್ ಅಂಕಗಳು 117 ಆಗಿದೆ. ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು ಸೋಲಿಸಿದರೂ ಅಗ್ರಸ್ಥಾನವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ.
AUS vs NZ 2nd ODI: 82 ರನ್‌ಗೆ ಆಲೌಟ್, ನ್ಯೂಜಿಲೆಂಡ್‌ಗೆ ಹೀನಾಯ ಸೋಲು, ಆಸಿಸ್‌ಗೆ ಸರಣಿ ಜಯ

ಒಡಿಐ ರ್ಯಾಂಕಿಂಗ್‌ನಲ್ಲಿ ಭಾರತಕ್ಕೆ 3ನೇ ಸ್ಥಾನ
ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮೆನ್ ಇನ್ ಬ್ಲೂ 111 ರೇಟಿಂಗ್ ಹೊಂದಿದೆ. ಭಾರತ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ತಂಡ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿದೆ.
ಭಾರತದ ನಂತರ ಪಾಕಿಸ್ತಾನ (ರೇಟಿಂಗ್ ಪಾಯಿಂಟ್ 107) ಇದೆ. ಆಸ್ಟ್ರೇಲಿಯಾ ಐದನೇ ಸ್ಥಾನದಲ್ಲಿದ್ದು, ರೇಟಿಂಗ್ ಪಾಯಿಂಟ್ 104 ಆಗಿದೆ. ಆರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ರೇಟಿಂಗ್ ಪಾಯಿಂಟ್ 101 ಆಗಿದೆ. ಬಾಂಗ್ಲಾದೇಶ ಏಳು, ಶ್ರೀಲಂಕಾ ಎಂಟನೇ, ವೆಸ್ಟ್ ಇಂಡೀಸ್ ಒಂಬತ್ತು ಮತ್ತು ಅಫ್ಘಾನಿಸ್ತಾನ ಹತ್ತನೇ ಸ್ಥಾನದಲ್ಲಿದೆ.
ಭಾರತ vs ಅಫ್ಘಾನಿಸ್ತಾನ ಪಂದ್ಯದ ಆರಂಭಕ್ಕೂ ಮುನ್ನ ದುಬೈ ಸ್ಟೇಡಿಯಂ ಪಕ್ಕದಲ್ಲೇ ಅಗ್ನಿ ದುರಂತ

ಕೇವಲ 82ರನ್‌ಗೆ ಆಲೌಟ್ ಆದ ಕಿವೀಸ್‌ಗೆ ಮುಖಭಂಗ
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನ 195ರನ್‌ಗಳಿಗೆ ಕಟ್ಟಿಹಾಕಿತು. ಆದ್ರೆ 196ರನ್ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸನ್ ಪಡೆ ಆ್ಯಡಂ ಜಂಪಾ ಮತ್ತು ಸೀನ್ ಅಬಾಟ್ ದಾಳಿಗೆ ತತ್ತರಿಸಿ ಕೇವಲ 33 ಓವರ್‌ಗಳಲ್ಲಿ 82ರನ್‌ಗೆ ಆಲೌಟ್ ಆಗಿದೆ.
ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್‌ಗಳ ಗೊಂಚಲು ಪಡೆಯುವ ಮೂಲಕ ಕಿವೀಸ್ ಇನ್ನಿಂಗ್ಸ್ ಕಡಿವಾಣ ಹಾಕಿ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ 9 ಓವರ್‌ಗಳಲ್ಲಿ 34 ಡಾಟ್ ಬಾಲ್ ಸಹಿತ 35ರನ್ ನೀಡಿ ಐದು ಪ್ರಮುಖ ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ಬ್ಯಾಟಿಂಗ್ ಆರ್ಡರ್ ಅನ್ನು ಧ್ವಂಸಗೊಳಿಸಿದರು.
ಕಿವೀಸ್ ಪರ ಕೇನ್ ವಿಲಿಯಮ್ಸನ್ 17, ಡೆರಿಲ್ ಮಿಚೆಲ್ 10, ಮೈಕಲ್ ಬ್ರೇಸ್‌ವೆಲ್ 12, ಮಿಚೆಲ್ ಸ್ಯಾಂಟ್ನರ್ 16ರನ್‌ಗಳಿಸಿದ್ದೇ ಹೆಚ್ಚು. 33 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ಕೇವಲ 82ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಸೋಲು ಅನುಭವಿಸಿತು. ಆಸ್ಟ್ರೇಲಿಯಾ 113 ರನ್‌ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications