For Quick Alerts
ALLOW NOTIFICATIONS  
For Daily Alerts
 

AUS vs NZ 2nd ODI: 82 ರನ್‌ಗೆ ಆಲೌಟ್, ನ್ಯೂಜಿಲೆಂಡ್‌ಗೆ ಹೀನಾಯ ಸೋಲು, ಆಸಿಸ್‌ಗೆ ಸರಣಿ ಜಯ

Australia vs New zealand

ಕೈರ್ನ್ಸ್ನ ಕ್ಯಾಜಲಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್‌ ತಂಡವು ಕೇವಲ 82ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನ್ನ ಕಂಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನ 195ರನ್‌ಗಳಿಗೆ ಕಟ್ಟಿಹಾಕಿತು. ಆದ್ರೆ 196ರನ್‌ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸನ್ ಪಡೆ ಆ್ಯಡಂ ಜಂಪಾ ಮತ್ತು ಸೀನ್ ಅಬಾಟ್ ದಾಳಿಗೆ ತತ್ತರಿಸಿ ಕೇವಲ 33 ಓವರ್‌ಗಳಲ್ಲಿ 82ರನ್‌ಗೆ ಆಲೌಟ್‌ ಆಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಪಡೆದ ಜಂಪಾ, ಕಿವೀಸ್ ತತ್ತರ

ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್‌ಗಳ ಗೊಂಚಲು ಪಡೆಯುವ ಮೂಲಕ ಕಿವೀಸ್ ಇನ್ನಿಂಗ್ಸ್‌ ಕಡಿವಾಣ ಹಾಕಿ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ 9 ಓವರ್‌ಗಳಲ್ಲಿ 34 ಡಾಟ್ ಬಾಲ್ ಸಹಿತ 35ರನ್ ನೀಡಿ ಐದು ಪ್ರಮುಖ ವಿಕೆಟ್‌ ಕಬಳಿಸುವ ಮೂಲಕ ನ್ಯೂಜಿಲೆಂಡ್ ಬ್ಯಾಟಿಂಗ್ ಆರ್ಡರ್‌ ಅನ್ನು ಧ್ವಂಸಗೊಳಿಸಿದರು.

ಕಿವೀಸ್ ಪರ ಕೇನ್ ವಿಲಿಯಮ್ಸನ್ 17, ಡೆರಿಲ್ ಮಿಚೆಲ್ 10, ಮೈಕಲ್ ಬ್ರೇಸ್‌ವೆಲ್‌ 12, ಮಿಚೆಲ್ ಸ್ಯಾಂಟ್ನರ್ 16ರನ್‌ಗಳಿಸಿದ್ದೇ ಹೆಚ್ಚು. 33 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ಕೇವಲ 82ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಸೋಲು ಅನುಭವಿಸಿತು. ಆಸ್ಟ್ರೇಲಿಯಾ 113 ರನ್‌ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಸೀನ್ ಅಬಾಟ್ 4 ಓವರ್‌ 2 ವಿಕೆಟ್, ರನ್ ಮಾತ್ರ ಶೂನ್ಯ!

ಆಸಿಸ್ ವೇಗದ ಬೌಲರ್ ಸೀನ್ ಅಬಾಟ್ ಬೆಂಕಿಯಂತಹ ಬೌಲಿಂಗ್ ಮೂಲಕ ಕಿವೀಸ್ ಬ್ಯಾಟರ್‌ಗಳನ್ನ ನಡುಗಿಸಿದ್ದಾರೆ. ಇದಕ್ಕೆ ಸಾಕ್ಷಿ ಅವರ ಬೌಲಿಂಗ್ ಸ್ಪೆಲ್. ಮೊದಲ ನಾಲ್ಕು ಓವರ್‌ಗಳಲ್ಲಿ ಎರಡು ವಿಕೆಟ್ ಕಬಳಿಸಿದ್ದ ಸೇನ್ ಅಬಾಟ್ ಒಂದೇ ಒಂದು ರನ್ ಬಿಟ್ಟುಕೊಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿತ್ತು.

ಡೆವೊನ್ ಕಾನ್ವೆ(5), ಟಾಮ್ ಲಥಾಮ್ (0) ವಿಕೆಟ್ ಕಬಳಿಸಿದ ಸೀನ್ ಅಬಾಟ್ ಯಾವುದೇ ರನ್‌ ನೀಡದೆ ಗಮನ ಸೆಳೆದರು. ಪಂದ್ಯದ ಅಂತ್ಯಕ್ಕೆ ಅಬಾಟ್ 5 ಓವರ್‌ಗಳಲ್ಲಿ ನಾಲ್ಕು ಮೇಡನ್ ಸಹಿತ ಕೇವಲ 1 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು ಅನುಭವಿ ಬೌಲರ್ ಮಿಚೆಲ್ ಸ್ಟಾರ್ಕ್ 7 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು. ಮಾರ್ಕಸ್ ಸ್ಟೋಯ್ನಿಸ್ ಒಂದು ವಿಕೆಟ್ ಪಡೆದರು.

ಶುಭಮನ್ ಗಿಲ್‌ಗೆ ಹುಟ್ಟುಹಬ್ಬದ ಸಂಭ್ರಮ: ಗ್ಲಾಮೊರ್ಗಾನ್‌ ಪರ ಚೊಚ್ಚಲ ಪಂದ್ಯದಲ್ಲೇ 92 ರನ್

ಆಸ್ಟ್ರೇಲಿಯಾಗೆ ಆಧಾರವಾದ ಸ್ಟೀವನ್ ಸ್ಮಿತ್

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಓಪನರ್‌ಗಳಿಬ್ಬರು ಕೈ ಕೊಟ್ಟಾಗ ತಂಡಕ್ಕೆ ಆಧಾರವಾಗಿದ್ದು ಸ್ಟೀವನ್ ಸ್ಮಿತ್. ವಾರ್ನರ್ (5), ಆ್ಯರೋನ್ ಫಿಂಚ್ (0) ಔಟಾದ ಬಳಿಕ ಸ್ಟೀವನ್ ಸ್ಮಿತ್ ಏಕಾಂಗಿಯಾಗಿ ನಿಂತು ಬ್ಯಾಟ್ ಬೀಸಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಅರ್ಧಶತಕ ದಾಖಲಿಸಿದ ಸ್ಮಿತ್ ತಂಡವನ್ನ ಮೇಲೆತ್ತಿದರು.

94 ಎಸೆತಗಳಲ್ಲಿ 61 ರನ್ ಕಲೆಹಾಕಿದ ಸ್ಮಿತ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಸ್ಮಿತ್ ಹೊರತುಪಡಿಸಿ ಅಲೆಕ್ಸ್ ಕ್ಯಾರಿ 12, ಮ್ಯಾಕ್ಸ್‌ವೆಲ್ 25, ಮಿಚೆಲ್ ಸ್ಟಾರ್ಕ್ ಅಜೇಯ 38, ಜಂಪಾ 16, ಹೇಜಲ್‌ವುಡ್ ಅಜೇಯ 23 ರನ್ ಕಲೆಹಾಕಿದರು. ಈ ಮೂಲಕ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 195ರನ್ ಕಲೆಹಾಕಿತು.

ನ್ಯೂಜಿಲೆಂಡ್ ಪರ ಟ್ರೆಂಟ್ ಬೋಲ್ಟ್‌ 4, ಮ್ಯಾಟ್ ಹೆನ್ರಿ 3, ಸೌಥಿ 1, ಸ್ಯಾಂಟ್ನರ್ ಒಂದು ವಿಕೆಟ್ ಪಡೆದರು.

Asia Cup 2022- ಸಹ ಆಟಗಾರ ಜೊತೆ ರೋಹಿತ್ ಶರ್ಮಾ ಮಾಡಿದ್ದು ಸರೀನಾ!! | *Cricket | OneIndia Kannada
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಾರ್ಕಸ್ ಸ್ಟೊಯ್ನಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹೇಜಲ್‌ವುಡ್

ಬೆಂಚ್: ಕ್ಯಾಮರೂನ್ ಗ್ರೀನ್, ಆಷ್ಟನ್ ಅಗರ್, ಜೋಶ್ ಇಂಗ್ಲಿಸ್

ನ್ಯೂಜಿಲೆಂಡ್ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್

ಬೆಂಚ್ : ಲ್ಯುಕಿ ಫರ್ಗುಸನ್, ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಬೆನ್ ಸಿಯರ್ಸ್

Story first published: Thursday, September 8, 2022, 18:13 [IST]
Other articles published on Sep 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+