ICC ODI rankings: ಮೇಲಕ್ಕೇರಿದ ಶಿಖರ್ ಧವನ್, 2ರಲ್ಲೇ ಉಳಿದ ವಿರಾಟ್ ಕೊಹ್ಲಿ!

ಅಬುಧಾಬಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ಏಕದಿನ ಕ್ರಿಕೆಟ್ ನೂತನ ರ್‍ಯಾಂಕಿಂಗ್ ಪ್ರಕಟವಾಗಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಏಕದಿನ ತಂಡಕ್ಕೆ ನಾಯಕರಾಗಿರುವ ಶಿಖರ್ ಧವನ್ ನೂತನ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಧವನ್ 18ನೇ ಸ್ಥಾನದಲ್ಲಿದ್ದರು.
ಏಕದಿನ ಪ್ರಸ್ತುತ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತೀಯರೆಂದರೆ ನಾಯಕ ವಿರಾಟ್ ಕೊಹ್ಲಿ. 848 ರೇಟಿಂಗ್ ಪಾಯಿಂಟ್ ಗಳಿಸಿರುವ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, 873 ಪಾಯಿಂಟ್ಸ್‌ನೊಂದಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಾಮ್ ನಂ.1 ಸ್ಥಾನದಲ್ಲಿದ್ದಾರೆ. 3ನೇ ಶ್ರೇಯಾಂಕದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (817) ಇದ್ದಾರೆ.
ಶ್ರೀಲಂಕಾ ಪ್ರವಾಸ ಸರಣಿಯ ಆರಂಭಿಕ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಅಜೇಯ 86 ರನ್ ಗಳಿಸಿದ್ದರು. ಇದು ಧವನ್ ಶ್ರೇಯಾಂಕದಲ್ಲಿ ಮೇಲಕ್ಕೇರಲು ಅವರಿಗೆ ನೆರವು ನೀಡಿದೆ. ಒಡಿಐ ರ್‍ಯಾಂಕಿಂಗ್ 4ನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ರಾಸ್ ಟೇಲರ್, 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಇದ್ದಾರೆ.
ಏಕದಿನ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್, ಅಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್, ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ಆರಂಭಿಕ ಮೂರು ಸ್ಥಾನಗಳಲ್ಲಿದ್ದಾರೆ. ಆಲ್ ರೌಂಡರ್‌ಗಳಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಅಫ್ಘಾನ್‌ನ ಮೊಹಮ್ಮದ್ ನಬಿ, ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ಆರಂಭಿಕ ಸ್ಥಾನಗಳಲ್ಲಿದ್ದಾರೆ. ದೇಶಗಳಲ್ಲಿ ನ್ಯೂಜಿಲೆಂಡ್, ಭಾರತ, ಆಸ್ಟ್ರೇಲಿಯಾ ಅಗ್ರ ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications