ಐಸಿಸಿ ರ‍್ಯಾಂಕಿಂಗ್: ಏಕದಿನ ಬೌಲರ್‌ಗಳಲ್ಲಿ ಬೂಮ್ರಾ ನಂಬರ್ 1, ಟಿ20ಯಲ್ಲಿ ಸೂರ್ಯಕುಮಾರ್ ನಂಬರ್ 5

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 19 ರನ್‌ಗಳಿಗೆ 6 ವಿಕೆಟ್ ಕಿತ್ತು ಆರ್ಭಟಿಸಿದ್ದ ಜಸ್ಪ್ರೀತ್ ಬೂಮ್ರಾ ಶ್ರೇಯಾಂಕ ಪಟ್ಟಿಯಲ್ಲಿಯೂ ಬಿರುಗಾಳಿಯೆಬ್ಬಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಪೈಕಿ ಜಸ್ಪ್ರೀತ್ ಬೂಮ್ರಾ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟಿ20 ಕ್ರಿಕೆಟ್ ಮಾದರಿಯ ಶ್ರೇಯಾಂಕಪಟ್ಟಿಯಲ್ಲಿಯೂ ಭಾರತೀಯ ಆಟಗಾರ ಸೂರ್ಯಕುಮಾರ್ ಯಾದವ್ ಗಮನಾರ್ಹ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬೂಮ್ರಾ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಆಘಾತ ನೀಡಿದರು. ಇದರ ಪರಿಣಾಮವಾಗಿ ಇಂಗ್ಲೆಂಡ್ ತಂಡ ಕೇವಲ 110 ರನ್‌ಗಳಿಗೆ ಆಲೌಟ್ ಆಯಿತು. ಇದನ್ನು ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೆ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.

ಮೂರು ಸ್ಥಾನ ಮೇಲೇರಿದ ಬೂಮ್ರಾ
ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಮೂರು ಮಾದರಿಯಲ್ಲಿಯೂ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೂ ಮುನ್ನ ಬೂಮ್ರಾ ಮೂರನೇ ಸ್ಥಾನದಲ್ಲಿದ್ದರು. ಮೊದಲ ಪಂದ್ಯದಲ್ಲಿ ನೀಡಿದ ಅಮೋಘ ಪ್ರದರ್ಶನದ ಕಾರಣದಿಂದಾಗಿ ಮೂರು ಸ್ಥಾನಗಳ ಏರಿಕೆ ಕಂಡಿದ್ದಾರೆ. ನ್ಯೂಜಿಲೆಂಡ್ ವೇಗಿ ಟ್ರಂಟ್ ಬೋಲ್ಟ್ ಎರಡನೇ ಸ್ಥಾನಕ್ಕೆ ಕುಸಿದಿದ್ದರೆ ಪಾಕಿಸ್ತಾನದ ಯುವ ವೇಗಿ ಶಾಹೀನ್ ಅಫ್ರಿದಿ ಮೂರನೇ ಸ್ಥಾನಕ್ಕೆ ಕುಸಿದ್ದಾರೆ.

ಟಿ20ಯಲ್ಲಿ ಸೂರ್ಯಕುಮಾರ್ ಟಾಪ್ 5ಗೆ ಲಗ್ಗೆ
ಇನ್ನು ಟಿ20 ಶ್ರೇಯಾಂಕಪಟ್ಟಿಯಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ 117 ರನ್‌ಗಳನ್ನು ಸಿಡಿಸಿ ಮಿಂಚಿದ್ದರು. ಈ ಅದ್ಭುತ ಪ್ರದರ್ಶನದೊಂದಿಗೆ ಭರ್ಜರಿ 44 ಸ್ಥಾನಗಳ ಏರಿಕೆ ಕಂಡಿದ್ದು 5ನೇ ಸ್ಥಾನಕ್ಕೆ ಏರಿದ್ದಾರೆ. ಈ ಮೂಲಕ ಭಾರತೀಯ ಬ್ಯಾಟರ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ನಂತರದ 13ನೇ ಸ್ಥಾನದಲ್ಲಿರುವ ಇಶಾನ್ ಕಿಶನ್ ಇದ್ದಾರೆ.

ಏಕದಿನ ಶ್ರೇಯಾಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಭಾರತ
ಇನ್ನು ಏಕದಿನ ತಂಡಗಳ ಪೈಕಿ ಭಾರತ ತಂಡ ಕೂಡ ಏರಿಕೆ ಕಂಡಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಭಾರತ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ನ್ಯೂಜಿಲೆಂಡ್ 126 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡ ಇದೆ. ಮೂರನೇ ಸ್ಥಾನದಲ್ಲಿರುವ ಭಾರತ 108 ಅಂಕಗಳನ್ನು ಹೊಂದಿದ್ದರೆ ಪಾಕಿಸ್ತಾನ 106 ಅಂಕಗಳನ್ನು ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದೆ.

ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಲಿದೆ ಭಾರತ ಇಂಗ್ಲೆಂಡ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವಿನೊಂದಿಗೆ ಮುಕ್ತಾಯವಾಗಿದೆ. ಇದೀಗ ಎರಡನೇ ಪಂದ್ಯವನ್ನಾಡಲು ಎರಡೂ ತಂಡಗಳು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸ ಕುಸಿದಿದ್ದು ಮತ್ತೆ ಪುಟುದೇಳಲು ಹಾತೊರೆಯುತ್ತಿದೆ. ಲಾರ್ಡ್ಸ್‌ನಲ್ಲಿ ಮಂಗಳವಾರ ಎರಡನೇ ಪಂದ್ಯ ನಡೆಯಲಿದ್ದು ಕೊನೆಯ ಪಂದ್ಯ ಭಾನುವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications