Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC T20 ವಿಶ್ವಕಪ್ 2022: ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಸಂಪೂರ್ಣ ಮಾರಾಟ

India vs pakistan

ಭಾರತ-ಪಾಕಿಸ್ತಾನ ನಡುವಿನ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಯಾವುದೇ ಆಗಿರಲಿ ಅದ್ರಷ್ಟು ಕುತೂಹಲತೆ, ರೋಚಕತೆ ಹಾಗೂ ಗಂಭೀರತೆ ಮತ್ತೊಂದಿಲ್ಲ. ಉಭಯ ರಾಷ್ಟ್ರಗಳ ಕ್ರಿಕೆಟ್ ಪ್ರೇಮಿಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನ ಯುದ್ಧದಂತೆ ಊಹಿಸಿಕೊಂಡು ನೋಡುವುದು ಸಹ ಇದೆ.

ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ಕೇವಲ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಗಡಿ ಜಟಾಪಟಿಯ ಜೊತೆಗೆ ಉಭಯ ರಾಷ್ಟ್ರಗಳ ಕ್ರಿಕೆಟ್ ಸಂಬಂಧ ಕಮರಿದೆ. ಆದ್ರೆ ಈ ವರ್ಷ ಮೈದಾನದಲ್ಲಿ ಉಭಯ ರಾಷ್ಟ್ರಗಳ ಕಾದಾಟವನ್ನ ವೀಕ್ಷಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್‌ ಪಂದ್ಯಕ್ಕೆ ಈಗಾಗಲೇ ಕ್ರೇಜ್ ಹೆಚ್ಚಾಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದಂತೆ 2022ರ ಐಸಿಸಿ ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನದ ಪಂದ್ಯದ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಫೆಬ್ರವರಿ 7 ರಂದು ಮಧ್ಯಾಹ್ನ 12 ಗಂಟೆಯಿಂದ ಟಿಕೆಟ್‌ಗಳ ಮಾರಾಟವನ್ನು ಪ್ರಾರಂಭಿಸಲಾಗಿತ್ತು ಎಂದು ಅಪೆಕ್ಸ್ ಕ್ರಿಕೆಟ್ ಆಡಳಿತ ಮಂಡಳಿ ಪ್ರಕಟಿಸಿದೆ.

2022ರ ಐಸಿಸಿ ಟಿ20 ವಿಶ್ವಕಪ್, ಇದು ಎಂಟನೇ ಬಾರಿಗೆ ನಡೆಯುತ್ತಿದ್ದು, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿದೆ. ಕಳೆದ 2021 ರ ಆವೃತ್ತಿಯಲ್ಲಿ ನೆರೆಯ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ಆಸ್ಟ್ರೇಲಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಆದ್ರೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ವೆಸ್ಟ್ ಇಂಡೀಸ್ ಅತ್ಯಂತ ಯಶಸ್ವಿ ತಂಡವಾಗಿದೆ.

ಗ್ರೂಪ್ ಸ್ಟೇಜ್ ಮತ್ತು ಸೂಪರ್ 12 ಹಂತದಲ್ಲಿ ಮಕ್ಕಳಿಗೆ ಟಿಕೆಟ್ ದರವು 5 ಡಾಲರ್‌ನಿಂದ ಪ್ರಾರಂಭವಾಗುತ್ತದೆ. ಆದ್ರೆ ವಯ್ಸಕರ್ ಟಿಕೆಟ್‌ಗಳು 20 ಡಾಲರ್‌ನಿಂದ ಪ್ರಾರಂಭವಾಗುತ್ತದೆ. ಟಿ20 ವಿಶ್ವಕಪ್‌ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳು ತಮ್ಮ ಆದ್ಯತೆಯ ಪಂದ್ಯಗಳ ಟಿಕೆಟ್ ಖರೀದಿಸಲು ಅವಕಾಶವಿದೆ.

ಏಳು ನಗರಗಳಲ್ಲಿ ನಡೆಯಲಿದೆ ಟಿ20 ವಿಶ್ವಕಪ್
ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯುವ ವಿಶ್ವಕಪ್ ಪಂದ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವ ಏಳು ಆತಿಥೇಯ ನಗರಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.

ವಿಶ್ವಕಪ್ ಆತಿಥ್ಯವನ್ನು ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ ವಹಿಸಲಿದ್ದು, ಒಟ್ಟು 45 ಪಂದ್ಯಗಳನ್ನು ಆಯೋಜಿಸಲಿದೆ.

ಟಿ20 ವಿಶ್ವಕಪ್ 2022ರ ಸೆಮಿಫೈನಲ್ಸ್ ನವೆಂಬರ್ 9 ಮತ್ತು 10ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ಹಾಗೂ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಇನ್ನು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನವೆಂಬರ್ 13, 2022ರಂದು ಫೈನಲ್ ಪಂದ್ಯ ನಡೆಯಲಿದೆ.

Story first published: Monday, February 7, 2022, 16:00 [IST]
Other articles published on Feb 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+