ಚೊಚ್ಚಲ T20 ವಿಶ್ವಕಪ್ ಆಡಲಿರುವ ಯುಜವೇಂದ್ರ ಚಹಾಲ್: ಪಾಕ್ ವಿರುದ್ಧ ಗೇಮ್‌ಪ್ಲಾನ್ ರಿವೀಲ್

ಭಾರತ ತಂಡ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಗೆದ್ದಿರುವ ಭಾರತ ಈಗಾಗಲೇ ಎದುರಾಳಿಗಳಿಗೆ ಪ್ರಬಲ ಎಚ್ಚರಿಕೆ ನೀಡಿದೆ. ವಿಶ್ವಕಪ್‌ನ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಭಾರತದ ಬ್ಯಾಟಿಂಗ್ ಬಲದ ಬಗ್ಗೆ ಯಾರಿಗೂ ಅನುಮಾನ ಬಾರದಿದ್ದರೂ ಬೌಲಿಂಗ್ ಶಕ್ತಿ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿನ ಸರಣಿಗಳಲ್ಲಿ ಟೀಂ ಇಂಡಿಯಾ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ಭಾರತ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂತಿಮ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾಗಿ ಪರಿಣಮಿಸಿದೆ. ಹೀಗಾಗಿ ವಿಶ್ವಕಪ್ ಆರಂಭಕ್ಕೂ ಉಳಿದ ಮೂರು ಅಭ್ಯಾಸ ಪಂದ್ಯಗಳಲ್ಲಿಯೇ ತನ್ನ ತಪ್ಪುಗಳನ್ನ ತಿದ್ದುಕೊಳ್ಳಬೇಕಿದೆ.

ಅಕ್ಟೋಬರ್ 23ಕ್ಕೆ ಭಾರತ-ಪಾಕ್ ಮುಖಾಮುಖಿ
ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23ರಂದು ನಡೆಯಲಿದೆ. ಇತ್ತೀಚಿನ ಮುಖಾಮುಖಿ ಕದನಗಳಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ 2021 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಿತು. ಅಲ್ಲದೆ, ಈ ವರ್ಷದ ಏಷ್ಯಾಕಪ್‌ನಲ್ಲಿ ಭಾರತ ಒಂದು ಬಾರಿ ಗೆದ್ದರೆ, ಪಾಕಿಸ್ತಾನ ಎರಡನೇ ಬಾರಿಗೆ ಪಂದ್ಯ ಗೆದ್ದಿದೆ. ಹೀಗಾಗಿ ಈ ಬಾರಿ ಪಾಕಿಸ್ತಾನವನ್ನ ಎದುರಿಸುವ ಮೊದಲು ಟೀಂ ಇಂಡಿಯಾ ಸಾಕಷ್ಟು ತಯಾರಿ ನಡೆಸಬೇಕಿದೆ.
ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕುರಿತಾಗಿ ಪ್ರಮುಖ ಸ್ಪಿನ್ನರ್ ಯುಜವೇಂದ್ರ ಚಹಾಲ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಮುಂದೆ ತಿಳಿಯಿರಿ.
ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ವಿಘ್ನ: ದೀಪಕ್ ಚಹಾರ್ ಕೂಡ ಔಟ್!

ಟೀಂ ಇಂಡಿಯಾಗಿಲ್ಲ ಯಾವುದೇ ಒತ್ತಡ!
ಇದೀಗ, ಸ್ಪಿನ್ನರ್ ಯುಜವೇಂದ್ರ ಚಹಾಲ್ ಅವರು ಪಾಕಿಸ್ತಾನ ವಿರುದ್ಧದ ಭಾರತದ ಪಂದ್ಯದ ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ. ಅವರು ಈ ಹಿಂದೆ ಪಾಕಿಸ್ತಾನ ವಿರುದ್ಧ ಆಡಿದ್ದು, ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡವನ್ನ ಎದುರಿಸುತ್ತಿದ್ದಾರೆ.
''ಪಾಕ್ ವಿರುದ್ಧ ವಿರುದ್ಧ ಆಡುವಾಗ ಒತ್ತಡ ಇರುವುದಿಲ್ಲ. ಭಾರತ-ಪಾಕ್ ಸಂಘರ್ಷಕ್ಕೆ ಮಾಧ್ಯಮಗಳೇ ಹೆಚ್ಚು ಒತ್ತಡ ನೀಡುತ್ತವೆ. ಕ್ರಿಕೆಟಿಗರಿಗೆ ಇದೊಂದು ಸಾಮಾನ್ಯ ಪಂದ್ಯವಿದ್ದಂತೆ. ನಾನು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿದ್ದೇನೆ. ಆದರೆ ಅದರಲ್ಲಿ ಬರೆದಿರುವುದನ್ನು ಓದಿದ ನಂತರ ಯಾರೂ ಚಿಂತಿಸುವುದಿಲ್ಲ'' ಎಂದು ಯುಜವೇಂದ್ರ ಚಹಾಲ್ ಹೇಳಿದರು.
ಫಿಟ್‌ನೆಸ್ ಟೆಸ್ಟ್‌ನಲ್ಲಿ ಶಮಿ ಪಾಸ್: ಸಿರಾಜ್ ಕೂಡ ಆಸ್ಟ್ರೇಲಿಯಾಗೆ ಪ್ರಯಾಣ

ಯುಜವೇಂದ್ರ ಚಹಾಲ್ ಟೀಂ ಇಂಡಿಯಾದ ಬೌಲಿಂಗ್ ಶಕ್ತಿ!
ಪಾಕಿಸ್ತಾನ ತಂಡ ಅತ್ಯುತ್ತಮ ತಂಡವಾಗಿದೆ. ಆದರೆ ನಾವು ನಮ್ಮ ಕಾರ್ಯಕ್ಷಮತೆಯನ್ನು ನಂಬುತ್ತೇವೆ. ಆ ದಿನ ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದರ ಮೇಲೆ ಎಲ್ಲವೂ ಇರುತ್ತದೆ. ಅದು ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಚಹಾಲ್ ಹೇಳಿದರು. ಪಾಕ್ ತಂಡದ ವೇಗಿಗಳ ಬಲ ತುಂಬಾ ಪ್ರಬಲವಾಗಿದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯು ಭಾರತವನ್ನು ದುರ್ಬಲಗೊಳಿಸಿದರೆ, ಪಾಕಿಸ್ತಾನವು ಬಲಿಷ್ಠ ಬೌಲಿಂಗ್ ಪಡೆಯೊಂದಿಗೆ ಕಣಕ್ಕಿಳಿಯಲಿದೆ.
ಶಾಹೀನ್ ಶಾ ಆಫ್ರಿದಿ ಫಿಟ್ನೆಸ್‌ಗೆ ಮರಳಿ ಪಡೆದಿದ್ದಾರೆ. 19 ವರ್ಷದ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಸತತ 145 ಪ್ಲಸ್ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ವೇಗಿಗಳು. ಪಾಕಿಸ್ತಾನದ ಪೇಸ್ ಲೈನ್ ಅಪ್ ಭಾರತವನ್ನು ನಡುಗಿಸುವ ಸಾಮರ್ಥ್ಯ ಹೊಂದಿದೆ. ಶಾದಾಬ್ ಖಾನ್ ಮತ್ತು ನವಾಜ್ ಅಲಿ ಅವರ ಆಲ್ ರೌಂಡ್ ಪರಾಕ್ರಮ ಕೂಡ ಭಾರತಕ್ಕೆ ದೊಡ್ಡ ತಲೆನೋವು ಸೃಷ್ಟಿಸುತ್ತಿದೆ.

ಬಾಬರ್-ರಿಜ್ವಾನ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ
ಪಾಕಿಸ್ತಾನದ ಪ್ರಮುಖ ಸಮಸ್ಯೆ ಬ್ಯಾಟಿಂಗ್. ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಅವರ ಪರಾಕ್ರಮದಲ್ಲಿ ತುಂಬಾ ನಂಬಿಕೆ ಇಟ್ಟಿದೆ. ಇವರಿಬ್ಬರೂ ಏಕಾಏಕಿ ಔಟಾದರೆ ತಂಡಕ್ಕೆ ಮುಖಭಂಗ ಖಚಿತ. ಪಾಕಿಸ್ತಾನದ ಬ್ಯಾಟಿಂಗ್‌ನಲ್ಲಿ ವಿಶ್ವಾಸಾರ್ಹ ಆಟಗಾರರ ಕೊರತೆಯಿದೆ. ಆದರೆ ಭಾರತಕ್ಕೆ ಬ್ಯಾಟಿಂಗ್ ಬಲವಿದೆ.
ಟೀಂ ಇಂಡಿಯಾ ಕೇವಲ ಟಾಪ್ ಆರ್ಡರ್ ಬ್ಯಾಟರ್‌ಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಟಾಪ್ 3 ಬ್ಯಾಟರ್ಸ್ ವೈಫಲ್ಯಗೊಂಡರೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ತಂಡಕ್ಕೆ ಆಧಾರವಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications