ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ವಿಘ್ನ: ದೀಪಕ್ ಚಹಾರ್ ಕೂಡ ಔಟ್!

ಟಿ20 ವಿಶ್ವಕಪ್ ಶುರುಗೂ ಮುನ್ನವೇ ಭಾರತಕ್ಕೆ ಒಂದರ ಹಿಂದೆ ಮತ್ತೊಂದು ಹಿನ್ನಡೆಯಾಗಿದೆ. ಇದೀಗ ಈ ಪಟ್ಟಿಗೆ ಮತ್ತೊಬ್ಬ ಆಟಗಾರ ಸೇರ್ಪಡೆಯಾಗಿದ್ದು, ಭಾರತದ ಸ್ಕ್ವಾಡ್ ಜೊತೆಗೆ ಸ್ಟ್ಯಾಂಡ್ ಬೈ ಆಟಗಾರನಾಗಿ ಸೇರ್ಪಡೆಗೊಂಡಿದ್ದ ದೀಪಕ್ ಚಹಾರ್ ಇಡೀ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.
ಈಗಾಗಲೇ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾರಂತಹ ಪ್ರಮುಖ ಆಟಗಾರರೇ ಟಿ20 ವಿಶ್ವಕಪ್‌ಗೆ ಲಭ್ಯವಿಲ್ಲ. ಹೀಗಿರುವಾಗ ಮತ್ತೆ ಯಾವುದಾದ್ರೂ ಇಂಜ್ಯುರಿಯಾದಲ್ಲಿ ಸ್ಟ್ಯಾಂಡ್ ಬೈ ಆಟಗಾರರು ಟೀಂ ಇಂಡಿಯಾವನ್ನ ಸೇರಿಕೊಳ್ಳಲಿದ್ದಾರೆ. ಆದ್ರೀಗ ಸ್ಟ್ಯಾಂಡ್ ಬೈ ಆಟಗಾರನು ಫಿಟ್ನೆಸ್ ಸಮಸ್ಯೆ ಎದುರಿಸಿ ಹೊರಬಿದ್ದಿರುವುದು ಭಾರತಕ್ಕೆ ಪ್ರಮುಖ ಹೊಡೆತ ನೀಡಿದೆ.

ದೀಪಕ್ ಚಹಾರ್‌ಗೆ ಹೆಚ್ಚಾದ ಬೆನ್ನು ನೋವು
ಬಿಸಿಸಿಐ ಮೂಲಗಳ ಪ್ರಕಾರ ದೀಪಕ್ ಚಹಾರ್‌ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಜೊತೆಗೆ ಆ್ಯಂಕಲ್ ಟ್ವಿಸ್ಟ್ ಆಗಿರುವ ಕಾರಣ ಈ ಹಿಂದೆ ದ. ಆಫ್ರಿಕಾ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದರು. ಮೊದಲ ಪಂದ್ಯ ಮುಕ್ತಾಯದ ಬಳಿಕ ಬೆಂಗಳೂರಿನ ಎನ್‌ಸಿಎ ಶಿಬಿರಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ದೀಪಕ್ ಚಹಾರ್ ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಮೂರರಿಂದ ನಾಲ್ಕು ವಾರ ಬೇಕಾಗಿರುವುದರಿಂದ ಅವರನ್ನು ಟೀಂ ಇಂಡಿಯಾ ಸ್ಕ್ವಾಡ್‌ನಿಂದ ಕೈ ಬಿಡಲಾಗಿದೆ.
IND vs SA: 3 ಪಂದ್ಯಗಳ ಏಕದಿನ ಸರಣಿಯಲ್ಲಿ ದಾಖಲಾದ 5 ಪ್ರಮುಖ ಅಂಕಿಅಂಶಗಳು

ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ದೀಪಕ್ ಚಹಾರ್
ಹೌದು, ದೀಪಕ್ ಚಹಾರ್ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾಕ್ಕೆ ಮರಳಿದ್ರು. ಇದಕ್ಕೂ ಮುನ್ನ ದೀರ್ಘಕಾಲ ಇಂಜ್ಯುರಿಯಿಂದ ಬಳಲಿದ್ದ ಈ ಬೌಲರ್ ಐಪಿಎಲ್ 2022ರ ಸೀಸನ್ ಕಳೆದುಕೊಂಡ್ರು. ಜೊತೆಗೆ ಏಷ್ಯಾಕಪ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾದ್ರು.
ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಸ್ಥಾನ ಪಡೆದ್ರೂ ಸಹ ಮೊದಲ ಏಕದಿನ ಪಂದ್ಯವನ್ನಾಡಿದ ಬಳಿಕ ಮತ್ತೆ ತಂಡದಲ್ಲಿ ಅವಕಾಶ ಪಡೆಯದೇ ಹೊರಬಿದ್ರು. ಇದಾದ ಬಳಿಕ ದೀಪಕ್ ಚಹಾರ್ ಆಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ. ಮೊದಲ ಟಿ20 ಪಂದ್ಯದಲ್ಲಿ 24ರನ್‌ಗೆ 2 ವಿಕೆಟ್ ಪಡೆದಿದ್ದ ದೀಪಕ್, ಎರಡನೇ ಟಿ20 ಪಂದ್ಯದಲ್ಲಿ ಅದೇ 24ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಇನ್ನು ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ 48ರನ್ ನೀಡಿ 1 ವಿಕೆಟ್ ಪಡೆದು ದುಬಾರಿ ಬೌಲರ್ ಆಗಿ ಗುರುತಿಸಿಕೊಂಡ್ರು.
ಆಸ್ಟ್ರೇಲಿಯಾ ಹೆಸರಿನಲ್ಲಿರುವ ದೊಡ್ಡ ದಾಖಲೆ ಧ್ವಂಸ: ಭರ್ಜರಿ ಗೆಲುವಿನಲ್ಲಿ ಮುರಿದ ಮೂರು ದಾಖಲೆಗಳಿದು!

ದೀಪಕ್ ಚಹಾರ್ ಬದಲು ಶಾರ್ದೂಲ್ ಠಾಕೂರ್ ಆಯ್ಕೆ ಸಾಧ್ಯತೆ
ಇನ್ನು ದೀಪಕ್ ಚಹಾರ್ ಬದಲು ಮತ್ತೊಬ್ಬ ಪ್ರಮುಖ ಆಲ್‌ರೌಂಡರ್ ಶಾರ್ದೂಲ್ ಠಾಕೂರ್‌ರನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ. ಅಕ್ಟೋಬರ್ 16ರಂದು ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಜೊತೆಗೆ ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾ ಫ್ಲೈಟ್ ಹತ್ತಲಿದ್ದಾರೆ ಎಂದು ವರದಿಯಾಗಿದೆ.
ಮೊಹಮ್ಮದ್ ಶಮಿ ಕೂಡ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದು, ಸಂಪೂರ್ಣ ಫಿಟ್ ಆಗಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಆದ್ರೆ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications