ಸೂರ್ಯಕುಮಾರ್ , KL ರಾಹುಲ್ ಅಲ್ಲ, T20 ವಿಶ್ವಕಪ್‌ನಲ್ಲಿ ಹೆಚ್ಚು ರನ್ ಕಲೆಹಾಕೋದು ಇವರೇ: ಆಶಿಶ್ ನೆಹ್ರಾ ಅಭಿಪ್ರಾಯ

ಬಹುನಿರೀಕ್ಷಿತ ಟಿ20 ವಿಶ್ವಕಪ್‌ನ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಬಹುತೇಕ ತಂಡಗಳು ಅಂತಿಮ ಹಂತದ ತಯಾರಿಯಲ್ಲಿವೆ. ಭಾರತಕ್ಕೆ ಇದೊಂದು ಪ್ರತಿಷ್ಠೆಯ ವಿಶ್ವಕಪ್. 2021ರ ಟಿ20 ವಿಶ್ವಕಪ್ ಜೊತೆಗೆ ಏಷ್ಯಾಕಪ್ ನಿಂದ ಕಂಡ ಸೋಲನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಭಾರತ ಈ ಬಾರಿ ಟಿ20 ವಿಶ್ವಕಪ್ ಹೇಗಾದ್ರೂ ಮಾಡಿ ಗೆಲ್ಲಬೇಕೆಂದು ಪಣತೊಟ್ಟಿದೆ.
ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್‌ನಲ್ಲಿ ಯಾವುದೇ ತಲೆನೋವಿಲ್ಲ. ಆದ್ರೆ ಬೌಲಿಂಗ್ ವಿಚಾರಕ್ಕೆ ಬಂದ್ರೆ ರೋಹಿತ್ ಬಳಗ ವೀಕ್ನೆಸ್ ಹೊಂದಿದೆ. ಬ್ಯಾಟಿಂಗ್ ಲೈನಪ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಭಾರತದ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಬಲಿಷ್ಠರಾಗಿದ್ದಾರೆ. ಆದ್ರೆ ಬೌಲಿಂಗ್‌ನಲ್ಲಿ ಡೆತ್ ಓವರ್ ಸಮಸ್ಯೆ ಚಿಂತೆಗೀಡುಮಾಡಿದೆ.
ಭಾರತದ ಬ್ಯಾಟಿಂಗ್ ವಿಚಾರವಾಗಿ ಇದೀಗ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತದ ಟಾಪ್ ಸ್ಕೋರರ್ ಯಾರು ಎಂಬುದನ್ನ ಭವಿಷ್ಯ ನುಡಿದಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಮುನ್ನಡೆ ಸಾಧಿಸಲಿದ್ದಾರೆ
ಭಾರತದ ಅಗ್ರ ರನ್ ಚೇಸರ್‌ಗಳಲ್ಲಿ ಒಬ್ಬರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಂದು ನೆಹ್ರಾ ಭವಿಷ್ಯ ನುಡಿದಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರೋಹಿತ್ ಮತ್ತು ಕೊಹ್ಲಿ ಇಬ್ಬರಲ್ಲಿ ಯಾರಾದರೂ ಅತಿ ಹೆಚ್ಚು ರನ್‌ಗಳಿಸಿದವರಲ್ಲಿ ಅಗ್ರಸ್ಥಾನವನ್ನು ಹೊಂದಬಹುದು ಎಂದು ನೆಹ್ರಾ ಹೇಳಿದರು.
''ರೋಹಿತ್ ಮತ್ತು ಕೊಹ್ಲಿ ಭಾರತದ ಹಿರಿಯ ಆಟಗಾರರು. ಇಬ್ಬರೂ ಒಬ್ಬರಿಗೊಬ್ಬರು ಉತ್ತಮರು. ಭಾರತದ ವಿಶ್ವಕಪ್ ಭರವಸೆಯ ದೊಡ್ಡ ತೂಕ ಇವರಿಬ್ಬರ ಮೇಲಿದೆ. ಅವರು ಫ್ಲಾಪ್ ಆದ್ರೆ, ಭಾರತವು ಹೆಚ್ಚಿನದನ್ನು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಆಸ್ಟ್ರೇಲಿಯಾದಿಂದ ಹಿಂತಿರುಗುವ ಟಿಕೆಟ್ ಖರೀದಿಸಬೇಕಾಗುತ್ತದೆ'' ಎಂದು ಆಶಿಶ್ ನೆಹ್ರಾ ತಿಳಿಸಿದ್ದಾರೆ.

ರೋಹಿತ್‌ಗೆ ಸ್ಥಿರತೆಯ ಕೊರತೆ
ಈ ವರ್ಷ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟಿ20 ಪ್ರದರ್ಶನಗಳು ಅತ್ಯುತ್ತಮವಾಗಿವೆ. ಭಾರತದ ನಾಯಕ ರೋಹಿತ್ ವಿಷಯಕ್ಕೆ ಬಂದಾಗ ಸ್ಥಿರತೆಯ ಸಮಸ್ಯೆ ಕಾಡುತ್ತಿದೆ. ರೋಹಿತ್ 23 ಪಂದ್ಯಗಳಲ್ಲಿ 540 ರನ್ ಗಳಿಸಿದ್ದಾರೆ. ಸ್ಟ್ರೈಕ್‌ರೇಟ್ 142.28. ಇದರಲ್ಲಿ ಎರಡು ಬಾರಿ ಅರ್ಧಶತಕ ದಾಖಲಿಸಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವರು ಎರಡು ಬಾರಿ ಡಕೌಟ್ ಆಗಿದ್ದರು. ಮೊದಲ ಅಭ್ಯಾಸ ಪಂದ್ಯದಲ್ಲಿ ಅವರು 3 ರನ್ ಗಳಿಸಿದ್ದರು. ಹೀಗಾಗಿ ಪ್ರಸ್ತುತ ಅವರ ಫಾರ್ಮ್ ಉತ್ತಮವಾಗಿಲ್ಲ.
ಫಿಟ್ನೆಸ್‌ನಲ್ಲೂ ಕೊಹ್ಲಿಯೇ ಕಿಂಗ್ : ಒಂದು ವರ್ಷದಲ್ಲಿ ಒಮ್ಮೆಯೂ ಗಾಯಗೊಳ್ಳದ ವಿರಾಟ್

ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು
ಅದೇ ಸಮಯದಲ್ಲಿ, ಮೂರು ವರ್ಷಗಳ ಕಳಪೆ ಫಾರ್ಮ್‌ನ ನಂತರ ವಿರಾಟ್ ಕೊಹ್ಲಿ ಈಗ ಅದ್ಭುತ ಕಂಬ್ಯಾಕ್ ಮಾಡಿದ್ದಾರೆ. ಕಳೆದ ಏಷ್ಯಾಕಪ್ ನಲ್ಲೂ ಕೊಹ್ಲಿ ಶತಕ ಸಿಡಿಸಿದ್ದರು. ಆಸ್ಟ್ರೇಲಿಯಾದಲ್ಲಿ ಉತ್ತಮ ದಾಖಲೆ ಹೊಂದಿರುವ ಕೊಹ್ಲಿ, ಟಿ20 ವಿಶ್ವಕಪ್‌ನಲ್ಲೂ ಈ ಸಾಧನೆಯನ್ನು ಪುನರಾವರ್ತಿಸುವ ಭರವಸೆ ಇದೆ. ಕೊಹ್ಲಿ ಈ ವರ್ಷ 14 ಪಂದ್ಯಗಳಲ್ಲಿ 485 ರನ್ ಗಳಿಸಿದ್ದಾರೆ. ಸರಾಸರಿ 44.09. ಇದರಲ್ಲಿ ನಾಲ್ಕು ಅರ್ಧಶತಕ ಹಾಗೂ ಒಂದು ಶತಕ ಸೇರಿದೆ.
ಏಷ್ಯಾಕಪ್ 2023: 14 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಕಾಲಿಡಲಿದೆ ಟೀಂ ಇಂಡಿಯಾ; ವರದಿ

ಟೀಂ ಇಂಡಿಯಾಗೆ ಬೌಲಿಂಗ್‌ನದ್ದೇ ತಲೆನೋವು
ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಸಮಸ್ಯೆ ಬೌಲಿಂಗ್. ಜಸ್ಪ್ರೀತ್ ಬುಮ್ರಾ ಇಲ್ಲದಿರುವುದು ದೊಡ್ಡ ತಲೆನೋವಾಗಿದೆ. ಬದಲಿ ಆಟಗಾರನಾಗಿ ಮೊಹಮ್ಮದ್ ಶಮಿ ಆಯ್ಕೆ ಕೊಂಚ ಸಮಾಧಾನ ತಂದಿದೆ. ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆಡಲಿದ್ದಾರೆ. ದೀಪಕ್ ಚಹಾರ್ ಕೂಡ ಗಾಯಗೊಂಡಿದ್ದಾರೆ. ಭಾರತದ ಪೇಸ್ ಲೈನ್ ಅಪ್ ಡಿಫೆಂಡ್ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗದು. ಆದ್ದರಿಂದ ಭಾರತದ ಮುಂದೆ ದೊಡ್ಡ ಸವಾಲೇ ಇದೆ.
ಪವರ್‌ಪ್ಲೇ ಓವರ್ ಜೊತೆಗೆ ಡೆತ್ ಓವರ್‌ಗಳಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಡದಿದ್ದಲ್ಲಿ ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications