ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ 2023: 14 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಕಾಲಿಡಲಿದೆ ಟೀಂ ಇಂಡಿಯಾ; ವರದಿ

India vs Pakistan

ಟೀಂ ಇಂಡಿಯಾ ಬರೋಬ್ಬರಿ 14 ವರ್ಷಗಳ ಬಳಿಕ ಪಾಕಿಸ್ತಾನದ ನೆಲಕ್ಕೆ ಕಾಲಿಡಲಿದೆ ಎಂದು ವರದಿಯಾಗಿದೆ. ಭಾರತ ತಂಡವನ್ನ ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಬಿಸಿಸಿಐ ಯೋಜಿಸುತ್ತಿದೆ ಎಂದು ಎನ್ನಲಾಗಿದೆ.

ಮುಂದಿನ ವರ್ಷ ಅಂದ್ರೆ 2023ರಲ್ಲಿ ಪಾಕಿಸ್ತಾನ ತಂಡ ಏಷ್ಯಾಕಪ್ ಟೂರ್ನಮೆಂಟ್‌ಗೆ ಆತಿಥ್ಯವಹಿಸಲಿದೆ. ಹೀಗಾಗಿ ಏಷ್ಯಾದ ಪ್ರಮುಖ ಕ್ರಿಕೆಟ್‌ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳ ಜೊತೆಗೆ ಇತರೆ ತಂಡಗಳು ಪಾಕ್‌ಗೆ ಪ್ರಯಾಣಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ಭಾರತ ಕೂಡ ಪಾಕ್‌ಗೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಮೀಸಲಾತಿ ನಿರೀಕ್ಷಿಸುತ್ತಿರುವ ಬಿಸಿಸಿಐ

ಮೀಸಲಾತಿ ನಿರೀಕ್ಷಿಸುತ್ತಿರುವ ಬಿಸಿಸಿಐ

ಹೌದು ಬರೋಬ್ಬರಿ ಎರಡು ದಶಕಗಳ ಬಳಿಕ ಪಾಕಿಸ್ತಾನ ತಂಡವು ಐಸಿಸಿ ಟೂರ್ನಮೆಂಟ್ ಆತಿಥ್ಯ ವಹಿಸಿಕೊಂಡಿದೆ. 2023ರಲ್ಲಿ ಏಷ್ಯಾಕಪ್ ಆತಿಥ್ಯ ವಹಿಸಿದ್ರೆ, 2025ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಯ ಆತಿಥ್ಯವು ಪಾಕಿಸ್ತಾನಕ್ಕೆ ದಕ್ಕಿದೆ. ಹೀಗಿರುವಾಗ ಪಾಕಿಸ್ತಾನದ ಪ್ರವಾಸದ ವಿಚಾರ ಬಂದಾಗ, ಎರಡು ಏಷ್ಯಾದ ರಾಷ್ಟ್ರಗಳ(ಭಾರತ-ಪಾಕ್) ನಡುವಿನ ರಾಜಕೀಯ ಸಂಘರ್ಷದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೀಸಲಾತಿಯನ್ನು ನಿರೀಕ್ಷಿಸುತ್ತದೆ.

ಮುಂಬರುವ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಭಾಗಿ ಕುರಿತಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಯೋಜಿಸಿದ್ದು, ಎಲ್ಲವೂ ಸರಿಯಾದ್ರೆ 14 ವರ್ಷಗಳ ಬಳಿಕ ಭಾರತ ಪಾಕ್‌ಗೆ ಏಷ್ಯಾಕಪ್ ಆಡಲು ತೆರಳಲಿದೆ.

ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಪಂತ್‌ಗೆ ಸ್ಥಾನ ಸಿಗೋದೆ ಅನುಮಾನ: ಕೋಚ್ ಮತ್ತು ನಾಯಕನ ನಂಬಿಕೆ ಕಳೆದುಕೊಂಡ ರಿಷಭ್

2025ರ ಚಾಂಪಿಯನ್ ಟ್ರೋಫಿಯ ಆತಿಥ್ಯವಹಿಸಲಿರುವ ಪಾಕಿಸ್ತಾನ

2025ರ ಚಾಂಪಿಯನ್ ಟ್ರೋಫಿಯ ಆತಿಥ್ಯವಹಿಸಲಿರುವ ಪಾಕಿಸ್ತಾನ

ಬಹುತೇಕ ಎರಡು ದಶಕದ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಮೆಂಟ್‌ಗೆ ಆತಿಥ್ಯ ವಹಿಸುವ ಅವಕಾಶ ದಕ್ಕಿಸಿಕೊಂಡಿದೆ. 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು, ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (ಪಿಸಿಬಿ) ಚಾಂಪಿಯನ್ ಟ್ರೋಫಿ ನಡೆಸಿಕೊಡುವ ಅವಕಾಶ ಪಡೆದಿದೆ.

2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಪಾಕಿಸ್ತಾನ, 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ದೇಶದಲ್ಲಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಇದೇ ವರ್ಷದಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ನ್ಯೂಜಿಲೆಂಡ್, ಮೊದಲ ಪಂದ್ಯದ ಟಾಸ್‌ ಆಗುವ ಕೆಲವು ನಿಮಿಷಗಳ ಮೊದಲು ತಮ್ಮ ಪ್ರವಾಸವನ್ನು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಅಲ್ಲೇ ಕೈ ಬಿಟ್ಟರು. ಇದಾದ ಬೆನ್ನಲ್ಲೇ ಪ್ರವಾಸ ಕೈಗೊಳ್ಳಬೇಕಿದ್ದ ಇಂಗ್ಲೆಂಡ್ ಕೂಡ ಭದ್ರತಾ ಸಮಸ್ಯೆಯಿಂದ ಪ್ರವಾಸವನ್ನು ರದ್ದುಗೊಳಿಸಿತ್ತು.

ಆದ್ರೆ ಇತ್ತೀಚೆಗಷ್ಟ ಆಸ್ಟ್ರೇಲಿಯಾ ಪಾಕ್‌ಗೆ ತೆರಳಿ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುವ ಮೂಲಕ ಇತರೆ ದೊಡ್ಡ ಕ್ರಿಕೆಟ್ ರಾಷ್ಟ್ರಗಳಿಗೆ ಭರವಸೆ ಮೂಡಿಸಿತು

ಟಿ20 ವಿಶ್ವಕಪ್ 2022: ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಅಧಿಕೃತ ಆಯ್ಕೆ, ಅಂತಿಮ 15 ಆಟಗಾರರ ಸ್ಕ್ವಾಡ್‌ ಇಲ್ಲಿದೆ

ನಿಜಕ್ಕೂ ಟೀಂ ಇಂಡಿಯಾ ಪಾಕ್‌ಗೆ ತೆರಳುತ್ತಾ?

ನಿಜಕ್ಕೂ ಟೀಂ ಇಂಡಿಯಾ ಪಾಕ್‌ಗೆ ತೆರಳುತ್ತಾ?

ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದು ಒಂದೂವರೆ ದಶಕ ಕಳೆದು ಹೋಗಿದೆ. ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್, ಐಸಿಸಿ ಟೂರ್ನಮೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಮಾಜಿ ವಿಶ್ವ ಚಾಂಪಿಯನ್ ಭಾರತ 2008 ರಲ್ಲಿ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿತ್ತು.

ಹೀಗಿರುವಾಗ 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿಯಲ್ಲಿ ಟೀಂ ಇಂಡಿಯಾ ನಿಜಕ್ಕೂ ಭಾಗವಹಿಸುತ್ತಾ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. ಅದಕ್ಕೂ ಮುನ್ನ ನಡೆಯಲಿರುವ ಏಷ್ಯಾಕಪ್‌ ವಿಚಾರಕ್ಕೆ ಬಂದ್ರೆ ಬಿಸಿಸಿಐ ಈ ಕುರಿತು ತೀರ್ಮಾನಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

Story first published: Friday, October 14, 2022, 21:29 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X