ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ಸಮೀಪಿಸುತ್ತಿದ್ದಂತೆ ಡೆತ್‌ ಓವರ್ ಬೌಲಿಂಗ್‌ ಕುರಿತು ತಲೆಕೆಡಿಸಿಕೊಂಡ ರೋಹಿತ್ ಶರ್ಮಾ

Rohit sharma

ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‌ಗೂ ಮುನ್ನ ಕೊನೆಯ ಟಿ20 ಸರಣಿಯನ್ನು ಬುಧವಾರದಿಂದ (ಸೆ. 28) ಆಡಲಿದೆ. ಕಾಂಗರೂ ನಾಡಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮಹಾಸಮರಕ್ಕೂ ಮುನ್ನ ಅಂತಿಮ ಟೂರ್ನಿ ಇದಾಗಿರುವುದರಿಂದ ಅಂತಿಮ ಪ್ಲೇಯಿಂಗ್ ಇಲೆವೆನ್‌ ಸಿದ್ಧತೆಗೆ ಕೊನೆಯ ಅವಕಾಶವಾಗಿದೆ.

ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಚುಟುಕು ಕ್ರಿಕೆಟ್ ಸರಣಿ ಗೆದ್ದಿರುವ ರೋಹಿತ್ ಶರ್ಮಾ ಪಡೆ, ದಕ್ಷಿಣ ಆಫ್ರಿಕಾ ವಿರುದ್ಧವೂ ಅಂತಹದ್ದೇ ಪ್ರದರ್ಶನವನ್ನ ಮುಂದುವರಿಸುವ ಲೆಕ್ಕಾಚಾರ ಹೊಂದಿದೆ. ಆದ್ರೆ ಅಂಕಿ-ಅಂಶಗಳನ್ನ ನೋಡಿದ್ರೆ, ಭಾರತ ಹರಿಣಗಳ ವಿರುದ್ಧ ಮಾತ್ರ ಟಿ20 ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಹೇಗಾದ್ರೂ ಮಾಡಿ ದಕ್ಷಿಣ ಆಫ್ರಿಕಾ ವಿರುದ್ಧ ಚುಟುಕು ಸರಣಿ ಗೆಲ್ಲಬೇಕೆಂಬುದು ಟೀಂ ಇಂಡಿಯಾ ಲೆಕ್ಕಾಚಾರವಾಗಿದೆ.

ಇದಕ್ಕೂ ಮುನ್ನ ಟೀಂ ಇಂಡಿಯಾ ಡೆತ್ ಬೌಲಿಂಗ್ ಸಮಸ್ಯೆಯನ್ನ ಪರಿಹರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶ ಇದಾಗಿದೆ. ಏಷ್ಯಾಕಪ್‌ನಲ್ಲಿ ಹಾಗೂ ಆಸಿಸ್ ವಿರುದ್ಧದ ಸರಣಿಯಲ್ಲಿ ಭಾರತದ ಡೆತ್ ಓವರ್‌ ಬೌಲಿಂಗ್‌ ದೌರ್ಬಲ್ಯ ಜಗಜ್ಜಾಹೀರಾಗಿದೆ. ಹೀಗಾಗಿ ಹಿಟ್‌ಮ್ಯಾನ್‌ ರೋಹಿತ್‌ ಟಿ20 ವಿಶ್ವಕಪ್‌ಗೂ ಮುನ್ನ ಕೆಲ ಸವಾಲುಗಳನ್ನ ಎದುರಿಸಲಿದ್ದಾರೆ.

ಹಾರ್ದಿಕ್, ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ

ಹಾರ್ದಿಕ್, ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ

ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಪ್ರೈಮ್ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಐಸಿಸಿ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳಸಲಿದೆ. ಇದೇ ದಿನ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ನಡೆಯುವ ಟಿ20 ಸರಣಿಯಿಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಭುವಿ ಹೊರಗುಳಿದಿದ್ದಾರೆ.

ಭಾರತ vs ದ. ಆಫ್ರಿಕಾ: ಅಗ್ನಿ ಪರೀಕ್ಷೆಗೆ ಸಿದ್ಧವಾಗಿದ್ದಾರೆ ಟೀಮ್ ಇಂಡಿಯಾದ ಮೂವರು ಆಟಗಾರು

ಮೊಹಮ್ಮದ್ ಶಮಿ ಕೋವಿಡ್-19ನಿಂದ ಇನ್ನೂ ಚೇತರಿಸಿಕೊಂಡಿಲ್ಲ

ಮೊಹಮ್ಮದ್ ಶಮಿ ಕೋವಿಡ್-19ನಿಂದ ಇನ್ನೂ ಚೇತರಿಸಿಕೊಂಡಿಲ್ಲ

ಟೀಂ ಇಂಡಿಯಾ ವಿಶ್ವಕಪ್‌ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯದಿದ್ರೂ ಸಹ ಸ್ಟ್ಯಾಂಡ್‌ ಬೈ ಆಟಗಾರನಾಗಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಕೋವಿಡ್-19 ಸೋಂಕಿನಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ. ಹೀಗಾಗಿ ಆಫ್ರಿಕನ್ನರ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶಮಿ ಆಡುವುದು ಬಹುತೇಕ ಅನುಮಾನವಾಗಿದೆ.

ಭಾರತ vs ದ. ಆಫ್ರಿಕಾ: ಟಿ20 ಸರಣಿಯ ಮೊದಲ ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಮಳೆ?: ಸಂಪೂರ್ಣ ಮಾಹಿತಿ

ಹರ್ಷಲ್ ಪಟೇಲ್ ಕಂಬ್ಯಾಕ್ ಆದ ಬಳಿಕ ದುಬಾರಿಯಾಗಿದ್ದಾರೆ!

ಹರ್ಷಲ್ ಪಟೇಲ್ ಕಂಬ್ಯಾಕ್ ಆದ ಬಳಿಕ ದುಬಾರಿಯಾಗಿದ್ದಾರೆ!

ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ದೊಡ್ಡ ಭರವಸೆ ಮೂಡಿಸಿರುವ ವೇಗಿಗಳಲ್ಲಿ ಹರ್ಷಲ್ ಪಟೇಲ್ ಕೂಡ ಒಬ್ಬರು. ಹರ್ಷಲ್ ಅವರು ಚೆಂಡಿನ ವೇಗದ ಮೇಲೆ ಉತ್ತಮ ನಿಯಂತ್ರಣ ಹೊಂದಿದ್ದಾರೆ ಮತ್ತು ಮಧ್ಯಮ ಓವರ್‌ಗಳಲ್ಲಿ ಮತ್ತು ಡೆತ್ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕೀಳುವ ಸಾಮರ್ಥ್ಯ ಹೊಂದಿದ್ದಾರೆ.

ದೊಡ್ಡ ಪಿಚ್‌ಗಳಲ್ಲಿ ಹರ್ಷಲ್ ಅವರ ನಿಧಾನಗತಿಯ ಎಸೆತಗಳು ತುಂಬಾ ಪ್ರಯೋಜನಕಾರಿ. ಆದರೆ ಗಾಯದ ವಿರಾಮದ ನಂತರ ಮರಳಿರುವ ಹರ್ಷಲ್ ಈಗ ತಮ್ಮ ಹಳೆಯ ಶ್ರೇಷ್ಠತೆಯನ್ನು ತೋರಿಸಲು ಸಾಧ್ಯವಾಗುತ್ತಿಲ್ಲ. ಚುಟುಕು ಫಾರ್ಮೆಟ್‌ನಲ್ಲಿ ರನ್‌ ಹಿಡಿದಿಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ ಇದನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದ ಹರ್ಷಲ್ ಕಳೆದೆರಡು ಪಂದ್ಯಗಳಲ್ಲಿ ದುಬಾರಿಯಾಗಿದ್ದಾರೆ.

ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಹರ್ಷಲ್ 12.20 ಎಕಾನಮಿ ದರದಲ್ಲಿ ಬೌಲ್ ಮಾಡಿದ್ರು. ಹರ್ಷಲ್ ನಾಲ್ಕು ಓವರ್‌ಗಳಲ್ಲಿ ವಿಕೆಟ್ ಇಲ್ಲದೆ 49 ರನ್ ಗಳಿಸಿದರು.

ಹೀಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಯಲ್ಲಿ ಸಂಪೂರ್ಣ ನಿರಾಸೆ ಮೂಡಿಸಿದ್ದ ಹರ್ಷಲ್ ಎರಡನೇ ಟಿ20ಯಲ್ಲೂ ಮುಜುಗರದ ಪ್ರದರ್ಶನ ನೀಡಿದರು. ಎರಡು ಓವರ್‌ಗಳಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇನ್ನು ಮೂರನೇ ಟಿ20ಯಲ್ಲಿ ಕೇವಲ 2 ಓವರ್ ಬೌಲಿಂಗ್‌ ಮಾಡಿ 18 ರನ್ ನೀಡಿ 1 ವಿಕೆಟ್ ಸಂಪಾದಿಸಿದರು. ಈ ಪಂದ್ಯದಲ್ಲಿ ಪೂರ್ಣ ಖೋಟಾ ಕೂಡ ಮುಗಿಸಲಿಲ್ಲ.

ಉಭಯ ತಂಡಗಳ ಸ್ಕ್ವಾಡ್‌

ಉಭಯ ತಂಡಗಳ ಸ್ಕ್ವಾಡ್‌

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಚುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎರ್ನಿಕ್ ನೊರ್ಕಿಯಾ, ವೇಯ್ನ್ ಪಾರ್ನೆಲ್, ಪ್ರೀ ಆಂಡಿಲ್ವೇ ಡ್ವಾಹ್ಲಿನ್, , ಕಗಿಸೊ ರಬಾಡ, ರಿಲೀ ರೊಸ್ಸೌ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್.

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್‌ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ.

Story first published: Tuesday, September 27, 2022, 18:13 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X