ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: ಟಿ20 ಸರಣಿಯ ಮೊದಲ ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಮಳೆ?: ಸಂಪೂರ್ಣ ಮಾಹಿತಿ

India vs South Africa, 1st T20I: Thiruvananthapuram Stadium Pitch Report and Weather and Other details

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಬುಧವಾರದಿಂದ ಆರಂಭವಾಗಲಿದ್ದು ಮೊದಲ ಪಂದ್ಯ ತಿರುವನಂತಪುರಂನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಕ್ತಾಯವಾದ ಬಳಿಕ ಟೀಮ್ ಇಂಡಿಯಾ ಮತ್ತೊಂದು ಬಲಿಷ್ಠ ಎದುರಾಳಿಯ ವಿರುದ್ಧ ತವರಿನಲ್ಲಿಯೇ ಎದುರಿಸಲಿದೆ. ಈ ಮೂಲಕ ಪ್ರತಿಷ್ಠಿತ ಟೂರ್ನಿಗೆ ಸಿದ್ಧತೆ ನಡೆಸಲಿದೆ.

ಈ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಕೆಲ ಸಣ್ಣ ಬದಲಾವಣೆಗಳು ಆಗುತ್ತಿದ್ದು ಅರ್ಷದೀಪ್ ಸಿಂಗ್ ಸ್ಕಾಡ್‌ಗೆ ಮರಳುತ್ತಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಿದ್ದು ಅವರು ಬೆಂಗಳೂರಿನ ಎನ್‌ಸಿಎಗೆ ತೆರಳಿ ರಿಹ್ಯಾಬ್‌ನಲ್ಲಿ ಭಾಗುಯಾಗಿ ಫಿಟ್‌ನೆಸ್ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಿಕೊಳ್ಳುತ್ತಿರುವ ತಿರುವನಂತಪುರಂ ಕ್ರೀಡಾಂಗಣದ ಹವಾಮಾಣ ವರದಿ ಹೇಗಿದೆ? ಪಿಚ್ ರಿಪೋರ್ಟ್ ಏನು ಹೇಳುತ್ತಿದೆ ಮೊದಲಾದ ಕೆಲ ಕುತೂಹಲಕಾರಿ ಮಾಹಿತಿಗಳನ್ನು ಈ ವರದಿಯಲ್ಲಿ ನೋಡೋಣ ಮುಂದೆ ಓದಿ..

ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಭಾರತದ ಟಿ20 ಅಂಕಿಅಂಶಗಳು

ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಭಾರತದ ಟಿ20 ಅಂಕಿಅಂಶಗಳು

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಗ್ರೀನ್‌ಫೀಲ್ಡ್‌ನಲ್ಲಿ ಆಯೋಜನೆಯಾಗಲಿದೆ. ಭಾರತ ಈ ಕ್ರೀಡಾಂಗಣದಲ್ಲಿ ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು ನ್ಯೂಜಿಲೆಂಡ್ ವಿರುದ್ಧ ಆಡಿದ್ದ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಸೋಲು ಅನುಭವಿಸಲಿದೆ.

ಗ್ರೀನ್‌ಫೀಲ್ಡ್ ಸ್ಟೇಡಿಯಂನ ಅಂಕಿಅಂಶಗಳು

ಗ್ರೀನ್‌ಫೀಲ್ಡ್ ಸ್ಟೇಡಿಯಂನ ಅಂಕಿಅಂಶಗಳು

ಗರಿಷ್ಠ ಮೊತ್ತ: ವೆಸ್ಟ್ ಇಂಡೀಸ್: 173/2
ಭಾರತದ ಗರಿಷ್ಠ ಮೊತ್ತ: 170/7
ಕನಿಷ್ಠ ಮೊತ್ತ: ನ್ಯೂಜಿಲೆಂಡ್: 61/6
ಭಾರತದ ಕನಿಷ್ಠ ಮೊತ್ತ: 67/5
ಹೈಯೆಸ್ಟ್ ಸ್ಕೋರ್: ಲೆಂಡ್ಲ್ ಸಿಮನ್ಸ್: 67 ಹೆಚ್ಚು ರನ್
ಭಾರತದ ಪರ ಹೈಯೆಸ್ಟ್ ಸ್ಕೋರ್ ಶಿವಂ ದುಬೆ: 54 ರನ್
ಹೆಚ್ಚಿನ ಸಿಕ್ಸರ್‌ಗಳು: ಶಿವಂ ದುಬೆ / ಎಲ್ ಸಿಮನ್ಸ್: 4 ಸಿಕ್ಸರ್
ಅತ್ಯುತ್ತಮ ಜೊತೆಯಾಟ: ಸಿಮನ್ಸ್ / ಇವಿನ್ ಲೂಯಿಸ್ಸ್: 73 ರನ್
ಭಾರತದ ಪರ ಅತ್ಯುತ್ತಮ ಜೊತೆಯಾಟ: ವಿರಾಟ್ ಕೊಹ್ಲಿ / ಶಿಮಂ ದುಬೆ: 41 ರನ್
ಹೆಚ್ಚು ವಿಕೆಟ್: ಜಸ್ಪ್ರೀತ್ ಬುಮ್ರಾ, ಇಶ್ ಸೋಧಿ, ಟಿಮ್ ಸೌಥಿ, ಹೇಡನ್ ವಾಲ್ಷ್, ಕೆಸ್ರಿಕ್ ವಿಲಿಯಮ್ಸ್: 2
ಅತ್ಯುತ್ತಮ ಬೌಲಿಂಗ್: ಜಸ್ಪ್ರೀತ್ ಬುಮ್ರಾ: 2/9

ಗ್ರೀನ್‌ಫೀಲ್ಡ್ ಪಿಚ್ ರಿಪೋರ್ಟ್

ಗ್ರೀನ್‌ಫೀಲ್ಡ್ ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್: ಗ್ರೀನ್ ಫೀಲ್ಡ್ ಪಿಚ್ ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳು ಇದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಭಿಮಾನಿಗಳು ಅನುಭವಿಸಿದ ರೋಮಾಂಚನಕಾರಿ ಪ್ರದರ್ಶನ ಈ ಸರಣಿಯಲ್ಲಿಯೂ ಉಂದುವರಿಯಲು ಪೂರಕವಾದ ವೇದಿಕೆಯನ್ನು ಗ್ರೀನ್ ಫೀಲ್ಡ್ ಪಿಚ್ ನೀಡಲಿದೆ. ಆದರೆ ಈ ಕ್ರೀಡಾಂಗಣದಲ್ಲಿ ಈ ಹಿಂದೆ ಬೌಲರ್‌ಗಳು ಕೂಡ ಯಶಸ್ಸು ಸಾಧಿಸಿರುವುದನ್ನು ಗಮನಿಸಿದ್ದೀವಿ. ಅದರಲ್ಲೂ ಆರಂಂಬಿಕ ಹಂತದಲ್ಲಿ ಬ್ಯಾಟರ್‌ಗಳಿಗೆ ಬೌಲರ್‌ಗಳು ಹೆಚ್ಚು ಕಾಟ ಕೊಟ್ಟರೆ ಅಚ್ಚರಿಯಿಲ್ಲ.

ಅಡ್ಡಿಯಾಗಲಿದೆಯಾ ಮಳೆ

ಅಡ್ಡಿಯಾಗಲಿದೆಯಾ ಮಳೆ

ಗ್ರೀನ್‌ಫೀಲ್ಡ್‌ನಲ್ಲಿ ನಡೆಯಲಿರುವ ಟಿ20 ಪಂದ್ಯದ ದಿನವಾದ ಬುಧವಾರದಂದು ರಾತ್ರಿ 25 ಡಿಗ್ರಿ ಉಷ್ಣಾಂಶವಿರಲಿದೆ. ಪಂದ್ಯ ನಡೆಯುವ ದಿನದಂದು 71 ಶೇಕಡಾದಷ್ಟು ಮೋಡ ಮುಸುಕಿದ ವಾತಾವರಣವಿರಲಿದೆ. ಈ ಅವಧಿಯಲ್ಲಿ ಒಂದು ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ 8 ಶೇಕಡಾದಷ್ಟಿದ್ದು ಒಂದು ಗಂಟೆ ಕಾಲ ಮಳೆಯಾಗುವನ ನಿರೀಕ್ಷೆಯಿದೆ. ಆದರೆ ಇದು 0.5 ಮಿಮೀವರೆಗೆ ಇರುವುದರಿಂದ ಪಂದ್ಯಕ್ಕೆ ಹಾನಿಯುಂಟಾಗುವ ಸಾಧ್ಯತೆಯಿಲ್ಲ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲೀ ರೊಸೊವ್, ತಬ್ರೈಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್

ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.

Story first published: Tuesday, September 27, 2022, 17:41 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X