ಕೊನೆಯ ಕ್ಷಣದಲ್ಲಿ ಪಾಕಿಸ್ತಾನ ಸ್ಕ್ವಾಡ್‌ನಲ್ಲಿ ಬದಲಾವಣೆ: ಫಖಾರ್ ಜಮಾನ್‌ಗೆ ಸ್ಥಾನ

ಐಸಿಸಿ ಟಿ20 ವಿಶ್ವಕಪ್ ಪ್ರಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ತಂಡಗಳು ಅಂತಿಮ ಹಂತದ ಸಿದ್ಧತೆ ನಡೆಸಿವೆ. ವಿಶ್ವಕಪ್ ಫೇವರಿಟ್ ಆಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಈಗಾಗಲೇ ಭರ್ಜರಿ ಅಭ್ಯಾಸ ಮಾಡ್ತಿವೆ. ಇನ್ನೆರಡು ದಿನಗಳಲ್ಲಿ ವಿಶ್ವಕಪ್‌ಗೆ ಚಾಲನೆ ಸಿಗಲಿದ್ದು, ಅಂತಿಮ ಸ್ಕ್ವಾಡ್ ಅನ್ನು ಭಾರತ ಮತ್ತು ಪಾಕಿಸ್ತಾನ ಘೋಷಿಸಿದೆ.
ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ತನ್ನ ಸ್ಕ್ವಾಡ್‌ನಲ್ಲಿ ಒಂದು ಬದಲಾವಣೆ ಮಾಡಿದ್ದು, ಉಸ್ಮಾನ್ ಖಾದಿರ್ ಬದಲು ಪ್ರಮುಖ ಬ್ಯಾಟರ್ ಫಜಾರ್ ಜಮಾನ್‌ಗೆ 15 ಆಟಗಾರರ ಸ್ಕ್ವಾಡ್‌ನಲ್ಲಿ ಸ್ಥಾನ ಒದಗಿಸಲಾಗಿದೆ.
ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ತ್ರಿಕೋನ್ ಟಿ20 ಸರಣಿ ವೇಳೆಯಲ್ಲಿ ಹೆಬ್ಬೆರಳು ಮುರಿತಕ್ಕೆ ಒಳಗಾದರು. ಫೀಲ್ಡಿಂಗ್ ವೇಳೆಯಲ್ಲಿ ಬಲಗೈ ಹೆಬ್ಬರಳು ಮುರಿತಕ್ಕೊಳಗಾಗಿದ್ದರ ಪರಿಣಾಮ ಟಿ20 ವಿಶ್ವಕಪ್‌ನಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಇವರ ಸ್ಥಾನಕ್ಕೆ ಬ್ಯಾಟರ್ ಫಖಾರ್ ಜಮಾನ್‌ಗೆ ಸ್ಥಾನ ನೀಡಲಾಗಿದೆ.
ಫಖಾರ್ ಜಮಾನ್‌ಗೆ ಈ ಮೂಲಕ ಅವಕಾಶದ ಬಾಗಿಲು ತೆರೆದಿದ್ದು ಲಂಡನ್‌ನಿಂದ ನೇರವಾಗಿ ಶಾಹಿನ್ ಅಫ್ರಿದಿ ಜೊತೆಗೆ ಬ್ರಿಸ್ಬೇನ್‌ಗೆ ಬರಲಿದ್ದಾರೆ. ಶಾಹಿನ್ ಅಫ್ರಿದಿ ಕೂಡ ಇತ್ತೀಚೆಗಷ್ಟೇ ಇಂಜ್ಯುರಿಯಿಂದ ಚೇತರಿಸಿಕೊಂಡಿದ್ದು, ತ್ರಿಕೋನ ಟಿ20 ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದರು.
ಫಖಾರ್ ಜಮಾನ್ ಅಕ್ಟೋಬರ್ 17ರಂದು ಇಂಗ್ಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 19ರಂದು ಅಫ್ಘಾನಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಲಭ್ಯವಿದ್ದು, ಅವರ ಫಿಟ್ನೆಸ್ ಹಾಗೂ ಫಾರ್ಮ್ ಆಧಾರದ ಮೇಲೆ ಅವಕಾಶ ನೀಡುವ ಸಾಧ್ಯತೆ ಇದೆ.
ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 23ರಂದು ತಮ್ಮ ವಿಶ್ವಕಪ್ ಅಭಿಯಾನವನ್ನ ಪ್ರಾರಂಭಿಸಲಿದ್ದು, ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಟೀಂ ಇಂಡಿಯಾ ಕೂಡ ತನ್ನ 15 ಆಟಗಾರರ ಸ್ಕ್ವಾಡ್ ಅನ್ನು ಅಂತಿಮಗೊಳಿಸಿದ್ದು ಮೊಹಮ್ಮದ್ ಶಮಿ ಬುಮ್ರಾ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಐಸಿಸಿ ಟಿ20 ವಿಶ್ವಕಪ್‌ಗೆ ಪಾಕಿಸ್ತಾನದ 15 ಆಟಗಾರರ ಸ್ಕ್ವಾಡ್ ಅನ್ನು ಈ ಕೆಳಗೆ ಕಾಣಬಹುದು.
ಪಾಕಿಸ್ತಾನದ 15 ಆಟಗಾರರ ಸ್ಕ್ವಾಡ್
ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜುನ್, , ಶಾಹೀನ್ ಶಾ ಆಫ್ರಿದಿ ಮತ್ತು ಶಾನ್ ಮಸೂದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications