ಟೆಸ್ಟ್ ಶ್ರೇಯಾಂಕ : ಟಾಪ್ 10 ಪಟ್ಟಿಯಿಂದ ಕೊಹ್ಲಿ ಔಟ್
ದುಬೈ, ಆಗಸ್ಟ್ 25: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿರುವ ಇತ್ತೀಚಿನ ಟೆಸ್ಟ್ ಶ್ರೇಯಾಂಕ ಪಟ್ಟಿಯ ಟಾಪ್ 10 ಸ್ಥಾನದಿಂದ ಹೊರಬಿದ್ದಿದ್ದಾರೆ.ಆರ್ ಅಶ್ವಿನ್ ಅವರು ಉತ್ತಮ ಪ್ರದರ್ಶನದೊಂದಿಗೆ ಟಾಪ್ 10ನಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಐಸಿಸಿ ಬೌಲರ್ ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಅವರು 8ನೇ ಸ್ಥಾನದಲ್ಲಿದ್ದರೆ, ಆಲ್ ರೌಂ ಡರ್ ಪಟ್ಟೀಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ದಿಗ್ಗಜ ಕುಮಾರ್ ಸಂಗಕ್ಕಾರ ಅವರು 7ನೇ ಸ್ಥಾನದೊಂದಿಗೆ ತಮ್ಮ ಕ್ರಿಕೆಟ್ ಜೀವನ ಅಂತ್ಯಗೊಳಿಸಿದ್ದಾರೆ. [ಸಂಗಕ್ಕಾರ ಕೊನೆ ಟೆಸ್ಟ್ ಕೊಹ್ಲಿಗೆ ಮೊದಲ ಗೆಲುವು]

ನಿವೃತ್ತಿ ಹೊಂದಿದ ಮತ್ತೊಬ್ಬ ಆಟಗಾರ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು 25 ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಟಾಪ್ 10ನಿಂದ ಹೊರಬಿದ್ದು 11ನೇ ಸ್ಥಾನ ಪಡೆದುಕೊಂಡಿದ್ದಾರೆ.
2007ರ ಡಿಸೆಂಬರ್ ನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಕ್ಯಾಂಡಿಯಲ್ಲಿ 92 ಹಾಗೂ 152ರನ್ ಚೆಚ್ಚಿದ್ದ ಕುಮಾರ್ ಸಂಗಕ್ಕಾರ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದರು. ತಮ್ಮ ಕೊನೆ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ 32 ಹಾಗೂ 18ರನ್ ಗಳಿಸಿ ವೃತ್ತಿ ಬದುಕು ಮುಗಿಸಿದರು.[ಸಂಗಕ್ಕಾರ ಕ್ರಿಕೆಟ್ ಬದುಕು ಅಂತ್ಯ]
ಸುಮಾರು 97 ಟೆಸ್ಟ್ ಹಾಗೂ 812 ದಿನಗಳ ಕಾಲ ನಂ.1 ಸ್ಥಾನದಲ್ಲಿದ್ದರು. 938ಕ್ಕೂ ಅಧಿಕ ಅಂಕ ಗಳಿಸಿದ್ದು ಸಂಗಕ್ಕಾರ ಸಾಧನೆ. ಮೈಕಲ್ ಕ್ಲಾರ್ಕ್ ಅವರು ಆಗಸ್ಟ್ 2009ರಲ್ಲಿ ಹಾಗೂ ಫೆಬ್ರವರಿ 2013ರಲ್ಲಿ ನಂ.1 ಸ್ಥಾನಕ್ಕೇರಿದ್ದರು.
ಐಸಿಸಿಯ ಟೆಸ್ಟ್ ಶ್ರೇಯಾಂಕ ಪಟ್ಟಿಯಲಿ ಸ್ಟೀವನ್ ಸ್ಮಿತ್ ಅವರು ಟಾಪ್ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಡಿ ವಿಲೆಯರ್ಸ್ ಹಾಗೂ ಇಂಗ್ಲೆಂಡಿನ ಜೋ ರೂಟ್ ನಂತರದ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾ ಹಾಗೂ ಭಾರತ ನಡುವಿನ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 28ರಂದು ಆರಂಭವಾಗಲಿದ್ದು ಒಂದು ವೇಳೆ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ಭಾರತ 6ನೇ ಸ್ಥಾನದಲ್ಲೇ ಮುಂದುವರೆಯಲಿದೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications