Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್ ಕ್ರಿಕೆಟ್ ಶ್ರೇಯಾಂಕ: ಭಾರತವನ್ನು ಕೆಳಕ್ಕೆ ದೂಡಿದ ಪಾಕಿಸ್ತಾನ

ಪಲ್ಲೆಕೆಲೆ(ಶ್ರೀಲಂಕಾ), ಜುಲೈ 07: ಶ್ರೀಲಂಕಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಭರ್ಜರಿ ಪ್ರದರ್ಶನದ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೇಲಕ್ಕೇರಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 7 ವಿಕೆಟ್ ಗಳಿಂದ ಮಂಗಳವಾರ ಗೆಲುವು ಸಾಧಿಸಿದೆ.

ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ಭಾರತ ಒಂದು ಸ್ಥಾನ ಕೆಳಕ್ಕೆ ಕುಸಿದು 5ನೇ ಸ್ಥಾನದಲ್ಲಿ ನಿಂತಿದೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ 97 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದ ಪಾಕಿಸ್ತಾನ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. [ಡಾನ್ ಬ್ರಾಡ್ಮನ್ ದಾಖಲೆ ಹಿಂದಿಕ್ಕಿದ ಯೂನಿಸ್ ಖಾನ್]

ICC Test Rankings

ಮೂರನೇ ಟೆಸ್ಟ್ ಪಂದ್ಯದಲ್ಲಿ ಯೂನಿಸ್ ಖಾನ್ 171 ಅಜೇಯ ರನ್ ಗಳಿಸಿ 382/3 ಸ್ಕೋರ್ ಮಾಡಿ ಶ್ರೀಲಂಕಾಕ್ಕೆ ಸೋಲುಣಿಸಿದ ಪಾಕಿಸ್ತಾನ ಈಗ ಐಸಿಸಿ ಪಟ್ಟಿಯಲ್ಲಿ ಆಸ್ಟ್ರೇಲಿಯಾಕ್ಕಿಂತ 10 ಅಂಕ ಹಿಂದಿದೆ. ಬುಧವಾರ (ಜುಲೈ 08) ದಿಂದ ಆಶ್ಯಸ್ ಸರಣಿ ಆರಂಭವಾಗುವುದರಿಂದ ಆಸ್ಟ್ರೇಲಿಯಾ ತನ್ನ ಎರಡನೇ ಸ್ಥಾನ ಕಾಯ್ದುಕೊಳ್ಳುವ ಅವಕಾಶವಿದೆ. ಅಗ್ರಸ್ಥಾನದಲ್ಲಿ 130 ಅಂಕ ಪಡೆದು ದಕ್ಷಿಣ ಆಫ್ರಿಕಾ ಎಲ್ಲರಿಗಿಂತ ಮುಂದಿದೆ.

ಜುಲೈ 7ಕ್ಕೆ ಅನ್ವಯವಾಗುವಂತೆ ಟೆಸ್ಟ್ ಶ್ರೇಯಾಂಕ ಪಟ್ಟಿ:
1. ದಕ್ಷಿಣ ಆಫ್ರಿಕಾ -130 ಅಂಕಗಳು
2. ಆಸ್ಟ್ರೇಲಿಯಾ- 111
3. ಪಾಕಿಸ್ತಾನ-101
4. ನ್ಯೂಜಿಲೆಂಡ್-101
5. ಭಾರತ-97
6. ಇಂಗ್ಲೆಂಡ್-97
7. ಶ್ರೀಲಂಕಾ- 92
8. ವೆಸ್ಟ್ ಇಂಡೀಸ್-81
9. ಬಾಂಗ್ಲಾದೇಶ-41
10. ಜಿಂಬಾಬ್ವೆ-5
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+