For Quick Alerts
ALLOW NOTIFICATIONS  
For Daily Alerts
 

ಡಾನ್ ಬ್ರಾಡ್ಮನ್ ದಾಖಲೆ ಹಿಂದಿಕ್ಕಿದ ಯೂನಿಸ್ ಖಾನ್

ಪಲ್ಲಕೆಲೆ, ಜು. 07: ಟೆಸ್ಟ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಯೂನಿಸ್ ಖಾನ್ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ದಾಖಲೆಯನ್ನು ಹಿಂದಕ್ಕೆ ಹಾಕಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್ ನಲ್ಲಿ ಶತಕ ದಾಖಲಿಸುವ ಮೂಲಕ ಯುನಿಸ್ ಖಾನ್ ದಾಖಲೆ ಬರೆದಿದ್ದಾರೆ.

ಶ್ರೀಲಂಕಾ ವಿರುದ್ಧ ಯೂನಿಸ್ ಖಾನ್ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ 30 ನೇ ಶತಕ ದಾಖಲು ಮಾಡಿದರು. ಡಾನ್ ಬ್ರಾಡ್ಮನ್ ಅವರ 29 ಶತಕದ ಮೈಲಿಗಲ್ಲನ್ನು ದಾಟಿ ಚಂದ್ರಪಾಲ್ ಮತ್ತು ಮ್ಯಾಥ್ಯೂ ಹೇಡನ್ ಸಾಲಿಗೆ ಸೇರಿಕೊಂಡರು.[ಎಲ್ಲ ಬಗೆಯ ಕ್ರಿಕೆಟ್ ನಿಯಮದಲ್ಲಿ ಮಹತ್ತರ ಬದಲಾವಣೆ]

cricket

ಇದರ ಜತೆಗೆ ಯೂನಿಸ್ ಖಾನ್ ವಿಶ್ವದಾಖಲೆ ಶ್ರೇಯವೊಂದನ್ನು ಪಡೆದುಕೊಂಡರು. 4 ನೇ ಇನಿಂಗ್ಸ್ ನಲ್ಲಿ 5 ಶತಕ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸುನೀಲ್ ಗಾವಾಸ್ಕರ್, ರಿಕಿ ಪಾಂಟಿಂಗ್, ರಾಮ್ ನರೇಶ್ ಸರವಣ್, ಗ್ರೇಮ್ ಸ್ಮಿತ್ ನಾಲ್ಕನೇ ಇನಿಂಗ್ಸ್ ನಲ್ಲಿ 4 ಶತಕ ಗಳಿಸಿದ ಇತರ ಆಟಗಾರರು. ವೃತ್ತಿ ಜೀವನದ 101 ನೇ ಟೆಸ್ಟ್ ಪಂದ್ಯ ಆಡುತ್ತಿರುವ ಖಾನ್ ಪಾಕಿಸ್ತಾನದ ಪರ 30 ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು.[ಅಡಿಲೇಡ್ ನಲ್ಲಿ ಪ್ರಪ್ರಥಮ ಹಗಲು -ರಾತ್ರಿ ಟೆಸ್ಟ್ ಪಂದ್ಯ]

ನಾಲ್ಕನೇ ಇನಿಂಗ್ಸ್ ನಲ್ಲಿ ಅತಿ ಹೆಚ್ಚು ಶತಕ ಸಾಧನೆ
* ಯೂನಿಸ್ ಖಾನ್ -5
* ಸುನೀಲ್ ಗಾವಾಸ್ಕರ್, ರಿಕಿ ಪಾಂಟಿಂಗ್, ರಾಮ್ ನರೇಶ್ ಸರವಣ್, ಗ್ರೇಮ್ ಸ್ಮಿತ್ -4 ಶತಕ
* ಜೇಫ್ರಿ ಬಾಯ್ಕಟ್, ಡಾನ್ ಬ್ರಾಡ್ಮನ್, ಗ್ರಹಾಂ ಗೂಚ್, ಗ್ರಾಂಡನ್ ಗ್ರೆಂಡ್ಗೆ, ಮಹೇಲಾ ಜಯವರ್ಧನೆ, ಹರ್ಬಟ್ ಸ್ಟಚ್ಛ್ ಫೆ, ಸಚಿನ್ ತೆಂಡೂಲ್ಕರ್ -3

ಪಾಕಿಸ್ತಾನದ ಪರ ಅತಿ ಹೆಚ್ಚು ಶತಕ ಗಳಿಸಿದವರು
* ಯೂನಿಸ್ ಖಾನ್ -30
* ಇಂಜಮಾಮ್- 25
* ಮೊಹಮದ್ ಯೂಸಫ್ -24
* ಜಾವೇದ್ ಮಿಯಾಂದಾದ್ -23
* ಸಲೀಂ ಮಲಿಕ್ -15

ಟೆಸ್ಟ್ ಕ್ರಿಕೆಟ್ ನ ಅತಿ ಹೆಚ್ಚು ಶತಕ ಸರದಾರರು
* ಸಚಿನ್ ತೆಂಡೂಲ್ಕರ್-51
* ಜಾಕಸ್ ಕಾಲಿಸ್- 45
* ರಿಕಿ ಪಾಂಟಿಂಗ್- 41
* ಕುಮಾರ್ ಸಂಗಾಕ್ಕಾರ - 38
* ರಾಹುಲ್ ದ್ರಾವಿಡ್- 36
* ಗಾವಾಸ್ಕರ್, ಬ್ರಿಯಾನ್ ಲಾರಾ, ಮಹೇಲಾ ಜಯವರ್ಧನೆ -34
* ಸ್ಟೀವ್ ವಾ - 32
* ಯೂನಿಸ್, ಹೇಡನ್, ಚಂದ್ರಪಾಲ್- 30
* ಡಾನ್ ಬ್ರಾಡ್ಮನ್ -29(ಒನ್ ಇಂಡಿಯಾ ಕ್ರಿಕೆಟ್)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+