Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup 2023: ಭಾರತ vs ವೆಸ್ಟ್ ಇಂಡೀಸ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ

ICC Womens T20 World Cup 2023: India vs West Indies Toss Report, Playing 11 And Live Score

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡ ಬಿ ಗುಂಪಿನ ತನ್ನ ಎರಡನೇ ಪಂದ್ಯವನ್ನು ಬುಧವಾರ, ಫೆಬ್ರವರಿ 15ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧ ಆಡುತ್ತಿದೆ.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕಿ ಹೇಯಾಲಿ ಮ್ಯಾಥ್ಯೂಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಹೀಗಾಗಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳೆಯರು ತಮ್ಮ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಯಶಸ್ವಿಯಾಗಿ ಆರಂಭಿಸಿದೆ.

ಪಾಕಿಸ್ತಾನ ವಿರುದ್ಧ ಆರಂಭಿಕ ಹಿನ್ನಡೆ ನಂತರ ಜೆಮಿಮಾ ರೋಡ್ರಿಗಸ್ ಅವರ ಅಜೇಯ 53 ರನ್ ಮತ್ತು ರಿಚಾ ಘೋಷ್ ಅವರ ಔಟಾಗದೇ 31 ರನ್‌ಗಳ ನೆರವಿನಿಂದ ಭಾರತ ತಂಡ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತ್ತು.

ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಪಂದ್ಯ ವಿಜೇತ ಪ್ರದರ್ಶನ ನೀಡಿದ್ದರು. ಇನ್ನು ಕೈಬೆರಳು ಗಾಯದಿಂದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡದ ಆಡುವ ಬಳಗಕ್ಕೆ ಹಿಂದಿರುಗಿದ್ದಾರೆ. ಅಲ್ಲದೇ ದೇವಿಕಾ ವೈದ್ಯ ಕೂಡ ಆಡುವ ಹನ್ನೊಂದರ ಬಳಗದಲ್ಲಿದ್ದಾರೆ.

ಭಾರತ ಮಹಿಳೆಯರು vs ವೆಸ್ಟ್ ಇಂಡೀಸ್ ಆಡುವ 11ರ ಬಳಗ
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ದೇವಿಕಾ ವೈದ್ಯ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್.

ವೆಸ್ಟ್ ಇಂಡೀಸ್: ಹೇಲಿ ಮ್ಯಾಥ್ಯೂಸ್ (ನಾಯಕಿ), ಸ್ಟಾಫನಿ ಟೇಲರ್, ಶೆಮೈನ್ ಕ್ಯಾಂಪ್ಬೆಲ್ಲೆ, ಶಬಿಕಾ ಗಜ್ನಾಬಿ, ಚಿನೆಲ್ಲೆ ಹೆನ್ರಿ, ಚೆಡಿಯನ್ ನೇಷನ್, ಅಫಿ ಫ್ಲೆಚರ್, ಶಾಮಿಲಿಯಾ ಕಾನ್ನೆಲ್, ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್), ಕರಿಷ್ಮಾ ರಾಮ್ಹರಾಕ್, ‍ಷೇಕೆರಾ ಸೆಲ್ಮನ್.

Story first published: Wednesday, February 15, 2023, 18:10 [IST]
Other articles published on Feb 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+