ICC ಮಹಿಳೆಯರ ವಿಶ್ವಕಪ್ 2022: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ವನಿತೆಯರಿಗೆ ಗೆಲುವು

ಮೌಂಟ್ ಮೌಂಗನ್ಯುಯಿಯ ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮಹಿಳೆಯರ ವಿರುದ್ಧ ಆಸ್ಟ್ರೇಲಿಯಾ ವನಿತೆಯರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮಹಿಳಾ ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನ ಮಣಿಸಿದ್ದ ಆಸ್ಟ್ರೇಲಿಯಾ , ಇದೀಗ ಪಾಕಿಸ್ತಾನ ವಿರುದ್ಧವೂ ಗೆಲ್ಲುವ ಮೂಲಕ ಯಶಸ್ವಿ ಹೆಜ್ಜೆ ಇರಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎದುರಾಳಿ ಪಾಕಿಸ್ತಾನವನ್ನ 190ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆರಂಭಿಕ ಆಘಾತ ಅನುಭವಿಸಿದ ಪಾಕಿಸ್ತಾನ ಬೇಗನೆ ಓಪನರ್‌ಗಳಿಬ್ಬರನ್ನ ಕಳೆದುಕೊಂಡಿತು. ಆದ್ರೆ ನಾಯಕ ಮರೂಫ್ ಅಜೇಯ 78 ರನ್‌ಗಳು ಹಾಗೂ ಅಲಿಯಾ ರಿಯಾಜ್ 53ರನ್‌ಗಳ ನಿಧಾನಗತಿಯ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್‌ಗಳನ್ನ ದಾಖಲಿಸಿತು.
ಟೆಸ್ಟ್ ಕ್ರಿಕೆಟ್ ರೀತಿಯಲ್ಲಿ ಬ್ಯಾಟ್ ಬೀಸಿದ ಪಾಕ್ ನಾಯಕಿ ಬಿಸ್ಮಾ ಮರೂಫ್ 122 ಎಸೆತಗಳಲ್ಲಿ ಅಜೇಯ 78, ಅಲಿಯಾ ರಿಯಾಜ್ 109 ಎಸೆತಗಳಲ್ಲಿ 53 ರನ್‌ಗಳಿಸಿದ್ದು ಸಹ ತಂಡಕ್ಕೆ ಹಿನ್ನೆಡೆಗೆ ಕಾರಣಗಳಲ್ಲಿ ಒಂದಾಗಿದೆ. ಉಳಿದ ಯಾವ ಆಟಗಾರ್ತಿಯು ತಂಡಕ್ಕೆ ನೆರವಾಗಲಿಲ್ಲ.
191ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ 79 ಎಸೆತಗಳಲ್ಲಿ 72 ರನ್ ಸಿಡಿಸುವ ಮೂಲಕ ತಂಡಕ್ಕೆ ಆಧಾರವಾದ್ರು. ರ್ಯಾಚೆಲ್ ಹೈನ್ಸ್ 34, ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಸಿಡಿಸಿದ್ರು.
ಕೊನೆಯಲ್ಲಿ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅಜೇಯ 26, ಬೆತ್ ಮೂನಿ ಅಜೇಯ 23ರನ್ ಕಲೆಹಾಕುವ ಮೂಲಕ ಆಸ್ಟ್ರೇಲಿಯಾ 34.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ 2 ಪಂದ್ಯದಲ್ಲಿ ಜಯ ಸಾಧಿಸಿ 4 ಪಾಯಿಂಟ್ಸ್‌ಗಳೊಂದಿಗೆ ಟೇಬಲ್ ಟಾಪರ್ ಆಗಿದೆ. ಮತ್ತೊಂದೆಡೆ ಎರಡೂ ಪಂದ್ಯ ಸೋತ ಪಾಕಿಸ್ತಾನ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ ತಳ ಮುಟ್ಟಿದೆ.
ಆಸ್ಟ್ರೇಲಿಯಾ ಪರ 72 ರನ್ ಸಿಡಿಸಿದ ಅಲಿಸಾ ಹೀಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications