ICC Womens World Cup 2022: ಆಸ್ಟ್ರೇಲಿಯಾ ವಿರುದ್ಧ ಹಾಲಿ ಚಾಂಪಿಯನ್ನರಿಗೆ ಮುಖಭಂಗ

ಹ್ಯಾಮಿಲ್ಟನ್ ಸೆಡನ್ ಪಾರ್ಕ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಮುಂಖಭಂಗವಾಗಿದೆ. ಆಸ್ಟ್ರೇಲಿಯಾ ನೀಡಿದ 311 ರನ್‌ಗಳ ಗುರಿ ಬೆನ್ನತ್ತಲು ಸಾಗಿದ ಇಂಗ್ಲೆಂಡ್ ಮಹಿಳಾ ತಂಡವು ನಿಗದಿತ 50 ಓವರ್‌ಗಳಲ್ಲಿ 298 ರನ್‌ಗಳಿಸಲಷ್ಟೇ ಶಕ್ತವಾಗಿದೆ. ಪರಿಣಾಮ ಆಸ್ಟ್ರೇಲಿಯಾ 12ರನ್‌ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮಹಿಳಾ ಪಡೆ ಆಸೀಸ್ ತಂಡವನ್ನ ಕಟ್ಟಿಹಾಕುವಲ್ಲಿ ವಿಫಲಗೊಂಡಿತು. ರಾಚೆಲ್ ಹೇನ್ಸ್ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 310 ರನ್ ಕಲೆಹಾಕಿತು. ರಾಚೆಲ್ 131 ಎಸೆತಗಳಲ್ಲಿ 130 ರನ್ ಕಲೆಹಾಕಿದ್ರೆ, ಅಲಿಸ್ಸಾ ಹೀಲಿ 28 ರನ್‌ಗೆ ಬೇಗನೆ ವಿಕೆಟ್ ಒಪ್ಪಿಸಿದ್ರೆ, ಆದ್ರೆ ಆಸೀಸ್ ನಾಯಕ ಮೆಗ್ ಲ್ಯಾನಿಂಗ್ 86 ರನ್‌ಗಳ ಕೊಡುಗೆಯ ಮೂಲಕ ಎರಡನೇ ವಿಕೆಟ್‌ಗೆ ದ್ವಿಶತಕ ಜೊತೆಯಾಟವಾಡಿದ್ರು.
ಕೊನೆಯಲ್ಲಿ ಬೆತ್ ಮೂನಿ ಅಜೇಯ 27, ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅಜೇಯ 14 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 300ರ ಗಡಿದಾಟಿತು. ಅಂತಿಮವಾಗಿ ಇಂಗ್ಲೆಂಡ್‌ಗೆ 311ರನ್ ಟಾರ್ಗೆಟ್ ನೀಡಿತು.
ಈ ಟಾರ್ಗೆಟ್ ಬೆನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು ಓಪನರ್ ವಿಂಟರ್‌ಫೀಲ್ಡ್ ಹಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಎರಡನೇ ವಿಕೆಟ್‌ಗೆ ಟಾಮಿ ಬೇಮೌಂಟ್ (74) ಮತ್ತು ಹೇದರ್ ನೈಟ್ (40) ಜಾಸ್ತಿ ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.
ಒಂದೆಡೆ ನತಾಲಿ ಸ್ಕೀವರ್ ಅಜೇಯ ಶತಕವು ಇಂಗ್ಲೆಂಡ್ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ಕೀವರ್‌ಗೆ ಸಾಥ್ ಕೊಡುವಲ್ಲಿ ವಿಫಲಗೊಂಡರು. ಪರಿಣಾಮ 85 ಎಸೆತಗಳಲ್ಲಿ 109 ರನ್ ಕಲೆಹಾಕಿದ್ದ ನತಾಲಿ ಸ್ಕೀವರ್ ನಿರಾಸೆಯಿಂದ ಸೋಲಿನೊಂದಿಗೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು.
ಅಂತಿಮವಾಗಿ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 298 ರನ್ ಕಲೆಹಾಕುವ ಮೂಲಕ ಸೋಲೊಪ್ಪಿಕೊಂಡಿದೆ. ಈ ಮೂಲಕ ಹಾಲಿ ಚಾಂಪಿಯನ್ನರಿಗೆ ಮೊದಲ ಪಂದ್ಯದಲ್ಲಿ ನಿರಾಸೆ ಉಂಟಾಗಿದೆ.
ಆಸ್ಟ್ರೇಲಿಯಾ ಮಹಿಳಾ ತಂಡದ ಪರ ಅಲನಾ ಕಿಂಗ್ 3, ತಹಿಲ ಮೆಗ್ರಾಥ್ 2, ಜೆಸ್ ಜೊನಾಸ್ಸೆನ್ 2, ಮೇಘನಾ ಸ್ಕಟ್ 1 ವಿಕೆಟ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications