ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ಮಹಿಳಾ ವಿಶ್ವಕಪ್ 2022: ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್, ಭಾರತಕ್ಕೆ ಆರಂಭಿಕ ಆಘಾತ LIVE

ICC womens world cup 2022

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2022ರ 18ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತದ ವನಿತೆಯರು ಆರಂಭಿಕ ಆಘಾತ ಅನುಭವಿಸಿದ್ದಾರೆ.

ಆಸೀಸ್‌ನ 19 ವರ್ಷದ ಬಲಗೈ ವೇಗದ ಬೌಲರ್ ಡಾರ್ಸಿ ಬ್ರೌನ್ ಭಾರತದ ಆರಂಭಿಕರನ್ನ ಬಹುಬೇಗನೆ ಪೆವಿಲಿಯನ್‌ಗೆ ಅಟ್ಟಿದರು. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ 11 ಎಸೆತಗಳಲ್ಲಿ 10 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಶಫಾಲಿ ವರ್ಮಾ 16 ಎಸೆತಗಳಲ್ಲಿ 12 ರನ್ ಕಲೆಹಾಕಿ ಅದೇ ಬೌಲರ್‌ಗೆ ಔಟಾಗಿದ್ದಾರೆ.

ನಿಮ್ಮನ್ನು ಈ ರೀತಿ ನೋಡಲು ನೋವಾಗುತ್ತದೆ: ಪಾಂಡ್ಯ ಬ್ರದರ್ಸ್ ಕುರಿತು ಪಂಖೂರಿ ಶರ್ಮಾ ಭಾವನಾತ್ಮಕ ಪೋಸ್ಟ್ನಿಮ್ಮನ್ನು ಈ ರೀತಿ ನೋಡಲು ನೋವಾಗುತ್ತದೆ: ಪಾಂಡ್ಯ ಬ್ರದರ್ಸ್ ಕುರಿತು ಪಂಖೂರಿ ಶರ್ಮಾ ಭಾವನಾತ್ಮಕ ಪೋಸ್ಟ್

30 ರನ್‌ಗಳೊಳಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡ ಭಾರತ ತಂಡಕ್ಕೆ ಮೂರನೇ ವಿಕೆಟ್‌ಗೆ ಯಾಸ್ತಿಕ ಭಾಟಿಯಾ ಮತ್ತು ನಾಯಕಿ ಮಿಥಾಲಿ ರಾಜ್ ಆಧಾರವಾಗಿದ್ದಾರೆ. ಯಾಸ್ತಿಕಾ ಭಾಟಿಯಾ ಅಜೇಯ 22, ಮಿಥಾಲಿ ರಾಜ್ ಅಜೇಯ 18 ರನ್ ಕಲೆಹಾಕಿದ್ದು, ಪಂದ್ಯದ ಲೈವ್‌ ಸ್ಕೋರ್ ಈ ಕೆಳಗಿದೆ.

1
9909-nonopta-49817

ಭಾರತ ವನಿತೆಯರ ಪ್ಲೇಯಿಂಗ್ 11
ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

ಬೆಂಚ್: ಪೂನಂ ಯಾದವ್, ತನಿಯಾ ಭಾಟಿಯಾ, ರೇಣುಕಾ ಸಿಂಗ್, ದೀಪ್ತಿ ಶರ್ಮಾ

ಆಸ್ಟ್ರೇಲಿಯಾ ವನಿತೆಯರ ಪ್ಲೇಯಿಂಗ್ 11
ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ರಾಚೆಲ್ ಹೇನ್ಸ್, ಮೆಗ್ ಲ್ಯಾನಿಂಗ್ (ನಾಯಕಿ), ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಸ್ಚುಟ್, ಡಾರ್ಸಿ ಬ್ರೌನ್

ಬೆಂಚ್: ಗ್ರೇಸ್ ಹ್ಯಾರಿಸ್, ನಿಕೋಲಾ ಕ್ಯಾರಿ, ಅಮಂಡಾ ವೆಲ್ಲಿಂಗ್ಟನ್, ಅನ್ನಾಬೆಲ್ ಸದರ್ಲ್ಯಾಂಡ್

Story first published: Saturday, March 19, 2022, 7:55 [IST]
Other articles published on Mar 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X