Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC ಮಹಿಳಾ ವಿಶ್ವಕಪ್ 2022: ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ವನಿತೆಯರು

South africa vs Newzealand

ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ 2022ರ 16ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಮಹಿಳೆಯರು 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದ್ದಾರೆ.

ನ್ಯೂಜಿಲೆಂಡ್ ನೀಡಿದ 229 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ 49.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿ ಗೆಲುವಿನ ದಡ ತಲುಪಿದೆ. ಆರಂಭಿಕ ಆಘಾತ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ಪರ ಲಾರಾ ವೊಲ್ವಾರ್ಡ್‌ ಮತ್ತು ತಜಿಮಾ ಬೈಟ್ಸ್‌ ಅರ್ಧಶತಕದ ಜೊತೆಯಾಟ ತಂಡವನ್ನ ಆರಂಭಿಕ ಕುಸಿತದಿಂದ ಪಾರು ಮಾಡಿತು.

ತಜೀಮ್ ಬ್ರಿಟ್ಸ್‌ 18ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ, ನಾಯಕಿ ಸುನೆ ಲುಸ್ 51 ರನ್‌ಗಳ ಕೊಡುಗೆ ಮತ್ತು ತಂಡದ ಅಡಿಪಾಯ ಹಾಕಿಕೊಟ್ಟ ಲಾರಾ ವೊಲ್ವಾರ್ಡ್‌ 67ರನ್‌ಗಳ ಕೊಡುಗೆಯು ತಂಡವನ್ನ ಗೆಲುವಿನ ದಡದತ್ತ ಕೊಂಡೊಯ್ಯಲು ಸಾಧ್ಯವಾಯಿತು.

ಕೆಳಕ್ರಮಾಂಕದ ಬ್ಯಾಟರ್ ಮರಿಜನ್ನೆ ಕ್ಯಾಪ್ ಅಜೇಯ 34 ರನ್‌ಗಳ ಕೊಡುಗೆ ದಕ್ಷಿಣ ಆಫ್ರಿಕಾ ಗೆಲುವಿನ ಗೆರೆ ದಾಟಲು ಸಾಧ್ಯವಾಯಿತು. ಇನ್ನು ಮೂರು ಎಸೆತಗಳು ಬಾಕಿ ಇರುವಂತೆ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಆರಂಭಿಕ ಆಘಾತದ ನಡುವೆ ನಾಯಕಿ ಸೂಫಿ ಡಿವೈನ್ 93, ಅಮೆಲಿಯಾ ಕೆರ್ರ್‌ 42, ಮ್ಯಾಡಿ ಗ್ರೀನ್ 30, ಬ್ರೂಕ್ ಹಾಲ್ಲಿಡೇ 24 ರನ್‌ಗಳ ಆಟದಿಂದಾಗಿ ತಂಡದ ಮೊತ್ತ 200ರ ಗಡಿದಾಟಲು ಸಾಧ್ಯವಾಯಿತು. ಆದರೆ ಮಧ್ಯಮ ಹಾಗೂ ಕೆಳಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ನ್ಯೂಜಿಲೆಂಡ್ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 228 ರನ್‌ಗಳಿಗೆ ಆಲೌಟ್ ಆಯಿತು.

ದೇಶಕ್ಕಾಗಿ ಅಲ್ಲ ಹುಡುಗಿಯರಿಗಾಗಿ ಕ್ರಿಕೆಟ್ ಆಡಿದ್ರಾ ಶಾಯಬ್ ಅಕ್ತರ್? | Oneindia Kannada

ದಕ್ಷಿಣ ಆಫ್ರಿಕಾ ಪರ ಶಬ್ನಿಮ್ ಇಸ್ಮಾಯಿಲ್ 3, ಮರಿಜನ್ನೆ ಕ್ಯಾಪ್ 2, ಅಯಾಬೊಂಗ ಖಾಖಾ 3 ವಿಕೆಟ್ ಪಡೆದು ಮಿಂಚಿದ್ರು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ವನಿತೆಯರು ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನ ತಲುಪಿದ್ದಾರೆ. 4 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ 8 ಪಾಯಿಂಟ್ಸ್‌ ಕಲೆಹಾಕಿದ್ದು, ಅಷ್ಟೇ ಅಂಕ ಕಲೆಹಾಕಿರುವ ಆಸ್ಟ್ರೇಲಿಯಾಗಿಂತ ನೆಟ್‌ ರನ್‌ನಲ್ಲಷ್ಟೇ ಹಿಂದಿದ್ದಾರೆ.

Story first published: Friday, March 18, 2022, 8:52 [IST]
Other articles published on Mar 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+