Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2015: ಕ್ವಾರ್ಟರ್ ಫೈನಲ್ ತಂಡ, ವೇಳಾಪಟ್ಟಿ

ಅಡಿಲೇಡ್, ಮಾ.15: ವಿಶ್ವಕಪ್ 2015 ಟೂರ್ನಿಯ ಲೀಗ್ ಹಂತದ ರೋಚಕ ಅಂತ್ಯ ಪಡೆದಿದೆ. 6 ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಐಸಿಸಿ ವಿಶ್ವಕಪ್ ಟೂರ್ನಿ 2015ನ ನಾಕೌಟ್ ಹಂತ ತಲುಪಿರುವ ತಂಡಗಳು ಈಗ ಇನ್ನುಳಿದ ಮೂರು ಮೆಟ್ಟಿಲೇರಿ ಕಪ್ ಎತ್ತಲು ಕಾತುರದಿಂದ ಕಾದಿವೆ.

ಫೆ.14ರಂದು ಆರಂಭವಾದ ವಿಶ್ವಕಪ್ 2015 ಟೂರ್ನಿ 42 ಪಂದ್ಯಗಳು ರೌಂಡ್ ರಾಬಿನ್ ಹಂತದಲ್ಲಿ ಯಶಸ್ವಿಯಾಗಿ ನಡೆದಿದೆ.ಮೊಟ್ಟ ಮೊದಲ ಬಾರಿಗೆ ಡಬ್ಬಲ್ ಸೆಂಚುರಿ ಜೊತೆಗೆ ಹತ್ತು ಹಲವು ದಾಖಲೆಗಳು ಧೂಳಿಪಟವಾಗಿದೆ.

ಮಾ.21ರೊಳಗೆ ಎಂಟು ತಂಡಗಳು ನಾಲ್ಕು ತಂಡಗಳಾಗಿ ಟೂರ್ನಿಯ ಉಪಾಂತ್ಯ ತಲುಪಲಿವೆ. ಮಾ.29ರಂದು ಮೆಲ್ಬೋರ್ನ್ ನಲ್ಲಿ ಅಂತಿಮ ಹಣಾಹಣಿ ನಡೆಯಲಿದೆ.

ಟೂರ್ನಿಯಿಂದ ಹೊರ ಬಿದ್ದ ತಂಡಗಳು: ಇಂಗ್ಲೆಂಡ್, ಜಿಂಬಾಬ್ವೆ, ಐರ್ಲೆಂಡ್, ಅಫ್ಘಾನಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಸ್ಕಾಟ್ಲೆಂಡ್.

ಸ್ಕಾಟ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಟೂರ್ನಿಯಲ್ಲಿ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗದೆ ಮನೆ ಕಡೆ ಮುಖ ಮಾಡಿವೆ. ಮೊಟ್ಟ ಮೊದಲ ಬಾರಿಗೆ ದಾಖಲೆಯ ಲೀಗ್ ಹಂತದ 6 ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ಆಯಾ ಗುಂಪಿನ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ತಲುಪಿವೆ.

ICC World Cup 2015 Quarter-final Teams, Venues, Schedule

ಕ್ವಾರ್ಟರ್ ಫೈನಲ್ ಹಂತದ ವೇಳಾಪಟ್ಟಿ (ಭಾರತೀಯ ಕಾಲಮಾನ ಪ್ರಕಾರ)

ಕ್ವಾರ್ಟರ್ ಫೈನಲ್ ದಿನಾಂಕ/ದಿನ ತಂಡಗಳು ಕ್ರೀಡಾಂಗಣ ಸಮಯ
1 ಮಾ.18, ಬುಧವಾರ ಶ್ರೀಲಂಕಾ (A3) vs ದಕ್ಷಿಣ ಆಫ್ರಿಕಾ (B2) ಸಿಡ್ನಿ 9AM IST
2 ಮಾ.19 ಗುರುವಾರ ಬಾಂಗ್ಲಾದೇಶ (A4) vs ಭಾರತ (B1) ಮೆಲ್ಬೋರ್ನ್ 9AM IST
3 ಮಾ.20 ಶುಕ್ರವಾರ ಆಸ್ಟ್ರೇಲಿಯಾ (A2) vs ಪಾಕಿಸ್ತಾನ (B3) ಅಡಿಲೇಡ್ 9AM IST
4 ಮಾ.21 ಶನಿವಾರ ನ್ಯೂಜಿಲೆಂಡ್ (A1) vs ವೆಸ್ಟ್ ಇಂಡೀಸ್ (B4) ವೆಲ್ಲಿಂಗ್ಟನ್ 6.30 AM IST
ಸೆಮಿಫೈನಲ್ ಮಾ.24 (ಆಕ್ಲೆಂಡ್) 6.30 AM ಹಾಗೂ ಮಾ.26(ಸಿಡ್ನಿ) 9AM IST
ಫೈನಲ್ ಮಾ.29 (ಮೆಲ್ಬೋರ್ನ್) 9AM IST

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+