ಸ್ಕಾಟ್ಲೆಂಡ್ ವಿರುದ್ಧ ಬಾಂಗ್ಲಾದೇಶ ಬೊಂಬಾಟ್ ಜಯ
ನೆಲ್ಸನ್, ಮಾ.5: ಸ್ಕಾಟ್ಲೆಂಡ್ ನ ಆರಂಭಿಕ ಆಟಗಾರ ಕೈಲಿ ಕೋಜರ್ ವಿಶ್ವಕಪ್ ಟೂರ್ನಿಯಲ್ಲಿ ಹೊಡೆದ ಮೊಟ್ಟಮೊದಲ ಭರ್ಜರಿ ಶತಕದ ಸಂಭ್ರಮವನ್ನು ಮರೆಯುವಂತೆ ಬಾಂಗ್ಲಾ ಹುಲಿಗಳು ವಿಜಯೋತ್ಸವ ಆಚರಿಸಿದ್ದಾರೆ. 318 ರನ್ ಗುರಿ ಬೆನ್ನು ಹತ್ತಿದ ಬಾಂಗ್ಲಾ 48.1 ಓವರ್ ಗಳಲ್ಲಿ 322/4 ಸ್ಕೋರ್ ಮಾಡಿ ಅಮೋಘ ಜಯ ದಾಖಲಿಸಿದೆ.
ಬಾಂಗ್ಲಾ ಪರ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ 100 ಎಸೆತಗಳಲ್ಲಿ 95ರನ್(9x4,1x6) ಗಳಿಸಿ ಔಟಾಗಿ ಅರ್ಹ ಶತಕದಿಂದ ವಂಚಿತರಾದರು. ತಮೀಮ್ ಗೆ ಮೊಮುದ್ದೀನ್ ಉತ್ತಮ ಸಾಥ್ ನೀಡಿ 62 ಎಸೆತಗಳಲ್ಲಿ 62 ರನ್ ಚೆಚ್ಚಿದರು.
ನಂತರ ಮಧ್ಯಮ ಕ್ರಮಾಂಕದಲ್ಲಿ ಮುಷ್ಫಿಕರ್ ರಹೀಂ 60(42ಎಸೆತ) ಹಾಗೂ ಶಕೀಬ್ ಅಲ್ ಹಸನ್ ಅಜೇಯ 52 ಹಾಗೂ ಶಬ್ಬೀರ್ ರಹ್ಮನ್ ಅಜೇಯ 42 ರನ್ ಚೆಚ್ಚಿ ಜಯ ದಾಖಲಿಸಿದರು.ಸ್ಕಾಟ್ಲೆಂಡ್ ಪರ ಡೇವಿ 2 ವಿಕೆಟ್ ಪಡೆದರು. ಆದರೆ, ಸ್ಕಾಟೀಷ್ ಬೌಲರ್ ಗಳು ಬಾಂಗ್ಲಾ ದೇಶದ ಬ್ಯಾಟ್ಸ್ ಮನ್ ಗಳ ಜೊತೆಯಾಟ ಮುರಿಯುವಲ್ಲಿ ವಿಫಲರಾಗಿದ್ದು ಮುಳುವಾಯಿತು.

ಬಾಂಗ್ಲಾ ದೇಶ ಈ ಜಯದಿಂದ 5 ಅಂಕ ಗಳಿಸಿ ಆಸ್ಟ್ರೇಲಿಯಾ ಜೊತೆಗೆ ನಿಂತಿದೆ. ಹೀಗಾಗಿ 4 ಪಂದ್ಯಗಳಾಡಿರುವ ಇಂಗ್ಲೆಂಡ್ ತಂಡಕ್ಕೆ ಕ್ವಾರ್ಟರ್ ಫೈನಲೂ ಮುನ್ನವೇ ಟೂರ್ನಿಯಿಂದ ಔಟ್ ಆಗುವ ಭೀತಿ ಎದುರಾಗಿದೆ. [ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದವರ ಪಟ್ಟಿ]
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಕೈಲಿ ಕೋಯ್ಜರ್ ಉತ್ತಮ ಆರಂಭ ಒದಗಿಸಿದರು. ವಿಶ್ವಕಪ್ ಟೂರ್ನಿಯಲ್ಲಿ ಪ್ರಪ್ರಥಮ ಶತಕ 156 (134ಎ, 17X4, 4X6) ಸಿಡಿಸಿದ ಕೋಯ್ಜರ್ ಗೆ ಸರಿಯಾದ ಸಾಥ್ ಸಿಗಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಮಕಾನ್ 35, ಮೊಮ್ಸೆನ್ 39, ಬೆರಿಂಗ್ಟನ್ 26 ಹಾಗೂ ಕ್ರಾಸ್ 20 ರನ್ ಗಳಿಸಿದರೂ ಇನ್ನಿಂಗ್ಸ್ ಕಟ್ಟಲಿಲ್ಲ. ಅದರೆ, ಹಾಗೂ ಹೀಗೂ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಸ್ಕಾಟ್ಲೆಂಡ್ 318 ಸ್ಕೋರ್ ಮಾಡಿ ಬಾಂಗ್ಲಾಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಬಾಂಗ್ಲಾ ಪರ ತಸ್ಕಿನ್ ಅಹ್ಮದ್ 43ಕ್ಕೆ 3 ವಿಕೆಟ್ ಕಿತ್ತು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications