ಸೆಮಿಫೈನಲ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಫೈಟ್
ಮೆಲ್ಬೋರ್ನ್, ಮಾ.20: ಐಸಿಸಿ ವಿಶ್ವಕಪ್ ಟೂರ್ನಿ 2015ರ ಉಪಾಂತ್ಯ ಪಂದ್ಯಗಳ ವೇಳಾಪಟ್ಟಿ, ತಂಡಗಳು, ಪಂದ್ಯದ ಪ್ರಸಾರ ಮಾಡುವ ವಾಹಿನಿ ಇನ್ನಿತರ ವಿವರಗಳು ಇಲ್ಲಿದೆ. ಸೆಮಿಫೈನಲ್ ಹಂತ ತಲುಪಿದ ನಾಲ್ಕನೇ ತಂಡ ಯಾವುದು ಎಂಬ ಕುತೂಹಲಕ್ಕೆ ಶನಿವಾರ (ಮಾ.21) ತೆರೆಬಿದ್ದಿದೆ. ವೆಸ್ಟ್ ಇಂಡೀಸ್ ತಂಡವನ್ನು 143 ರನ್ ಗಳ ಭಾರಿ ಅಂತರದಿಂದ ಸೋಲಿಸಿದ ಅತಿಥೇಯ ನ್ಯೂಜಿಲೆಂಡ್ ಸೆಮೀಸ್ ಪ್ರವೇಶ ಪಡೆದುಕೊಂಡಿದೆ.
ದಕ್ಷಿಣ ಆಫ್ರಿಕಾ ತಂಡದ ಮೊದಲ ಬಾರಿಗೆ ನಾಕೌಟ್ ಹಂತ ತಲುಪಿದ ಸಾಧನೆ ಮಾಡಿ ವಿಶ್ವಕಪ್ 2015 ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ಮಾ.18ರಂದು ಶ್ರೀಲಂಕಾ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿದ ಎಬಿ ಡಿ ವಿಲೆಯರ್ಸ್ ತಂಡ ಸೆಮೀಸ್ ಗೆ ಲಗ್ಗೆ ಇಟ್ಟಿತು.

ಮಾ.19ರಂದು ಧೋನಿ ನೇತೃತ್ವದ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 109ರನ್ ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದ ಎರಡನೇ ತಂಡ ಎನಿಸಿತು. ಮಾ.20ರಂದು ಶುಕ್ರವಾರ ಪಾಕಿಸ್ತಾನವನ್ನು 6 ವಿಕೆಟ್ ಗಳಿಂದ ಮಣಿಸಿದ ಅತಿಥೇಯ ಆಸ್ಟ್ರೇಲಿಯಾ ನಾಲ್ಕರ ಘಟ್ಟ ತಲುಪಿದೆ.
ಮಾ.21ರಂದು ಅತಿಥೇಯ ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯ ಉಳಿದ ಪಂದ್ಯಗಳಿಗೆ ಹೋಲಿಸಿದರೆ ರೋಚಕವಾಗಿತ್ತು. ಈ ಪಂದ್ಯದಲ್ಲಿ ಗುಪ್ಟಿಲ್ ದಾಖಲೆಯ ದ್ವಿಶತಕ ಬಾರಿಸಿ ತಂಡವನ್ನು ಸೆಮೀಸ್ ಹಂತಕ್ಕ ಸೇರಿಸಿದರು. ನ್ಯೂಜಿಲಂಡ್ ತಂಡ ಈಗ ಮೊದಲ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದಾರೆ. ಎರಡನೇ ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ.
ಸೆಮಿ ಫೈನಲ್ ವೇಳಾಪಟ್ಟಿ
ಮೊದಲ ಸೆಮಿಫೈನಲ್ : ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್.
ದಿನಾಂಕ/ದಿನ: ಮಾ.24, ಮಂಗಳವಾರ.
ಎಲ್ಲಿ?: ಆಕ್ಲೆಂಡ್, ನ್ಯೂಜಿಲೆಂಡ್
ಸಮಯ: 6.30 AM IST
ಎರಡನೇ ಸೆಮಿಫೈನಲ್ : ಭಾರತ vs ಆಸ್ಟ್ರೇಲಿಯಾ
ದಿನಾಂಕ/ದಿನ: ಮಾ.26, ಗುರುವಾರ
ಎಲ್ಲಿ?: ಸಿಡ್ನಿ, ಆಸ್ಟ್ರೇಲಿಯಾ
ಸಮಯ: 9.00 AM IST
ಫೈನಲ್: ಮಾ.29, ಭಾನುವಾರ, ಮೆಲ್ಬೋರ್ನ್, 9.00AM IST.
ಎಲ್ಲಿ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1, ಎಚ್ ಡಿ1, ದೂರದರ್ಶನ, ಸುವರ್ಣ ಪ್ಲಸ್, ವಿಜಯ್ ಟಿವಿ, ಏಷ್ಯಾನೆಟ್, ಆಕಾಶವಾಣಿಯಲ್ಲಿ ಕಾಮೆಂಟರಿ.
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications