ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಸನಿಹದಲ್ಲೆ ಅಫ್ಘಾನಿಸ್ತಾನ ತಂಡಕ್ಕೆ ಶಾಕ್!

ಕಾಬೂಲ್, ಮೇ 20: ವೆಸ್ಟ್ ಇಂಡೀಸ್ ಮಾಜಿ ಆಲ್ ರೌಂಡರ್ ಫಿಲ್ ಸಿಮನ್ಸ್ ಅವರು 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಬಳಿಕ ಅಫ್ಘಾನಿಸ್ತಾನ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಸಂಬಂಧಿಸಿ ತಂಡವು ತಾನಿಟ್ಟಿದ್ದ ಗುರಿ ಸಾಧಿಸಿರುವುದರಿಂದ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಸಿಮನ್ಸ್ ಹೇಳಿಕೊಂಡಿದ್ದಾರೆ.
2017ರ ಡಿಸೆಂಬರ್‌ನಲ್ಲಿ ಸಿಮನ್ಸ್, ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ತರಬೇತುದಾರ ಜವಾಬ್ದಾರಿ ವಹಿಸಿಕೊಂಡಿದ್ದರು. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಂದು ಆರಂಭಗೊಳ್ಳಲಿರುವ ವಿಶ್ವಕಪ್ ಬಳಿಕ ತಾನು ಅಫ್ಘಾನ್ ಕ್ರಿಕೆಟ್ ತಂಡದ ಕೋಚ್ ಒಪ್ಪಂದವನ್ನು ನವೀಕರಿಸುತ್ತಿಲ್ಲವೆಂದು ಸಿಮನ್ಸ್ ತಿಳಿಸಿದ್ದಾರೆ.
ಇಎಸ್‌ಪಿಎನ್ ಕ್ರಿಕೆಟ್ ಇನ್ಫೋ ಜೊತೆ ಮಾತನಾಡುತ್ತ ಫಿಲ್ ಸಿಮನ್ಸ್, 'ನಾನಿದನ್ನು ಮೊದಲೇ ಯೋಚಿಸಿದ್ದೆ. ಅದರಂತೆ ಕೋಚ್ ಆಗಿ ಮುಂದುವರೆಯುವ ಒಪ್ಪಂದವನ್ನು ನವೀಕರಿಸುವುದಿಲ್ಲವೆಂದು ನಾನೀಗಾಗಲೇ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್(ಎಸಿಬಿ)ಗೆ ನೋಟಿಸ್ ನೀಡಿದ್ದೇನೆ' ಎಂದರು.
'ಜುಲೈ 15ರಂದು ನನ್ನ ಒಪ್ಪಂದ ಕೊನೆಗೊಳ್ಳಲಿದೆ. ಆ ಬಳಿಕ ಒಂದಿನ ನಾನು ಮುನ್ನಡೆಯಲು ನಿರ್ಧರಿಸಿದ್ದೇನೆ' ಎಂದು ಸಿಮನ್ಸ್ ಹೇಳಿಕೊಂಡಿದ್ದಾರೆ. ಕಳೆದ ವರ್ಷ ವಿಶ್ವಕಪ್‌ಗಾಗಿ ನಡೆದ ಅರ್ಹತಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಅಫ್ಘಾನ್ ತಂಡ, ವಿಶ್ವಕಪ್ ಟೂರ್ನಿಗೆ 10 ತಂಡಗಳಲ್ಲಿ ಒಂದಾಗಿ ಪ್ರವೇಶ ಗಿಟ್ಟಿಸಿಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications