ವಿಶ್ವಕಪ್ 2019 : ಟೀಂ ಇಂಡಿಯಾ ಪಂದ್ಯಗಳ ಸಮಗ್ರ ವೇಳಾಪಟ್ಟಿ

ಬೆಂಗಳೂರು, ಏಪ್ರಿಲ್ 27: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ವೇಳಾಪಟ್ಟಿ ಪ್ರಕಟವಾಗಿದ್ದು, ಭಾರತ ತಂಡದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ. ಭಾರತ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್ 16ರಂದು ಮ್ಯಾಂಚೆಸ್ಟರ್ ನಲ್ಲಿ ಸೆಣಸಲಿವೆ.
2019ರ ಮೇ 30ರಿಂದ ಜುಲೈ 15ರ ವರೆಗೆ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟವಾಗಿದೆ.
ಈ ಬಾರಿ ವಿಶ್ವಕಪ್ ನಲ್ಲಿ ಆಡಲಿರುವ ತಂಡಗಳು: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ಥಾನ, ವೆಸ್ಟ್ ಇಂಡೀಸ್.
ಎಲ್ಲೆಲ್ಲಿ ಪಂದ್ಯ : ವಿಶ್ವಕಪ್ ನ ಲೀಗ್ ಹಂತ ಪಂದ್ಯಗಳು ಓವಲ್, ಎಜ್ ಬಾಸ್ಟನ್, ಟ್ರೆಂಟ್ ಬ್ರಿಡ್ಜ್, ಹೆಡಿಂಗ್ಲೆ, ಕಾರ್ಡಿಫ್, ಸೌಥಾಂಪ್ಟನ್, ಬ್ರಿಸ್ಟಲ್, ಓಲ್ಡ್ ಟ್ರಾಫೋರ್ಡ್, ಟೌನ್‌ಟನ್, ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಭಾರತ ಪಂದ್ಯಗಳ ವೇಳಾಪಟ್ಟಿ : ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭ
| ದಿನಾಂಕ/ದಿನ | ವಿರುದ್ಧ ತಂಡ | ಎಲ್ಲಿ |
| ಜೂನ್ 5 (ಬುಧವಾರ) | ದಕ್ಷಿಣ ಆಫ್ರಿಕಾ | ಹ್ಯಾಂಪ್ ಶೈರ್ ಬೌಲ್ |
| ಜೂನ್ 9 (ಭಾನುವಾರ) | ಆಸ್ಟ್ರೇಲಿಯಾ | ದಿ ಓವಲ್ |
| ಜೂನ್ 13(ಗುರುವಾರ) | ನ್ಯೂಜಿಲೆಂಡ್ | ಟ್ರೆಂಟ್ ಬ್ರಿಡ್ಜ್ |
| ಜೂನ್ 16 (ಭಾನುವಾರ) | ಪಾಕಿಸ್ತಾನ | ಓಲ್ಡ್ ಟ್ರಾಫೋರ್ಡ್ |
| ಜೂನ್ 22(ಶನಿವಾರ) | ಅಫ್ಘಾನಿಸ್ತಾನ | ಹ್ಯಾಂಪ್ ಶೈರ್ ಬೌಲ್ |
| ಜೂನ್ 27(ಗುರುವಾರ) | ವೆಸ್ಟ್ ಇಂಡೀಸ್ | ಓಲ್ಡ್ ಟ್ರಾಫೋರ್ಡ್ |
| ಜೂನ್ 30(ಭಾನುವಾರ) | ಇಂಗ್ಲೆಂಡ್ | ಎಜ್ ಬಾಸ್ಟನ್ |
| ಜುಲೈ 2(ಮಂಗಳವಾರ) | ಬಾಂಗ್ಲಾದೇಶ | ಎಜ್ ಬಾಸ್ಟನ್ |
| ಜುಲೈ 6(ಶನಿವಾರ) | ಶ್ರೀಲಂಕಾ | ಹೆಡಿಂಗ್ಲೆ |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications