ವಿಶ್ವಕಪ್: ಆಂಗ್ಲರೆದುರು ಭಾರತದ ಸೋಲಿಗೆ ಪ್ರತಿಕ್ರಿಯಿಸಿದ ಶೋಯೆಬ್ ಅಖ್ತರ್

ಲಂಡನ್, ಜುಲೈ 1: ಐಸಿಸಿ ವಿಶ್ವಕಪ್ 2019ರಲ್ಲಿ ಅಜೇಯ ಏಕಮಾತ್ರ ತಂಡವಾಗಿ ಉಳಿದಿದ್ದ ಟೀಮ್ ಇಂಡಿಯಾ, ಇಂಗ್ಲೆಂಡ್ ಎದುರು 31 ರನ್‌ನಿಂದ ಸೋಲುವ ಮೂಲಕ ಸೆಮಿಫೈನಲ್ ಖಾತರಿಪಡಿಸುವುದನ್ನೂ ಮುಂದೂಡಿಕೊಂಡಿದೆ. ಭಾರತದ ಸೋಲಿನಿಂದ ಪಾಕಿಸ್ತಾನ ತಂಡಕ್ಕೂ ಹಿನ್ನಡೆಯಾಗಿದೆ. ಈ ಕುರಿತು ಪಾಕಿಸ್ತಾನ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಜೂನ್ 30ರ ಇಂಗ್ಲೆಂಡ್-ಭಾರತ ಪಂದ್ಯಕ್ಕೂ ಮುನ್ನ ಅಖ್ತರ್, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಭಾರತವನ್ನು ಬೆಂಬಲಿಸುವಂತೆ ಕರೆ ನೀಡಿದ್ದರು. ಕಾರಣ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶದ ಹಾದಿ ದುರ್ಗಮವೂ, ಪಾಕ್ ಸೆಮಿಫೈನಲ್ ಪ್ರವೇಶ ಸುಲಭವೂ ಆಗುವುದರಲ್ಲಿತ್ತು. ಆದರೆ ದುರದೃಷ್ಟವಶಾತ್ ಕೊಹ್ಲಿ ಬಳಗ ಇಯಾನ್ ಮಾರ್ಗನ್ ಪಡೆಗೆ ತಲೆ ಬಾಗಿತ್ತು.
ಈ ಬಗ್ಗೆ ಯೂ ಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯಿಸಿರುವ ಶೋಯೆಬ್, 'ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲಲಿ ಎಂದು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದು ಇದು ಮೊದಲನೇಬಾರಿ. ಆದರೆ ಪ್ರಾರ್ಥನೆ ದೇವರನ್ನು ತಲುಪಿಲ್ಲ ಎನಿಸುತ್ತೆ; ಭಾರತ ಸೋತಿದೆ' ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.
'ಬದ್ಧ ಎದುರಾಳಿಗಳಂತೆ ಇರುತ್ತಿದ್ದ ಪಾಕ್-ಭಾರತ ಎರಡೂ ಅಭಿಮಾನಿಗಳೂ ಭಾರತಕ್ಕೆ ಒಮ್ಮತದಿಂದ ಬೆಂಬಲ ಸೂಚಿಸಿದ ಅಪರೂಪದ ಕ್ಷಣವಿದು. ಟೀಮ್ ಇಂಡಿಯಾ ಗೆಲ್ಲುವ ನೆಲೆಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಿತು ಎಂದು ನನಗೆ ಭರವಸೆಯಿದೆ. ಆದರೆ ಅಷ್ಟು ಪ್ರಯತ್ನಿಸಿಯೂ ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತಕ್ಕೆ ಸಾಧ್ಯವಾಗಲಿಲ್ಲ' ಎಂದು ಅಖ್ತರ್ ಭಾರತದ ಬಗ್ಗೆ ಸಕಾರಾತ್ಮಕವಾಗಿ ಹೇಳಿಕೊಂಡಿದ್ದಾರೆ.
'ಜೇಸನ್ ರಾಯ್, ಜಾನಿ ಬೇರ್ಸಟೋವ್ ಮತ್ತು ಇಂಗ್ಲೆಂಡ್ ಇತರ ಬ್ಯಾಟ್ಸ್ಮನ್‌ಗಳ ದಾಳಿಗೆ ಭಾರತ ಬೌಲರ್‌ಗಳು ಸಿಲುಕಿಕೊಂಡರು. ಒಂದು ವೇಳೆ ಬೌಲರ್‌ಗಳಿಂದ ಇನ್ನೊಂದು 30 ರನ್ ಕಡಿಮೆಗೊಳಿಸಲು ಸಾಧ್ಯವಾಗುತ್ತಿದ್ದರೆ ಭಾರತ ಸುಮಾರು 300 ರನ್ ಗುರಿಯನ್ನು ತಲುಪಲು ಸಾಧ್ಯವಾಗುತ್ತಿತ್ತು. ಅಂತೂ ಭಾರತ ಗೆಲ್ಲಲಿಲ್ಲ. ನಮಗೂ ನಿರಾಶೆಯಾಗಿದೆ' ಎಂದು ಶೋಯೆಬ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications