Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ವಿಶ್ವ ಟಿ20 ಟೂರ್ನಿಯಲ್ಲಿ ಸೆಣಸುವ ತಂಡಗಳ ಪಟ್ಟಿ

ಡಬ್ಲಿನ್, ಜುಲೈ 24: ಐಸಿಸಿ ವಿಶ್ವ ಟ್ವೆಂಟಿ 20 ಟೂರ್ನಿಯಲ್ಲಿ ಪಾಲ್ಗೊಳ್ಳಲು ಆರು ತಂಡಗಳು ಅರ್ಹತೆ ಪಡೆದುಕೊಂಡಿವೆ. 2016ರಲ್ಲಿ ಭಾರತದಲ್ಲಿ ನಡೆಯುವ ಈ ಟೂರ್ನಿಗೆ ಜುಲೈ 23ರಂದು ಕೊನೆ ಕ್ಷಣದಲ್ಲಿ ಅಫ್ಘಾನಿಸ್ತಾನ ಹಾಗೂ ಒಮಾನ್ ತಂಡ ಸೇರಿಕೊಂಡಿದೆ.

2016 ರಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟ್ವೆಂಟಿ 20 ಟೂರ್ನಿಗೆ ಅಫ್ಘಾನಿಸ್ತಾನ ಹಾಗೂ ಒಮಾನ್ ದೇಶದ ತಂಡಗಳು ಕ್ರಮವಾಗಿ ಪಪುವಾ ನ್ಯೂ ಗಿನಿಯಾ ಹಾಗೂ ನಮಿಬಿಯಾ ವಿರುದ್ಧ ಜಯ ದಾಖಲಿಸಿ ಅರ್ಹತೆ ಪಡೆದುಕೊಂಡಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದೆ.[ಚಾಂಪಿಯನ್ಸ್ ಲೀಗ್ ಟಿ20 ರದ್ದು ಮಾಡಿದ ಬಿಸಿಸಿಐ]

ಅರ್ಹತೆ ಪಡೆದ ತಂಡಗಳು: ಐರ್ಲೆಂಡ್, ನೆದರ್ಲೆಂಡ್, ಅಫ್ಘಾನಿಸ್ತಾನ, ಓಮಾನ್, ಸ್ಕಾಟ್ಲೆಂಡ್ ಹಾಗೂ ಹಾಂಗ್ ಕಾಂಗ್. ಈ 6 ತಂಡಗಳ ಜೊತೆಗೆ 10 ಟೆಸ್ಟ್ ಆಡುವ ರಾಷ್ಟ್ರಗಳು ಸೇರಿಕೊಳ್ಳಲಿವೆ. ಮಾರ್ಚ್ 11 ರಿಂದ ಏಪ್ರಿಲ್ 3,2016 ರ ತನಕ ಟೂರ್ನಿ ನಡೆಯಲಿದೆ. [2019ರ ತನಕ ಐಸಿಸಿ ಟೂರ್ನಿ ವೇಳಾಪಟ್ಟಿ]

Afghanistan


ಇದುವರೆವಿಗೂ ಐದು ಬಾರಿ ಐಸಿಸಿ ಟಿ20 ಟೂರ್ನಿಯನ್ನು ನಡೆಸಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಟಿ20 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಟಿ20 ಟೂರ್ನಿಯನ್ನು ಧೋನಿ ನೇತೃತ್ವದ ಟೀಂ ಇಂಡಿಯಾ ಗೆದ್ದುಕೊಂಡಿತ್ತು. [ಅಫ್ಘಾನಿಸ್ತಾನ ತಂಡದ ಚಿತ್ರ ಕೃಪೆ: @ICC ಟ್ವೀಟ್]

ಈ ಬಾರಿ ಬೆಂಗಳೂರು ಸೇರಿದಂತೆ ಚೆನ್ನೈ, ಧರ್ಮಶಾಲ, ಮೊಹಾಲಿ, ಮುಂಬೈ, ನಾಗಪುರ ಹಾಗೂ ನವದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಟಿ20 ಪಂದ್ಯಾವಳಿ ಆಯೋಜನೆಗೊಂಡಿದೆ.[ಬೆಂಗಳೂರಿನಲ್ಲಿ ಐಸಿಸಿ ವಿಶ್ವ ಟಿ20 2016 ಪಂದ್ಯ]

ಐಸಿಸಿ ವಿಶ್ವ ಟ್ವೆಂಟಿ 20 ಟೂರ್ನಿಯಲ್ಲಿ ಆಡಲಿರುವ ತಂಡಗಳು:
1. ಭಾರತ
2. ಬಾಂಗ್ಲಾದೇಶ
3. ಪಾಕಿಸ್ತಾನ
4. ಶ್ರೀಲಂಕಾ
5.ಆಸ್ಟ್ರೇಲಿಯಾ
6. ನ್ಯೂಜಿಲೆಂಡ್
7. ದಕ್ಷಿಣ ಆಫ್ರಿಕಾ
8. ಇಂಗ್ಲೆಂಡ್
9. ವೆಸ್ಟ್ ಇಂಡೀಸ್
10. ಜಿಂಬಾಬ್ವೆ
11. ಐರ್ಲೆಂಡ್
12. ಸ್ಕಾಟ್ಲೆಂಡ್
13. ನೆದರ್ಲೆಂಡ್ಸ್
14. ಹಾಂಗ್ ಕಾಂಗ್
15. ಅಫ್ಘಾನಿಸ್ತಾನ.
16. ಒಮಾನ್

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+