ಅಶ್ವಿನ್‌ರನ್ನೇ ತಂಡದಿಂದ ಕೈ ಬಿಟ್ಟ ಮೇಲೆ ಕೊಹ್ಲಿಯನ್ನ ಏಕೆ ಬಿಡಬಾರದು? ಕಪಿಲ್ ದೇವ್ ಪ್ರಶ್ನೆ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಏಕೆ ತಂಡದಿಂದ ಕೈ ಬಿಡಬಾರದು ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಪ್ರಶ್ನಿಸಿದ್ದಾರೆ. 450ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ರವಿಚಂದ್ರನ್ ಅಶ್ವಿನ್‌ರನ್ನ ಟೆಸ್ಟ್ ತಂಡದ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟ ಮೇಲೆ, ವಿರಾಟ್ ಕೊಹ್ಲಿಯನ್ನು ಏಕೆಟ್ ಟಿ20 ತಂಡದಿಂದ ಹೊರಗಿಡಬಾರದು ಎಂದು ಪ್ರಶ್ನಿಸಿದ್ದಾರೆ.
ವಿರಾಟ್ ಕೊಹ್ಲಿ ಮೂರು ಫಾರ್ಮೆಟ್‌ನಲ್ಲಿ ರನ್‌ಗಳಿಸಲು ವಿಫಲಗೊಂಡಿದ್ದು, ಕಳೆದ ಮೂರು ವರ್ಷಗಳಿಂದ ಶತಕ ಸಿಡಿಸಲು ವಿಫಲರಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

ಫಾರ್ಮ್ ಇದ್ದ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿ
ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್‌ದೇವ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಫಾರ್ಮ್‌ನಲ್ಲಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿ ಅವರಿಂದ ಮತ್ತಷ್ಟು ಕೌಶಲ್ಯ ಪ್ರದರ್ಶನಕ್ಕೆ ದಾರಿ ಮಾಡಿಕೊಡಬೇಕು ಎಂದಿದ್ದಾರೆ.

ಅಶ್ವಿನ್‌ರನ್ನೇ ಕೈ ಬಿಟ್ಟ ಮೇಲೆ, ಕೊಹ್ಲಿಯನ್ನೂ ಬೆಂಚ್‌ನಲ್ಲಿ ಕೂರಿಸಿ
''ಟೀಂ ಇಂಡಿಯಾದಲ್ಲಿ ಸದ್ಯ ಬೆಂಚ್ ಸ್ಟ್ರೆಂಥ್ ತುಂಬಾನೆ ಚೆನ್ನಾಗಿರುವಾಗಿ ಟಿ20ಯಲ್ಲಿ ಕೊಹ್ಲಿಯನ್ನು ಬೆಂಚ್‌ನಲ್ಲಿ ಕೂರಿಸಿದ್ರೆ ತಪ್ಪೇನಿಲ್ಲ. ವಿಶ್ವದ ನಂಬರ್ 2 ಟೆಸ್ಟ್ ಬೌಲರ್ ಆಗಿದ್ದ ಅಶ್ವಿನ್‌ರನ್ನು ಟೆಸ್ಟ್ ತಂಡದ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟಿದ್ದು, ವಿಶ್ವದ ನಂಬರ್ 1 ಬ್ಯಾಟರ್ ಆಗಿದ್ದ ಕೊಹ್ಲಿಯನ್ನೂ ಕೂಡ ತಂಡದಿಂದ ಹೊರಗಿಡಬಹುದು'' ಎಂದು ಕಪಿಲ್ ದೇವ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ವಿದೇಶಿ ಕೋಚ್‌ಗಳು ಭಾರತದ ಕ್ರಿಕೆಟ್‌ಗೆ ಆದರ್ಶವಾಗಿಲ್ಲ: ಸುನಿಲ್ ಗವಾಸ್ಕರ್

ಕೊಹ್ಲಿ ತಮ್ಮ ಹಳೆಯ ಫಾರ್ಮ್‌ನ ನೆರಳಿನಂತಿದ್ದಾರೆ!
ಸದ್ಯ ಕೊಹ್ಲಿ ತಮ್ಮ ಹಳೆತನದ ನೆರಳಿನಂತೆ ಕಾಣುತ್ತಿದ್ದಾರೆ ಎಂದು ಕಪಿಲ್ ದೇವ್ ಹೇಳುವ ಮೂಲಕ ವಿರಾಟ್ ಕಳಪೆ ಫಾರ್ಮ್ ಅನ್ನು ಟೀಕಿಸಿದ್ದಾರೆ.
"ವಿರಾಟ್ ಅವರು ಹಲವಾರು ವರ್ಷಗಳಿಂದ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿದ ಮಟ್ಟದಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ. ಅವರು ತಮ್ಮ ಪ್ರದರ್ಶನಗಳಿಂದ ಹೆಸರು ಗಳಿಸಿದ್ದಾರೆ. ಆದರೆ ಅವರು ಪ್ರದರ್ಶನ ನೀಡದಿದ್ದರೆ, ನೀವು ಪ್ರದರ್ಶನ ನೀಡುವ ಯುವಕರನ್ನು ತಂಡದಿಂದ ಹೊರಗಿಡಲು ಸಾಧ್ಯವಿಲ್ಲ." ಎಂದು ದಿಗ್ಗಜ ಕ್ರಿಕೆಟಿಗ ಕಪಿಲ್ ಸೇರಿಸಿದರು.
7 ಸರಣಿಗೆ 7 ನಾಯಕರು: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು?

ಟೀಂ ಇಂಡಿಯಾದಲ್ಲಿ ಉತ್ತಮ ಸ್ಪರ್ಧೆ ಎದುರಾಗಿದೆ!
ಟೀಂ ಇಂಡಿಯಾದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಆರೋಗ್ಯಕರ ಸ್ಪರ್ಧೆ ಎದುರಾಗಿದೆ. ಯುವ ಆಟಗಾರರು ಸ್ಟಾರ್ ಆಟಗಾರರಿಗೆ ಸವಾಲನ್ನು ಒಡ್ಡುತ್ತಿದ್ದಾರೆ. ಹೀಗಾಗಿ ಯುವ ಆಟಗಾರರ ಜೊತೆಗೆ ಫಾರ್ಮ್‌ನಲ್ಲಿದ್ದವರಿಗೆ ಅವಕಾಶ ನೀಡಿ ಎಂದು ಮ್ಯಾನೇಜ್‌ಮೆಂಟ್ ಅನ್ನು ಮಾಜಿ ಕ್ರಿಕೆಟಿಗ ಒತ್ತಾಯಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ವಿಶ್ರಾಂತಿಯೇ ಅಥವಾ ತಂಡದಿಂದ ಹೊರಗಿಡಲಾಗಿದೆಯೇ?
ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಏಕದಿನ ಸರಣಿಯಲ್ಲಿ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ ವಿರಾಟ್ ಕೊಹ್ಲಿಗೆ ವಿಂಡೀಸ್ ವಿರುದ್ಧದ 50 ಓವರ್‌ಗಳ ಫಾರ್ಮೆಟ್ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಶಿಖರ್ ಧವನ್ ನಾಯಕರಾಗಿ ತಂಡವನ್ನ ಮುನ್ನಡೆಸಲಿದ್ದಾರೆ.
ಆದ್ರೆ ತದನಂತರ ನಡೆಯುವ ಟಿ20 ಸರಣಿಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುತ್ತೀರಿ ಎನ್ನುವ ಬದಲು, ತಂಡದಿಂದ ಹೊರಗಿಡಲಾಗಿದೆ ಎಂದೇ ಪರಿಗಣಿಸಬೇಕು ಎಂಬುದು ಕಪಿಲ್ ದೇವ್ ಅಭಿಪ್ರಾಯವಾಗಿದೆ. ಏಕೆಂದರೆ ಬೇರೆ ಆಟಗಾರರಿಗೆ ಒಂದು ನ್ಯಾಯ, ವಿರಾಟ್‌ಗೆ ಒಂದು ನ್ಯಾಯ ಸಲ್ಲದು ಎಂಬುದು ಕಪಿಲ್ ವಾದವಾಗಿದೆ.
ಅಂದ್ರೆ ವೆಸ್ಟ್ ಇಂಡೀಸ್ ಟಿ20ಗೆ ಕೊಹ್ಲಿಗೆ "ವಿಶ್ರಾಂತಿ" ನೀಡಿದರೆ, ಅದನ್ನು "ಕೈಬಿಡಲಾಗಿದೆ" ಎಂದು ಪರಿಗಣಿಸಬಹುದು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.
"ನೀವು ಅದನ್ನು ವಿಶ್ರಾಂತಿ ಎಂದು ಕರೆಯಬಹುದು ಮತ್ತು ಬೇರೊಬ್ಬರು ಅದನ್ನು ಡ್ರಾಪ್ಡ್ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ದೃಷ್ಟಿಕೋನವನ್ನು ಹೊಂದಿರುತ್ತಾನೆ. ನಿಸ್ಸಂಶಯವಾಗಿ, ಆಯ್ಕೆಗಾರರು ಅವರನ್ನು (ಕೊಹ್ಲಿ) ಆಯ್ಕೆ ಮಾಡದಿದ್ದರೆ, ಅದು ಆ ಸ್ಟಾರ್ ಆಟಗಾರನು ಪ್ರದರ್ಶನ ನೀಡದೇ ಇರುವ ಕಾರಣ ಇರಬಹುದು" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications