
ಚೆನ್ನೈ, ಮೇ 14: ಈ ಹಿಂದೆ ಕಣ್ ಹೊಡೆದು ನೆಟ್ಟಿಗರ ನಿದ್ದೆಗೆಡಿಸಿದ್ದ ಪ್ರಿಯಾ ಪ್ರಕಾಶ್, ಈ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಈ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡವೇನಾದರೂ ಗೆದ್ದರೆ ನಾನು ಧೋನಿ ಮತ್ತು ಚೆನ್ನೈ ತಂಡಕ್ಕಾಗಿ 'ಹೀಗ್' ಮಾಡ್ತೀನಿ ಅಂತ ನೆಟ್ಟಿಗರ ತಲೆಯಲ್ಲಿ ಪ್ರಿಯಾ ಹುಳ ಬಿಟ್ಟಿದ್ದಾರೆ!
ಧೋನಿ ಹಾಗು ಚೆನ್ನೈ ತಂಡದ ಅಭಿಮಾನಿಯಾಗಿರುವ ಪ್ರಿಯಾ ಪ್ರಕಾಶ್, ಧೋನಿಯಾನ್ನು ಭೇಟಿಯಾಗಿ ಈ ಐಪಿಎಲ್ ಫೈನಲ್ ನಲ್ಲಿ ಗೆಲ್ಲುವಂತೆ ವಿನಂತಿಸಿಕೊಂಡಿದ್ದಾರೆ. ಜೊತೆಗೆ ಫೈನಲ್ ನಲ್ಲಿ ಚೆನ್ನೈ ತಂಡ ಗೆದ್ದರೆ ನಾನು ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಮೂಸಿಕ್ ಮುದ್ರಿಸಿ ಅದಕ್ಕೆ ಐಪಿಎಲ್ ಕೊನೆಯ ರಾತ್ರಿ ನೃತ್ಯವನ್ನೂ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಅಷ್ಟೇ ಅಲ್ಲ, ಐಪಿಎಲ್ ಪಂದ್ಯಕ್ಕೆ ಕಳೆ ತುಂಬಿದ್ದಕ್ಕಾಗಿ ಕೇವಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತದರ ಅಭಿಮಾನಿಗಳಿಗೋಸ್ಕರ ತಾನು ಕಣ್ ಕೊಡೆದು, ಫ್ಲೈಯಿಂಗ್ ಕಿಸ್ ಕೊಡುವ ಆ ಫೇಮಸ್ ಆಕ್ಷನ್ ಮಾಡುವುದಾಗಿಯೂ ಪ್ರಿಯಾ ತಿಳಿಸಿದ್ದಾರೆ.
ಏನೇ ಹೇಳೀಪ್ಪ, ಭಾನುವಾರದ ಚೆನ್ನೈ ಸೂಪರ್ ಕಿಂಗ್ಸ್-ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಅಂಬಾಟಿ ರಾಯುಡು ಶತಕ (100/62) ಬಾರಿಸಿ ಚೆನ್ನೈ ತಂಡವನ್ನು ಗೆಲ್ಲಿಸಿದ 'ಜೋಶ್' ನೋಡಿದ್ರೆ ಫೈನಲ್ ನಲ್ಲಿ ಚೆನ್ನೈಗೆ ಪ್ರಿಯಾ ಪ್ರಕಾಶ್ ರ ಫ್ಲೈಯಿಂಗ್ ಕಿಸ್ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ!