For Quick Alerts
ALLOW NOTIFICATIONS  
For Daily Alerts
 

ಅಂದು ಸಚಿನ್‌ಗೆ ಪೆಟ್ಟಾಗಿದ್ರೆ, ನನ್ನನ್ನು ಜೀವಂತವಾಗಿ ಸುಡುತ್ತಿದ್ರು!: ಶೋಯೆಬ್ ಅಖ್ತರ್

Shoiab aktar
BCCI ಬಾಯಿ ಮುಚ್ಚಿಸೋಕೆ ವಿರಾಟ್ ಈ ಅಸ್ತ್ರ ಪ್ರಯೋಗಿಸಿದ್ರೆ ಸಾಕು | Oneindia Kannada

ಪಾಕಿಸ್ತಾನದ ಮಾಜಿ ಕ್ರಿಕೆಟಿಗ , ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಸಚಿನ್ ತೆಂಡೂಲ್ಕರ್ ಜೊತೆಗಿನ ಒಂದು ಅಚಾನಕ್‌ ಘಟನೆ ಕುರಿತಾಗಿ ಮೆಲುಕು ಹಾಕಿದ್ದು, ಅಂದು ಸಚಿನ್ ತೆಂಡೂಲ್ಕರ್ ಏನಾದ್ರೂ ಗಾಯಗೊಂಡಿದ್ರೆ, ನನಗೆ ಜೀವನದಲ್ಲಿ ಮತ್ತೆ ಭಾರತದ ವೀಸಾ ಸಿಗುತ್ತಿರಲಿಲ್ಲ, ಭಾರತಕ್ಕೆ ಮತ್ತೆ ಬರಲು ಸಾಧ್ಯವಾಗ್ತಿರಲಿಲ್ಲ ಎಂದು ಸ್ಪೋರ್ಟ್ಸ್‌ಕ್ರೀಡಾ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು 2007ರಲ್ಲಿ ಪಾಕಿಸ್ತಾನ ಭಾರತದ ಸಮಯದ ವೇಳೆಯಲ್ಲಿ, ಅವಾರ್ಡ್ ನೀಡುವ ವೇಳೆಯಲ್ಲಿ ಪಾಕಿಸ್ತಾನದ ಪೇಸರ್ ಅಖ್ತರ್ ಸಚಿನ್‌ ತೆಂಡೂಲ್ಕರ್‌ರನ್ನು ಎರಡೂ ಕೈನಿಂದ ಮೇಲೆತ್ತರಲು ಪ್ರಯತ್ನಿಸಿದ್ರಂತೆ, ಆದ್ರೆ ಕೊನೆಯಲ್ಲಿ ಆಗಿದ್ದು ಮಿಸ್ ಆಗಿ ಸಚಿನ್ ಕೆಳಗೆ ಬಿದ್ದರು.

2007ರಲ್ಲಿ ಪಾಕಿಸ್ತಾನ ತಂಡವು ಐದು ಏಕದಿನ ಪಂದ್ಯ ಹಾಗೂ ಮೂರು ಟೆಸ್ಟ್ ಪಂದ್ಯಗಳನ್ನಾಡಲು ನವೆಂಬರ್ -ಡಿಸೆಂಬರ್ ಅವಧಿಯಲ್ಲಿ ಭಾರತದ ಪ್ರವಾಸ ಕೈಗೊಂಡಿತ್ತು. ಇದು ಉಭಯ ದೇಶಗಳಿಗೂ ಕೊನೆಯ ದ್ವಿಪಕ್ಷೀಯ ಸರಣಿ ಅನ್ನೋದು ಇಲ್ಲಿ ಗಮನಾರ್ಹ. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾದವು.

ಈ ಟೂರ್ನಿ ವೇಳೆಯಲ್ಲಿ ಆದ ಅಚಾನಕ್ ಘಟನೆ ಕುರಿತು ಮಾತನಾಡಿರುವ ಖ್ತರ್ ಸಚಿನ್ ತೆಂಡೂಲ್ಕರ್‌ನ್ನ ತಮಾಶೆಗೆ ಎರಡೂ ಕೈನಿಂದ ಎತ್ತಲು ಪ್ರಯತ್ನಿಸಿದೆ, ಆದ್ರೆ ಅವರು ನನ್ನ ಕೈಯಿಂದ ಜಾರಿ ಬಿದ್ದರು. ಅವರು ಬಿದ್ದ ತಕ್ಷಣ ಅವರಿಗೆ ಏನಾದ್ರೂ ಗಾಯಗೊಂಡ್ರಾ ಎಂದು ಗಾಬರಿಯಾಗಿದ್ದೆ. ಹಾಗೇನಾದ್ರು ಆಗಿದ್ದೇ ಆದಲ್ಲಿ ಭಾರತಕ್ಕೆ ಮತ್ತೆ ಎಂದಿಗೂ ನನಗೆ ಕಾಲಿಡಲು ಜನರು ಬಿಡುತ್ತಿರಲಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

"ಎಂದಿನಂತೆ, ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸುತ್ತೇನೆ. ಹಾಗಾಗಿ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಮೇಲೆತ್ತಲು ಪ್ರಯತ್ನಿಸಿದೆ, ಕೇವಲ ತಮಾಶೆಗಾಗಿ. ನಾನು ಅವನನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದೆ ಆದರೆ ಆತ ನನ್ನ ಕೈಯಿಂದ ಜಾರಿ ಕೆಳಗೆ ಬಿದ್ದರು. ಇದಾದ ತಕ್ಷಣ ನಾನು ಸತ್ತೇ ಎಂದು ಭಾವಿಸಿದೆ. ಸಚಿನ್ ತೆಂಡೂಲ್ಕರ್ ಅನರ್ಹರಾದರೆ ಅಥವಾ ಗಾಯಗೊಂಡರೆ ನನಗೆ ಭಾರತೀಯ ವೀಸಾ ಸಿಗುವುದಿಲ್ಲ ಎಂದು ನಾನು ಹೆದರುತ್ತಿದ್ದೆ. ಭಾರತೀಯರು ನನ್ನನ್ನು ದೇಶಕ್ಕೆ ಹಿಂತಿರುಗಲು ನಿಜಕ್ಕೂ ಬಿಡುತ್ತಿದ್ರಾ ಅಥವಾ ನನ್ನನ್ನು ಜೀವಂತವಾಗಿ ಸುಡುತ್ತಾರೆ "ಎಂದು ಶೋಯೆಬ್ ಅಖ್ತರ್ ಸ್ಪೋರ್ಟ್ಸ್ ಕ್ರೀಡಾಗೆ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

ಭಾರತ-ಪಾಕಿಸ್ತಾನ ಪಂದ್ಯಗಳು ಎಂದೇ ನಡೆದ್ರೂ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಸಾಂಪ್ರದಾಯಿಕ ಎದುರಾಳಿಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೇ ಹೊರತು, ದ್ವಿಪಕ್ಷೀಯ ಸರಣಿಗಳು ದೂರದ ಮಾತಾಗಿದೆ. ಮೈದಾನದಲ್ಲಿ ಉಭಯ ತಂಡದ ಆಟಗಾರರು ಪ್ರತಿಸ್ಪರ್ಧಿಗಳಾಗದ್ದರೂ, ಮೈದಾನದ ಹೊರಗೆ ಉತ್ತಮ ಸ್ನೇಹಿತರಾಗಿದ್ದರು ಎಂದು ಶೋಯೆಬ್ ಅಖ್ತರ್ ತಿಳಿಸಿದರು.

Story first published: Friday, December 17, 2021, 15:33 [IST]
Other articles published on Dec 17, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+