ಕ್ರಿಕೆಟ್ ಆಡಬೇಕಾದರೆ ಇಸಿಬಿ ಸಂಪರ್ಕಿಸು: ಕನೇರಿಯಾಗೆ ಪಿಸಿಬಿ ಸಲಹೆ

ಇಸ್ಲಮಾಬಾದ್, ಜುಲೈ 10: ಕ್ಲಬ್ ಕ್ರಿಕೆಟ್ ಅಥವಾ ದೇಸೀ ಕ್ರಿಕೆಟ್‌ನಲ್ಲಿ ಆಡಲು ಬಯಸಿದ್ದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅನ್ನು ಸಂಪರ್ಕಿಸು ಎಂದು ನಿಷೇಧಕ್ಕೀಡಾಗಿರುವ ಟೆಸ್ಟ್ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಲಹೆ ನೀಡಿದೆ.
2012ರಲ್ಲಿ ನಿಷೇಧಕ್ಕೀಡಾಗಿರುವ ದನೀಶ್ ಕನೇರಿಯಾ, ಜೀವನೋಪಾಯಕ್ಕಾಗಿ ಕ್ರಿಕೆಟ್ ಚಟುವಟಿಕೆಗಳೇ ಇಲ್ಲದೆ ಹತಾಶರಾಗಿದ್ದಾರೆ. ಆದರೆ ಕನೇರಿಯಾ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನಿಂದ ನಿಷೇಧಕ್ಕೀಡಾಗಿರುವುದರಿಂದ ನಾವೇನು ಮಾಡುವಂತಿಲ್ಲ ಎಂದು ಪಿಸಿಬಿ ಹೇಳಿದೆ.
'ಒಬ್ಬ ಆಟಗಾರನ ಮೇಲೆ ಅನರ್ಹತೆಯ ಅವಧಿಯನ್ನು ವಿಧಿಸಿರುವ ಭ್ರಷ್ಟಾಚಾರ-ವಿರೋಧಿ ನ್ಯಾಯಮಂಡಳಿಯ ಅಧ್ಯಕ್ಷರು ಮಾತ್ರ, ಆಟಗಾರನಿಗೆ ಭಾಗವಹಿಸಲು ಅನುಮತಿ ನೀಡುವ ವಿವೇಚನೆಯನ್ನು ಹೊಂದಿದ್ದಾರೆ ಎಂದು ಈ ಸಂದರ್ಭದಲ್ಲಿ ಅನ್ವಯವಾಗುವ ಇಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 6.8ನೇ ವಿಧಿಯು ಸ್ಪಷ್ಟವಾಗಿ ಹೇಳುತ್ತದೆ,' ಎಂದು ಪಿಸಿಬಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
'ಇಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಹೇಳುವ ಪ್ರಕಾರ ನೀನು ಇಸಿಬಿಯನ್ನು ಸಂಪರ್ಕಿಸಬೇಕೆಂದು ಈ ಮೂಲಕ ಸಲಹೆ ನೀಡುತ್ತಿದ್ದೇವೆ,' ಎಂದು ಪಿಸಿಬಿ ಹೇಳಿದೆ. ಪಾಕಿಸ್ತಾನ ತಂಡದ ಪರ ಆಡುತ್ತಿರುವ ಎರಡನೇ ಹಿಂದು ಆಟಗಾರನಾಗಿರುವ ದನೀಶ್ ಕನೇರಿಯಾ, ಇಂಗ್ಲಿಷ್ ಕೌಂಟಿ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದಕ್ಕಾಗಿ ಇಸಿಬಿಯಿಂದ ನಿಷೇಧಕ್ಕೀಡಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications