'ಸೆಹ್ವಾಗ್‌ಗಿಂತ ಪ್ರತಿಭಾವಂತ ಆದರೆ ಆತನಷ್ಟು ಮೆದುಳಿಲ್ಲ': ಪಾಕ್ ಆಟಗಾರನ ಬಗ್ಗೆ ಅಖ್ತರ್ ಮಾತು

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇತ್ತೀಚೆಗೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಪಾಕಿಸ್ತಾನದ ಕ್ರಿಕೆಟಿಗನೊಬ್ಬನ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ. ಪಾಕಿಸ್ತಾನದ ಮಾಜಿ ಆಟಗಾರನೋರ್ವನನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಜೊತೆಗೆ ಹೋಲಿಕೆ ಮಾಡಿದ್ದಾರೆ ಅಖ್ತರ್.
ಶೋಯೆಬ್ ಅಖ್ತರ್ ಸೆಹ್ವಾಗ್ ಜೊತೆಗೆ ಹೋಲಿಕೆ ಮಾಡಲು ಆಯ್ದುಕೊಂಡ ಕ್ರಿಕೆಟಿಗ ಇಮ್ರಾನ್ ನಜೀರ್. ಅಚ್ಚರಿಯೇನೆಂದರೆ ಇಮ್ರಾನ್ ನಜೀರ್ ಭಾರತದ ವೀರೇಂದ್ರ ಸೆಹ್ವಾಗ್ ಅವರಿಗಿಂತಲೂ ಪ್ರತಿಭಾನ್ವಿತ ಆಟಗಾರ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಳ್ಳಲು ಪರದಾಡುತ್ತಿದ್ದ ಇಮ್ರಾನ್ ನಜೀರ್ ಬಗ್ಗೆ ಇಂತಾ ಹೇಳಿಕೆ ಅಖ್ತರ್ ಯಾಕೆ ನೀಡಿದರು. ಸೆಹ್ವಾಗ್ ಜೊತೆಗೆ ಹೋಲಿಕೆ ಮಾಡಲು ಯಾವ ಕಾರಣವನ್ನು ನೀಡಿದರು ಅನ್ನುವುದಕ್ಕೆ ಮುಂದೆ ಓದಿ

ನಜೀರ್‌ಗಿಂತ ಸೆಹ್ವಾಗ್ ಪ್ರತಿಭಾನ್ವಿತನಲ್ಲ
ಪಾಕಿಸ್ತಾನದ ಆಟಗಾರ ಬ್ಯಾಟ್ಸ್‌ಮನ್ ಇಮ್ರಾನ್ ನಜೀರ್‌ಗಿಂತ ಹೆಚ್ಚಿನ ಪ್ರತಿಭೆಯನ್ನು ಸೆಹ್ವಾಗ್ ಹೊಂದಿರಲಿಲ್ಲ. ಆದರೆ ಸೆಹ್ವಾಗ್ ಇಮ್ರಾನ್‌ಗಿಂತ ಬುದ್ಧಿವಂತರಾಗಿದ್ದರು. ಸೆಹ್ವಾಗ್‌ಗಿದ್ದ ಮೆದುಳು ಇಮ್ರಾನ್‌ಗೆ ಇರಲಿಲ್ಲ ಎಂದು ಅಖ್ತರ್ ಹೇಳಿದ್ದಾರೆ. ಶೋಯೆಬ್ ಅಖ್ತರ್ ನೀಡಿದ ಈ ಹೇಳಿಕೆ ಸ್ವತಃ ಪಾಕಿಸ್ತಾನಿ ಅಭಿಮಾನಿಗಳಿಗೇ ಗೊಂದಲವನ್ನುಂಟುಮಾಡುತ್ತಿದೆ.

ಉತ್ತಮ ಅವಕಾಶ ಸಿಗಲಿಲ್ಲ
ಭಾರತದ ವಿರುದ್ಧ ಇಮ್ರಾನ್ ನಜೀರ್ ಶತಕವನ್ನು ಬಾರಿಸಿದಾಗ ಆತನಿಗೆ ನಿರಂತರ ಅವಕಾಶವನ್ನು ನೀಡುವಂತೆ ಕೇಳಿಕೊಂಡಿದ್ದೆ. ಆದರೆ ನನ್ನ ಮಾತನ್ನು ಯಾರೂ ಕೇಳಿಸಿಕೊಂಡಿಲ್ಲ ಆತನಿಗೆ ಉತ್ತಮ ಅವಕಾಶ ಸಿಗಲಿಲ್ಲ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಸೆಹ್ವಾಗ್‌ಗಿಂತ ಉತ್ತಮ ಆಟಗಾರನನ್ನು ಹೊಂದುವ ಅವಕಾಶ
ದುಃಖದ ವಿಚಾರವೇನೆಂದರೆ ನಮ್ಮ ಬ್ರ್ಯಾಂಡ್‌ಗಳನ್ನು ಹೇಗೆ ಪ್ರೋತ್ಸಾಹಿಸಬೇಕೆಂದು ನಮಗೆ ತಿಳಿದಿಲ್ಲ. ಇಮ್ರಾನ್ ನಜೀರ್ ಮೂಲಕ ಸೆಹ್ವಾಗ್‌ಗಿಂತ ಉತ್ತಮ ಆಟಗಾರನನ್ನು ಹೊಂದುವ ಅವಕಾಶ ನಮಗಿತ್ತು. ಆದರೆ ಆತನನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಜೀರ್ ಸಾಧನೆ
ಪಾಕಿಸ್ತಾನದ ಬ್ಯಾಟ್ಸ್‌ಮನ್ ಆಗಿದ್ದ ಇಮ್ರಾನ್ ನಜೀರ್ ತಂಡದಲ್ಲಿ ಖಾಯಂ ಆಟಗಾರನಾಗಿ ಸ್ಥಾನವನ್ನು ಪಡೆದುಕೊಳ್ಳು ವಿಫಲರಾಗಿದ್ದರು. ಪಾಕಿಸ್ತಾನಸ ಪರವಾಗಿ ಕೇವಲ 8 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದ ನಜೀರ್ 427 ರನ್ ಗಳಿಸಿದ್ದಾರೆ. 79 ಏಕದಿನ ಪಂದ್ಯಗಳಲ್ಲಿ ಪಾಕ್ ತಂಡದಲ್ಲಿ ಅವಕಾಶ ಪಡೆದ ನಜೀರ್ 2895 ರನ್‌ಗಳಿಸಿದ್ದಾರೆ. 25 ಟಿ20 ಪಂದ್ಯಗಳನ್ನಾಡಿದ ನಜೀರ್ 500 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications