ಚಿತ್ರಗಳಲ್ಲಿ: ಕಣ್ಣೀರು ಹರಿಸಿದ ಹರಿಣಗಳು, ಕೇಕೆ ಹಾಕಿದ ಕಿವಿಗಳು
ಆಕ್ಲೆಂಡ್, ಮಾ.24: ಬಹುಶಃ ವಿಶ್ವಕಪ್ ನ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದೆನಿಸಿದ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಕದನ ವಿಶ್ವದೆಲ್ಲೆಡೆಯ ಕ್ರೀಡಾಭಿಮಾನಿಗಳ ಮನ ತುಂಬಿಸಿದೆ. ಹರಿಣಗಳು ಬಿಕ್ಕಿ ಬಿಕ್ಕಿ ಅಳುವ ದೃಶ್ಯ, ಕಿವೀಸ್ ಆಟಗಾರರ ಗೆಲುವಿನ ಸಂಭ್ರಮ ಪಂದ್ಯದ ರೋಚಕತೆ ಬಹುಕಾಲ ಅಭಿಮಾನಿಗಳನ್ನು ಕಾಡಲಿದೆ.
ವಿಶ್ವಕಪ್ 2015 ವಿಶೇಷ ಪುಟ
ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಎಲಿಯಟ್ ಕಿವೀಸ್ ಪರ ಆಡಿ ಜಯ ತಂದಿದ್ದಲ್ಲದೆ ನ್ಯೂಜಿಲೆಂಡ್ ನ ಹೊಸ ಹೀರೋ ಆಗಿದ್ದಾರೆ. 36ವರ್ಷ ವಯಸ್ಸಿನ ಎಲಿಯಟ್ ಈ ದಿನವನ್ನು ಮರೆಯಲು ಸಾಧ್ಯವಿಲ್ಲ. [ ಹರಿಣಗಳ ರೋದನೆ, ಕಿವೀಸ್ ಸಾಧನೆ ]
ಅದೇ ರೀತಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿಕೊಂಡ ಎಬಿಡಿ ಹಾಗೂ ಅವರ ತಂಡದ ನೋವಿನಲ್ಲಿ ಅನೇಕ ಅಭಿಮಾನಿಗಳು ಭಾಗಿಯಾಗಿದ್ದಾರೆ. ಪಂದ್ಯದ ರೋಚಕ ಕ್ಷಣಗಳನ್ನು ಪಿಟಿಐ ಛಾಯಾಗ್ರಾಹಕರು ಸೆರೆ ಹಿಡಿದು ಕಳಿಸಿದ್ದಾರೆ. ತಪ್ಪದೇ ನೋಡಿ..

ನ್ಯೂಜಿಲೆಂಡ್ ನ ಹೊಸ ಹೀರೋ
ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಎಲಿಯಟ್ ಕಿವೀಸ್ ಪರ ಆಡಿ ಜಯ ತಂದಿದ್ದಲ್ಲದೆ ನ್ಯೂಜಿಲೆಂಡ್ ನ ಹೊಸ ಹೀರೋ ಆಗಿದ್ದಾರೆ. 36ವರ್ಷ ವಯಸ್ಸಿನ ಎಲಿಯಟ್ ಈ ದಿನವನ್ನು ಮರೆಯಲು ಸಾಧ್ಯವಿಲ್ಲ.

ಡೇವಿಡ್ ಮಿಲ್ಲರ್, ಡುಮಿನಿ
ಡೇವಿಡ್ ಮಿಲ್ಲರ್, ಡುಮಿನಿ ಅಪ್ಪಿಕೊಂಡು ದುಃಖ ತೋಡಿಕೊಳ್ಳುತ್ತಿದ್ದಾರೆ.

ಎಬಿ ಡಿ ವಿಲೆಯರ್ಸ್ ಮತ್ತೊಮ್ಮೆ ಆಸರೆ
ಎಬಿ ಡಿ ವಿಲೆಯರ್ಸ್ ಮತ್ತೊಮ್ಮೆ ಉತ್ತಮ ಆಟ ಪ್ರದರ್ಶಿಸಿ 63 ರನ್ (41) ತಂಡಕ್ಕೆ ಆಸರೆಯಾದರು.

ಕೋರೆ ಆಂಡರ್ಸನ್ ನೈಜ ಆಲ್ ರೌಂಡರ್
ಕೋರೆ ಆಂಡರ್ಸನ್ ನೈಜ ಆಲ್ ರೌಂಡರ್ ಆಟವಾಡಿದರು. ತ್ವರಿತವಾಗಿ ಅರ್ಧಶತಕ ಸಿಡಿಸಿದರು.

ಮಾರ್ನೆ ಮಾರ್ಕೆಲ್ ರೋದನ
ಪಂದ್ಯ ಸೋತ ಮೇಲೆ ಕುಸಿದು ಕುಳಿತ ವೇಗಿ ಮಾರ್ನೆ ಮಾರ್ಕೆಲ್ ಮುಖ ನೋಡುವಂತಿರಲಿಲ್ಲ. ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲವಲ್ಲ ಎಂಬ ನೋವು ಹತಾಶೆ ಎದ್ದುಕಾಣುತ್ತಿತ್ತು.

ಕ್ಯಾಚ್ ಹಿಡಿಯದೆ ಬಿಟ್ಟ ದಕ್ಷಿಣ ಆಫ್ರಿಕನ್ಸ್
ಕ್ಯಾಚ್ ಹಿಡಿಯದೆ ಬಿಟ್ಟ ದಕ್ಷಿಣ ಆಫ್ರಿಕನ್ಸ್ ,ಸೆಮಿಫೈನಲ್ ನಲ್ಲಿ ಹಲವು ಬಾರಿ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿ ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿಕೊಂಡರು.

ಕಿವೀಸ್ ನಿಂದ ಭರ್ಜರಿ ರನ್ ಚೇಸ್
ಕಿವೀಸ್ ಗೆಲ್ಲಲು 6 ಎಸೆತಗಳಲ್ಲಿ 12ರನ್ ಬೇಕಿತ್ತು. ಕೊನೆಗೆ ಸಿಕ್ಸರ್ ಮೂಲಕ ಪಂದ್ಯವನ್ನು ಎಲಿಯಟ್ ಗೆಲ್ಲಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆ 4 ವಿಕೆಟ್ ಗಳ ಜಯ, ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications