Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ವೀಟ್ಸ್ ಸುರಿಮಳೆ: ಹರಿಣಗಳ ರೋದನೆ, ಕಿವೀಸ್ ಸಾಧನೆ

ಆಕ್ಲೆಂಡ್, ಮಾ.24: ಮಳೆಯಿಂದ ಒದ್ದೆಯಾಗಿ ಒಣಗಿದ ಮೈದಾನವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟರ್ ಗಳು ತಮ್ಮ ಕಂಬನಿಯಿಂದ ಮತ್ತೊಮ್ಮೆ ಒದ್ದೆ ಮಾಡಿಬಿಟ್ಟರು. ವಿಶ್ವಕಪ್ ಫೈನಲ್ ಹೊಸ್ತಿಲಿಗೆ ಬಂದ ಹರಿಣಗಳು ಮತ್ತೊಮ್ಮೆ ಕಾಲು ಮುರಿದುಕೊಂಡು ಮುಗ್ಗರಿಸಿವೆ. ರೋಚಕ ಅಂತ್ಯ ಪಡೆದ ಉಪಾಂತ್ಯದಲ್ಲಿ ಕಿವೀಸ್ ಮೇಲುಗೈ ಸಾಧಿಸಿ ಮೊದಲ ಬಾರಿಗೆ ವಿಶ್ವಕಪ್ ಹಣಾಹಣಿಯ ಅಂತಿಮ ಹಂತ ತಲುಪಿದೆ. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಎಲಿಯಟ್ ಕಿವೀಸ್ ಪರ ಆಡಿ ಜಯದ ತಂದಿತ್ತಿದ್ದು ವಿಪರ್ಯಾಸ.

ವಿಶ್ವಕಪ್ 2015 ವಿಶೇಷ ಪುಟ
ದಕ್ಷಿಣ ಆಫ್ರಿಕಾ ಕ್ರಿಕೆಟರ್ ಗಳ ರೋದನ, ಕಿವೀಸ್ ಆಟಗಾರರ ಅಬ್ಬರ, ದಕ್ಷಿಣ ಆಫ್ರಿಕಾಕ್ಕೆ ಪದೇ ಪದೇ ವಿಲನ್ ಆಗುತ್ತಿದ್ದ ಮಳೆ ಈ ಬಾರಿ ಅನುಕೂಲ ಮಾಡಿಕೊಟ್ಟಿತೋ ಅಥವಾ ಅನಾಹುತಕ್ಕೆ ನಾಂದಿ ಹಾಡಿತೋ ಎಂಬ ಚರ್ಚೆಇನ್ನೂ ನಡೆಯುತ್ತಲೇ ಇದೆ.[ಹರಿಣಗಳ ಮೇಲೆ ಕಿವೀಸ್ ರೋಚಕ ಜಯ, ಫೈನಲಿಗೆ ಲಗ್ಗೆ]

ದಕ್ಷಿಣ ಆಫ್ರಿಕಾ ಒಡ್ಡಿದ್ದ 43 ಓವರ್ ಗಳಲ್ಲಿ 298 ರನ್ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು 1 ಎಸೆತ ಬಾಕಿ ಇರುವಂತೆ ಚೇಸ್ ಮಾಡಿ ಮೊಟ್ಟ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಕುಣಿದಾಡುತ್ತಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ: [ಕಣ್ಣೀರು ಹರಿಸಿದ ಹರಿಣಗಳು, ಕೇಕೆ ಹಾಕಿದ ಕಿವಿಗಳು]

 ಮೊದಲ ಬಾರಿಗೆ ಫೈನಲ್ ತಲುಪಿದ ಸಾಧನೆ

ಮೊದಲ ಬಾರಿಗೆ ಫೈನಲ್ ತಲುಪಿದ ಸಾಧನೆ

ವಿಶ್ವಕಪ್‌ನ ಕ್ರಿಕೆಟ್ ಇತಿಹಾಸದಲ್ಲಿ 6 ಬಾರಿ (1975, 1979,1992,1999, 2007,2011) ಸೆಮಿಫೈನಲ್‌ ಹಂತ ಮುಟ್ಟಿರುವ ನ್ಯೂಜಿಲ್ಯಾಂಡ್ ಮೊದಲ ಬಾರಿಗೆ ಫೈನಲ್ ತಲುಪಿದ ಸಾಧನೆ ಮಾಡಿದೆ.

ಗೌತಮ್ ಭಿಮಾನಿ ಟ್ವೀಟ್ಸ್

ಕಿವೀಸ್ ಆಟಗಾರ ಗ್ರ್ಯಾಂಟ್ ಎಲಿಯಟ್ ಬಗ್ಗೆ ಗೌತಮ್ ಭಿಮಾನಿ ಹೇಳಿದ್ದು ಹೀಗೆ

ವಿಶ್ವಕಪ್ ನಲ್ಲಿ ಸೋಲಿನ ನೋವುಂಡ ಹರಿಣಗಳು

ಹರಿಣಗಳು ಬಿಕ್ಕಿ ಬಿಕ್ಕಿ ಅಳುವ ದೃಶ್ಯ, ಕಿವೀಸ್ ಆಟಗಾರರ ಗೆಲುವಿನ ಸಂಭ್ರಮ ಪಂದ್ಯದ ರೋಚಕತೆ ಬಹುಕಾಲ ಅಭಿಮಾನಿಗಳನ್ನು ಕಾಡಲಿದೆ.

ಮಾಜಿ ನಾಯಕ ಸ್ಪೀಫನ್ ಫ್ಲೆಮಿಂಗ್

ನ್ಯೂಜಿಲೆಂಡ್ ನ ಮಾಜಿ ನಾಯಕ ಸ್ಪೀಫನ್ ಫ್ಲೆಮಿಂಗ್ ಅವರು ಕಿವೀಸ್ ಗೆಲುವಿನ ಸಂಭ್ರಮ, ಆಟದ ವೈಖರಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಟ್ವೀಟ್

ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ದಕ್ಷಿಣ ಆಫ್ರಿಕಾ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೊಂದು ಭಾವನಾತ್ಮಕ ಕ್ಷಣ ಎಂದಿದ್ದಾರೆ.

ಮಹೇಲ ಜಯವರ್ದನೆ ಟ್ವೀಟ್

ವಿಶ್ವಕಪ್ ಟೂರ್ನಿ ನಂತರ ನಿವೃತ್ತಿ ಘೋಷಿಸಿರುವ ಮಹೇಲ ಜಯವರ್ದನೆ ಅವರು ಟ್ವೀಟ್ ಮಾಡಿ ಸೆಮಿಫೈನಲ್ ಪಂದ್ಯದ ರೋಚಕತೆಗೆ ಮಾರುಹೋದೆ ಎಂದಿದ್ದಾರೆ.

ಪಂದ್ಯದ ಎಲಿಯಟ್ ಪ್ರತಿಕ್ರಿಯೆ

ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ನ್ಯೂಜಿಲೆಂಡ್ ಹೀರೋ ಎಲಿಯಟ್ ಪ್ರತಿಕ್ರಿಯೆ

ಹರ್ಷ ಬೋಗ್ಲೆ ಪ್ರತಿಕ್ರಿಯೆ

ಕ್ರಿಕೆಟ್ ಕಾಮೆಂಟೆಟರ್ ಹರ್ಷ ಬೋಗ್ಲೆ ಪ್ರತಿಕ್ರಿಯೆ ನೀಡಿ.. ಸಕತ್ ಕಿಕ್ ನೀಡಿದ ಪಂದ್ಯ ಎಂದಿದ್ದಾರೆ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+