IND vs AFG: ಅನುಷ್ಕಾ ಕಬ್ಬಿಣ ಮಹಿಳೆ, ಕೊಹ್ಲಿ ಉಕ್ಕಿನ ಮನುಷ್ಯ; ಹೀಗಂದಿದ್ಯಾಕೆ ಪಾಕ್ ಕ್ರಿಕೆಟಿಗ?

ಗುರುವಾರ ಅಫ್ಘಾನಿಸ್ತಾನ ವಿರುದ್ಧ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಅಂತಾರಾಷ್ಟ್ರೀಯ ಶತಕವನ್ನು ಗಳಿಸುವ ಮೂಲಕ ಸಾವಿರ ದಿನಗಳ ಶತಕದ ಬರವನ್ನು ನೀಗಿಸಿಕೊಳ್ಳಲು ಸಾಧ್ಯವಾಯಿತು.
ಅಫ್ಘಾನಿಸ್ತಾನದ ಬೌಲರ್‌ಗಳಿಗೆ ತಮ್ಮ ಬ್ಯಾಟಿಂಗ್ ರುಚಿ ತೋರಿಸಿದ ಅವರು, ಮೈದಾನದ ಎಲ್ಲಾ ಭಾಗಗಳಿಗೆ ಬಾಲ್ ಕಳಿಸಿದರು. ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಗಳಿಸಿದರೆ, ಭಾರತ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಭುವನೇಶ್ವರ್ ಕುಮಾರ್ ತಮ್ಮ ಬಿಗಿ ಬೌಲಿಂಗ್ ದಾಳಿ ಮೂಲಕ ಅಫ್ಘಾನಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಗುರುವಾರ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದ ನಂತರ ಅವರ ಯಶಸ್ಸಿನ ಹಿಂದೆ ಅನುಷ್ಕಾ ಶರ್ಮಾ ಇದ್ದಾರೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೊಗಳಿದ್ದಾರೆ.

ಪತ್ನಿ ಮತ್ತು ಮಗಳಿಗೆ ಶತಕ ಅರ್ಪಿಸಿದ ವಿರಾಟ್ ಕೊಹ್ಲಿ
ಇನ್ನು ಭುವನೇಶ್ವರ್ ಕುಮಾರ್ ನೇತೃತ್ವದ ಭಾರತೀಯ ಬೌಲಿಂಗ್ ಪಡೆ ಅಫ್ಘಾನಿಸ್ತಾನ ಬ್ಯಾಟಿಂಗ್ ಇನ್ನಿಂಗ್ಸ್ ಅನ್ನು ಧ್ವಂಸಗೊಳಿಸಿದರು. ಭಾರತವು ಪಂದ್ಯವನ್ನು 101 ರನ್‌ಗಳಿಂದ ಗೆದ್ದು ತಮ್ಮ 2022ರ ಏಷ್ಯಾಕಪ್ ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಿತು.
ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಶತಕವನ್ನು ತಮ್ಮ ಪತ್ನಿ ಮತ್ತು ಮಗಳಿಗೆ ಅರ್ಪಿಸಿದರು ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ತಮ್ಮ ಕಷ್ಟದ ಸಮಯದಲ್ಲಿ ತಮ್ಮ ಬೆಂಬಲಕ್ಕೆ ನಿಂತರು ಎಂದು ಕೊಹ್ಲಿ ಹೇಳಿದರು.

ವಿರಾಟ್ ಕೊಹ್ಲಿ ಉಕ್ಕಿನ ಮನುಷ್ಯ, ಅನುಷ್ಕಾ ಶರ್ಮ ಕಬ್ಬಿಣ
"ನಾನು ಈ ಕಠಿಣ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದ ಒಬ್ಬ ವಿಶೇಷ ವ್ಯಕ್ತಿಯನ್ನು ಉಲ್ಲೇಖಿಸುತ್ತೇನೆ, ಅದು ಅನುಷ್ಕಾ. ಅವರು ಈ ಎಲ್ಲಾ ತಿಂಗಳುಗಳಲ್ಲಿ ನನ್ನ ಸಂಪೂರ್ಣ ಕಳಪೆ ಪ್ರದರ್ಶನ ನೋಡಿದ್ದರಿಂದ ನಾನು ಅವಳನ್ನು ಉಲ್ಲೇಖಿಸಿದೆ. ಅವಳು ನನಗೆ ಪರಿಸ್ಥಿತಿಗಳನ್ನು ದೃಷ್ಟಿಕೋನದಲ್ಲಿ ಇರಿಸುತ್ತಿದ್ದಳು, ನನಗೆ ಸರಿಯಾದ ರೀತಿಯ ಮಾರ್ಗದರ್ಶನವನ್ನು ನೀಡುತ್ತಿದ್ದಳು. ದೃಷ್ಟಿ ಮುಂದೆ ಇಡುವಂತೆ ಹೇಳುತ್ತಿದ್ದಳು ಮತ್ತು ನಾನು ಶಾಂತ ವ್ಯಕ್ತಿಯಾಗಿ ಫಾರ್ಮ್‌ಗೆ ಮರಳಿದೆ," ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, "ವಿರಾಟ್ ಕೊಹ್ಲಿಯ ಯಶಸ್ಸಿನ ಹಿಂದೆ ಅನುಷ್ಕಾ ಶರ್ಮ ಇರುವುದನ್ನು ಹೊಗಳಿದರು ಮತ್ತು ಅವರನ್ನು ಕಬ್ಬಿಣದ ಮಹಿಳೆ ಎಂದು ಕರೆದರು. ವಿರಾಟ್ ಕೊಹ್ಲಿಯನ್ನು ಉಕ್ಕಿನಿಂದ ಮಾಡಿದ ಮನುಷ್ಯ," ಎಂದು ಶ್ಲಾಘಿಸಿದರು.

ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟರ್
ವಿರಾಟ್ ಕೊಹ್ಲಿ ತಮ್ಮ ಪಂದ್ಯದ ನಂತರದ ಸಂದರ್ಶನದಲ್ಲಿ "ಅವಳು (ಅನುಷ್ಕಾ) ನನ್ನ ಕೆಟ್ಟ ಭಾಗವನ್ನು ನೋಡಿದ್ದಾಳೆ' ಎಂದು ಹೇಳಿದ್ದಾರೆ. ವೋ ಅಪ್ನಿ ಬೇಗಂ ಕೆ ಬಾರೆ ಮೆ ಬಾತ್ ಕರ್ ರಹೇ ದಿ (ಅವರು ತಮ್ಮ ಹೆಂಡತಿಯ ಬಗ್ಗೆ ಮಾತನಾಡುತ್ತಿದ್ದರು). ಅನುಷ್ಕಾ ಶರ್ಮಾಗೆ ಹ್ಯಾಟ್ಸ್ ಆಫ್ ಹೇಳಿದ್ದು ಚೆನ್ನಾಗಿದೆ. ಅನುಷ್ಕಾ ನೀವು ಕಬ್ಬಿಣದ ಮಹಿಳೆ ಮತ್ತು ವಿರಾಟ್ ಕೊಹ್ಲಿ ಉಕ್ಕಿನಿಂದ ತಯಾರಿಸಿದ ಮನುಷ್ಯ," ಎಂದು ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದರು.
ವಿರಾಟ್ ಕೊಹ್ಲಿಯನ್ನು ಮತ್ತಷ್ಟು ಹೊಗಳಿದ ಶೋಯೆಬ್ ಅಖ್ತರ್, ಅವರು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟರ್ ಎಂದು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
"ನಿಮಗೆ ಅಭಿನಂದನೆಗಳು ವಿರಾಟ್ ಕೊಹ್ಲಿ. ನೀವು ಉತ್ತಮ ನರಗಳ ಮನುಷ್ಯ. ಬೆಳೆಯುತ್ತಲೇ ಇರಿ ಮತ್ತು ನೀವು ತುಂಬಾ ಒಳ್ಳೆಯ ವ್ಯಕ್ತಿ. ನೀವು ಯಾವಾಗಲೂ ಸತ್ಯವನ್ನು ಬೆಂಬಲಿಸುತ್ತೀರಿ ಮತ್ತು ಅದಕ್ಕಾಗಿಯೇ ಕೊನೆಯಲ್ಲಿ ನಿಮಗೆ ಕೆಟ್ಟದ್ದೇನೂ ಆಗುವುದಿಲ್ಲ. ನೆನಪಿಡಿ, ನೀವು ಯಾವಾಗಲೂ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠರಾಗಿ ನೆನಪಿನಲ್ಲಿ ಉಳಿಯುತ್ತೀರಿ," ಎಂದು ಶೋಯೆಬ್ ಅಖ್ತರ್ ಹಾರೈಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications