IND vs AFG: ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಅಪರೂಪದ ದಾಖಲೆ ಹಿಂದಿಕ್ಕಿದ ಭಾರತ
ಬುಧವಾರ, ಜನವರಿ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ರೋಚಕ ಗೆಲುವಿನ ನಂತರ, ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 3-0 ಅಂತರದ ವೈಟ್‌ವಾಶ್ ಪೂರ್ಣಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಮತ್ತು ರಿಂಕ್ ಸಿಂಗ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್‌ಗಳನ್ನು ಕಲೆಹಾಕಿತು.
213 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಸಮಬಲಗೊಳಿಸಿತು ಮತ್ತು ಪಂದ್ಯವು ಟೈಗೊಂಡಿತು.

ಇದಕ್ಕೂ ಮುನ್ನ ರೋಹಿತ್ ಶರ್ಮಾ, ರಿಂಕು ಸಿಂಗ್ ಮತ್ತು ರವಿ ಬಿಷ್ಣೋಯ್ ಅಗ್ರ ಪ್ರದರ್ಶನಕಾರರಾಗಿ ಹೊರಹೊಮ್ಮುವುದರೊಂದಿಗೆ ರೋಚಕ ಪಂದ್ಯವು ಅಂತಿಮವಾಗಿ ಭಾರತ ತಂಡದ ಪರವಾಗಿ ಕೊನೆಗೊಳ್ಳಲು ಎರಡು ಸೂಪರ್ ಓವರ್‌ಗಳು ಬೇಕಾಯಿತು.
ಈ ಸರಣಿ ಗೆಲುವಿನೊಂದಿಗೆ ಭಾರತ ತಂಡವು ಈಗ ಟಿ20 ಕ್ರಿಕೆಟ್‌ನಲ್ಲಿ 9 ವೈಟ್‌ವಾಶ್ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಹೊಂದಿದೆ. ಇದು ಕ್ರಿಕೆಟ್‌ನ ಕಡಿಮೆ ಸ್ವರೂಪದಲ್ಲಿ ಯಾವುದೇ ದೇಶದಿಂದ ಅತಿ ಹೆಚ್ಚು ಸರಣಿ ಗೆಲುವಾಗಿದೆ.
ಭಾರತ ತಂಡವು ಪಾಕಿಸ್ತಾನ ತಂಡದೊಂದಿಗೆ 8 ರಲ್ಲಿ ಸಮಬಲಗೊಂಡಿತ್ತು. ಆದರೆ ಬುಧವಾರದ ಗೆಲುವಿನ ನಂತರ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಅದ್ಭುತ ಟಿ20 ಸಾಧನೆಯನ್ನು ಮಾಡಿದೆ.
ರೋಚಕ ಎರಡು ಸೂಪರ್ ಓವರ್‌ಗಳ ನಂತರ, ಭಾರತ ತಂಡವು ಅಫ್ಘಾನಿಸ್ತಾನ ತಂಡವನ್ನು ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೋಲಿಸಿತು. 212 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಕೂಡ ಅದೇ ಸ್ಕೋರ್‌ನಲ್ಲಿ ಅಂತ್ಯಗೊಂಡಿತು.

ಪಂದ್ಯವನ್ನು ಹಿಗ್ಗಿಸಲು ಭಾರತ ತಂಡ ಮೊದಲ ಸೂಪರ್ ಓವರ್‌ನಲ್ಲಿ ಅಫ್ಘಾನಿಸ್ತಾನ ತಂಡ ಸ್ಕೋರ್ 16 ಅನ್ನು ಸಮಗೊಳಿಸಿತು, ಆದರೆ, ರವಿ ಬಿಷ್ಣೋಯ್ ಮೂಲಕ ರೋಹಿತ್ ಶರ್ಮಾ ಅವರ ತಂಡವು ಅಗತ್ಯವಿರುವ ಎರಡು ವಿಕೆಟ್‌ಗಳನ್ನು ಪಡೆದ ಕಾರಣ ಪ್ರವಾಸಿ ತಂಡಕ್ಕೆ ಎರಡನೇ ಸೂಪರ್ ಓವರ್‌ನಲ್ಲಿ 12 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.
ಇದಕ್ಕೂ ಮೊದಲು, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಅಜೇಯ 69 ಎಸೆತಗಳಲ್ಲಿ ಅಜೆಯ 121 ರನ್ ಮತ್ತು ರಿಂಕು ಸಿಂಗ್ ಅವರ 39 ಎಸೆತಗಳಲ್ಲಿ ಅಜೆಯ 69 ರನ್ ಭಾರತ ಬೃಹತ್ ಮೊತ್ತ ಕಲೆಹಾಕಲು ನೆರವಾಯಿತು.
ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ 22 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದ ನಂತರ, ಅದೇ ನಾಲ್ಕು ವಿಕೆಟ್‌ಗೆ 212 ರನ್ ಗಳಿಸಿ ಗಮನಾರ್ಹ ಚೇತರಿಕೆ ಕಂಡಿತು.
ಪ್ರತ್ಯುತ್ತರವಾಗಿ ಅಫ್ಘಾನಿಸ್ತಾನ ತಂಡವು 212 ರನ್‌ಗಳಿಗೆ ನಿಯಂತ್ರಣಗೊಂಡಿತು. ಗುಲ್ಬದಿನ್ ನೈಬ್ 23 ಎಸೆತಗಳಲ್ಲಿ 55 ರನ್ ಗಳಿಸಿ ಅವರ ತಂಡದ ಅದ್ಭುತ ಪುನರಾಗಮನಕ್ಕೆ ಕಾರಣರಾದರು.
ಬೌಲಿಂಗ್‌ನಲ್ಲಿ ಫರೀದ್ ಅಹ್ಮದ್ ಮಲಿಕ್ ಅಫ್ಘಾನಿಸ್ತಾನದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಏಕೆಂದರೆ, 4 ಓವರ್‌ಗಳ ಕೋಟಾದಲ್ಲಿ 20 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಅತ್ಯುತ್ತಮ ಅಂಕಿಅಂಶ ಪಡೆದರು. ಉಳಿದ ಬೌಲರ್‌ಗಳನ್ನು ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ತರಾಟೆಗೆ ತೆಗೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications