For Quick Alerts
ALLOW NOTIFICATIONS  
For Daily Alerts
 

Ind vs Aus 2nd T20I: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಂ, ಸಂಭಾವ್ಯ ಪ್ಲೇಯಿಂಗ್ 11

India vs Australia T20

ಮೊಹಾಲಿ ಅಂಗಳದಲ್ಲಿ ಮುಗ್ಗರಿಸಿದ ಬಳಿಕ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡ ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಶುಕ್ರವಾರ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ ಸರಣಿ ಜೀವಂತವಾಗಿರಿಸಲು ಈ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮೊದಲ ಟಿ20 ಪಂದ್ಯದಲ್ಲಿ 208 ರನ್ ದಾಖಲಿಸಿದ್ರೂ ರೋಹಿತ್ ಶರ್ಮಾ ಪಡೆ ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲಗೊಂಡಿತು. ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಭಾರತದ ವಿರುದ್ಧ ಕಾಂಗರೂಗಳು ಗೆದ್ದು ಬೀಗಿದ್ರು. ಹೀಗಾಗಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿವೆ.

ಟಿ20 ಫಾರ್ಮೆಟ್‌ನಲ್ಲಿ ಕಳೆಗುಂದುತ್ತಿರುವ ಟೀಂ ಇಂಡಿಯಾ

ಟಿ20 ಫಾರ್ಮೆಟ್‌ನಲ್ಲಿ ಕಳೆಗುಂದುತ್ತಿರುವ ಟೀಂ ಇಂಡಿಯಾ

ಹೌದು ಏಷ್ಯಾಕಪ್‌ಗೂ ಮುನ್ನ ಟಿ20 ಫಾರ್ಮೆಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿತ್ತು. ರೋಹಿತ್ ನಾಯಕತ್ವದಲ್ಲಿ ಪಂದ್ಯಗಳನ್ನ ಸೋತಿದ್ದೇ ಕಡಿಮೆ. ಹೀಗಿರುವಾಗ ಏಷ್ಯಾಕಪ್‌ನಲ್ಲಿ ಫೈನಲ್ ಮುಖವನ್ನೂ ನೋಡದೆ ನಿರ್ಗಮಿಸಿದ್ದ ಭಾರತ ಆಸಿಸ್ ವಿರುದ್ಧ ಮೊದಲ ಟಿ20 ಪಂದ್ಯ ಸೋತಿರುವ ಕಾರಣ ಕಂಬ್ಯಾಕ್‌ ಮಾಡುವುದು ಅನಿವಾರ್ಯವಾಗಿದೆ.

ಹೆಡ್ ಟು ಹೆಡ್ ರೆಕಾರ್ಡ್‌

ಹೆಡ್ ಟು ಹೆಡ್ ರೆಕಾರ್ಡ್‌

ಟಿ20 ಫಾರ್ಮೆಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 13 ಪಂದ್ಯಗಳನ್ನು ಟೀಂ ಇಂಡಿಯಾ ಜಯಿಸಿದ್ರೆ, 10 ಪಂದ್ಯಗಳನ್ನ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಹೀಗಾಗಿ ಚುಟುಕು ಫಾರ್ಮೆಟ್‌ನಲ್ಲಿ ಕಾಂಗರೂ ರಾಷ್ಟ್ರಕ್ಕಿಂತ ಭಾರತವೇ ಒಂದು ಕೈ ಮೇಲಿದ್ದರೂ, ಪ್ರಸ್ತುತ ಫಾರ್ಮ್‌ ನೋಡಿದ್ರೆ ಹಾಲಿ ಚಾಂಪಿಯನ್ನರು ಮುಂದಿದ್ದಾರೆ.

ಹಾರ್ದಿಕ್ ಪಾಂಡ್ಯ vs ಬೆನ್‌ ಸ್ಟೋಕ್ಸ್‌: ಇಬ್ಬರಲ್ಲಿ ಯಾರು ಬೆಸ್ಟ್ ಎಂದು ತಿಳಿಸಿದ ರಶೀದ್ ಲತೀಫ್

ಪಿಚ್ ರಿಪೋರ್ಟ್ ಮತ್ತು ಹವಾಮಾನ

ಪಿಚ್ ರಿಪೋರ್ಟ್ ಮತ್ತು ಹವಾಮಾನ

ನಾಗ್ಪುರದಲ್ಲಿ ಹವಾಮಾನವು 28 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, 75% ಹ್ಯುಮಿಡಿಟಿ ಇರಲಿದೆ ಹಾಗೂ 5-7 km/hr ವೇಗದಲ್ಲಿ ಗಾಳಿ ಬೀಸಲಿದೆ. ಪಂದ್ಯದ ವೇಳೆಯಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆಯಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಪಿಚ್‌ ಬ್ಯಾಟಿಂಗ್‌ಗೆ ಸ್ನೇಹಿಯಾಗಿದ್ದು, ದೊಡ್ಡ ಸ್ಕೋರ್ ಅನ್ನು ಸಹ ನಿರೀಕ್ಷಿಸಬಹುದಾಗಿದೆ. ಅರ್ಧ ಪಂದ್ಯದ ಬಳಿಕ ಪೇಸರ್‌ಗಳಿಗೆ ಹೆಚ್ಚು ನೆರವಾಗಬಹುದು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಬಹುದು. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 178 ರನ್ ಆಗಿದೆ.

ಇನ್ನು ಈ ಪಿಚ್‌ನಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಗೆದ್ದಿರುವ ಉದಾಹರಣೆ ಹೆಚ್ಚಿದ್ದು, ಗೆಲುವಿನ ಪರ್ಸಂಟೇಜ್ 60ರಷ್ಟಿದೆ.

ಐಪಿಎಲ್‌ನಲ್ಲಿ ನಡೆಯದ ಆಟ ವಿಶ್ವಕಪ್‌ನಲ್ಲಿ ನಡಿಯುತ್ತಾ?: ಐಪಿಎಲ್‌ನಲ್ಲಿ ಫ್ಲಾಪ್ ಆದ ಈ 5 ಕ್ರಿಕೆಟಿಗರು ವಿಶ್ವಕಪ್ ತಂಡಕ್ಕೆ ಆಯ್ಕೆ

ಭಾರತ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಭಾರತ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಭಾರತ: 1 ರೋಹಿತ್ ಶರ್ಮಾ, 2 ಕೆಎಲ್ ರಾಹುಲ್, 3 ವಿರಾಟ್ ಕೊಹ್ಲಿ, 4 ಸೂರ್ಯಕುಮಾರ್ ಯಾದವ್, 5 ಹಾರ್ದಿಕ್ ಪಾಂಡ್ಯ, 6 ದಿನೇಶ್ ಕಾರ್ತಿಕ್ / ರಿಷಬ್ ಪಂತ್, 7 ಅಕ್ಷರ್ ಪಟೇಲ್, 8 ಹರ್ಷಲ್ ಪಟೇಲ್, 9 ಭುವನೇಶ್ವರ್ ಕುಮಾರ್ / ದೀಪಕ್ ಚಾಹರ್, 10 ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ 11 ಯುಜುವೇಂದ್ರ ಚಾಹಲ್

ಆಸ್ಟ್ರೇಲಿಯಾ: 1 ಆರನ್ ಫಿಂಚ್, 2 ಕ್ಯಾಮರೂನ್ ಗ್ರೀನ್, 3 ಸ್ಟೀವ್ ಸ್ಮಿತ್, 4 ಗ್ಲೆನ್ ಮ್ಯಾಕ್ಸ್‌ವೆಲ್, 5 ಟಿಮ್ ಡೇವಿಡ್, 6 ಜೋಶ್ ಇಂಗ್ಲಿಸ್, 7 ಮ್ಯಾಥ್ಯೂ ವೇಡ್, 8 ಪ್ಯಾಟ್ ಕಮಿನ್ಸ್, 9 ನಾಥನ್ ಎಲ್ಲಿಸ್, 10 ಆಡಮ್ ಝಂಪಾ, 11 ಜೋಶ್ ಹ್ಯಾಜಲ್‌ವುಡ್.

ಫ್ಯಾಂಟೆಸ್‌ ಡ್ರೀಂ ಟೀಂ 1

ಫ್ಯಾಂಟೆಸ್‌ ಡ್ರೀಂ ಟೀಂ 1

1 ಕೆಎಲ್ ರಾಹುಲ್, 2 ಕ್ಯಾಮರೂನ್ ಗ್ರೀನ್, 3 ಸೂರ್ಯಕುಮಾರ್ ಯಾದವ್, 4 ಹಾರ್ದಿಕ್ ಪಾಂಡ್ಯ, 5 ಸ್ಟೀವ್ ಸ್ಮಿತ್, 6 ಮ್ಯಾಥ್ಯೂ ವೇಡ್, 7 ಅಕ್ಸರ್ ಪಟೇಲ್, 8 ನಾಥನ್ ಎಲ್ಲಿಸ್, 9 ಜೋಶ್ ಹ್ಯಾಜಲ್‌ವುಡ್, 10 ಆಡಮ್ ಝಂಪಾ, 11 ಜಸ್ಪ್ರೀತ್ ಬುಮ್ರಾ.

ನಾಯಕ: ಹಾರ್ದಿಕ್ ಪಾಂಡ್ಯ, ಉಪನಾಯಕ: ಕ್ಯಾಮರೂನ್ ಗ್ರೀನ್, ವಿಕೆಟ್ ಕೀಪರ್: ಮ್ಯಾಥ್ಯೂ ವೇಡ್

ಪಂದ್ಯದ ಪ್ರೆಡಿಕ್ಷನ್

ಪಂದ್ಯದ ಪ್ರೆಡಿಕ್ಷನ್

ಮೊದಲ ಟಿ20 ಪಂದ್ಯದಲ್ಲಿ ಸೋಲನ್ನ ಅನುಭವಿಸಿದ್ದರೂ ಸಹ ಟೀಂ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ನಾಗ್ಪುರದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ನಂಬರ್ 1 ಟಿ20 ತಂಡವಾದ ಭಾರತ ಐದನೇ ರ್ಯಾಂಕಿಂಗ್‌ನ ಆಸ್ಟ್ರೇಲಿಯಾವನ್ನ ಮಣಿಸುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಈ ಪಿಚ್‌ನಲ್ಲಿ ಆಸ್ಟ್ರೇಲಿಯಾ ಟಿ20 ಪಂದ್ಯ ಆಡಿದ ಅನುಭವ ಹೊಂದಿಲ್ಲ. ಆದ್ರೆ ಪ್ರಸ್ತುತ ಫಾರ್ಮ್ ಗಮನಿಸಿದ್ರೆ, ಆಸ್ಟ್ರೇಲಿಯಾ ಗೆಲುವಿನ ಫೇವರಿಟ್ ಆಗಿದೆ. ಏಕೆಂದರೆ ತಂಡವು ಉತ್ತಮ ಬ್ಯಾಲೆನ್ಸ್‌ ಜೊತೆಗೆ ಬಲಿಷ್ಠ ಬೌಲಿಂಗ್ ಯುನಿಟ್ ಹೊಂದಿದೆ.

Story first published: Thursday, September 22, 2022, 16:51 [IST]
Other articles published on Sep 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+