ಹಾರ್ದಿಕ್ ಪಾಂಡ್ಯ vs ಬೆನ್‌ ಸ್ಟೋಕ್ಸ್‌: ಇಬ್ಬರಲ್ಲಿ ಯಾರು ಬೆಸ್ಟ್ ಎಂದು ತಿಳಿಸಿದ ರಶೀದ್ ಲತೀಫ್

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್‌ಗಳ ಸೋಲನ್ನ ಅನುಭವಿಸಿತು. ಮೊಹಾಲಿಯಲ್ಲಿ ನಡೆದ ಈ ಪಂದ್ಯ ಭಾರತ ತಂಡದ ಸೋಲಿನ ಬಳಿಕ ಹಲವು ಪ್ರಶ್ನೆಗಳು ಸೃಷ್ಟಿಯಾಗಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ಗೆ ಚಿಂತೆಗೀಡುಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 208 ರನ್ ಗಳಿಸಿತು. ಆದರೆ ಆಸ್ಟ್ರೇಲಿಯಾ ಈ ಸವಾಲಿನ ಮೊತ್ತವನ್ನ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು. ಕ್ಯಾಮರೂನ್ ಗ್ರೀನ್ ಮತ್ತು ಮ್ಯಾಥ್ಯೂ ವೇಡ್ ಕ್ರಮವಾಗಿ 61 ಮತ್ತು 45 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾದ ಗೆಲುವಿನ ಹೀರೋಗಳಾದರು.

ಭಾರತ ಪರ ಅಬ್ಬರಿಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ

ಭಾರತ ಪರ ಅಬ್ಬರಿಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ

ಕೆ.ಎಲ್ ರಾಹುಲ್ ಉತ್ತಮ ಅರ್ಧಶತಕದ ಹೊರತಾಗಿಯು ರೋಹಿತ್ ಶರ್ಮಾ ಮತ್ತು ಕೊಹ್ಲಿ ವೈಫಲ್ಯ ಅನುಭವಿಸಿದ ಪರಿಣಾಮ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚು ಒತ್ತಡ ಕಂಡುಬಂದಿತು. ಜೊತೆಗೆ ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಇದಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಉತ್ತಮ ಆಟವಾಡಿದ್ರೂ ದೊಡ್ಡ ಇನ್ನಿಂಗ್ಸ್‌ ಆಗಿ ಪರಿವರ್ತಿಸಲಿಲ್ಲ.

ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ತಾಕತ್ತನ್ನ ಪ್ರದರ್ಶಿಸಿದ್ರು. ಹಾರ್ದಿಕ್ 30 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು ಮತ್ತು ಟೀಮ್ ಇಂಡಿಯಾ ಪರ ಉತ್ತಮ ಸ್ಕೋರ್ ಕಲೆಹಾಕಿದರು. ಹಾರ್ದಿಕ್‌ ಕೊನೆಯ ಮೂರು ಓವರ್‌ಗಳಲ್ಲಿ ವೇಗವಾಗಿ ರನ್ ಕಲೆಹಾಕಿದ್ದರ ಪರಿಣಾಮ ಸ್ಕೋರ್ 200ರ ಗಡಿ ದಾಟಿತು. ಅದ್ರಲ್ಲೂ ಕೊನೆಯ ಮೂರು ಎಸೆತಗಳನ್ನ ಸಿಕ್ಸರ್‌ ಸಿಡಿಸಿದ್ದು ಅಮೋಘ ಬ್ಯಾಟಿಂಗ್ ಪದರ್ಶನವಾಗಿತ್ತು.

ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡದ ಐತಿಹಾಸಿಕ ಜಯ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ X ಫ್ಯಾಕ್ಟರ್

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ X ಫ್ಯಾಕ್ಟರ್

ಹೌದು, ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಎಕ್ಸ್‌ ಫ್ಯಾಕ್ಟರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹಾರ್ದಿಕ್‌ನ ಬೆಳವಣಿಗೆ ಭಾರತೀಯ ಕ್ರಿಕೆಟ್‌ಗೆ ಹೊಸದು. ಇದು ವಿಶ್ವ ಕ್ರಿಕೆಟ್‌ಗೂ ಹೊಸದು. ಹಾರ್ದಿಕ್ ಬ್ಯಾಟ್ಸ್‌ಮನ್ ಆಗಿ ಸಾಕಷ್ಟು ಉತ್ತಮವಾಗಿದ್ದಾರೆ. ಬೌಲರ್ ಆಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಬೌಲಿಂಗ್ ಮಾಡಲು ಸಮರ್ಥರಾಗಿದ್ದಾರೆ, ಅದು ಕೂಡ ಅತ್ಯಂತ ವೇಗದಲ್ಲಿ. ಹಾರ್ದಿಕ್ ಅವರ ಉತ್ತಮ ಬ್ಯಾಟಿಂಗ್ ಮತ್ತು ಅವರ ವೇಗದ ಬೌಲಿಂಗ್ ಅವರನ್ನು ಆಧುನಿಕ ಕಾಲದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ.

ಹೀಗಾಗಿಯೇ ಹಾರ್ದಿಕ್ ಪಾಂಡ್ಯರನ್ನು ಅನೇಕರು ಇಂಗ್ಲೆಂಡ್ ಸೂಪರ್‌ಸ್ಟಾರ್ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್‌ಗೆ ಹೋಲಿಸಲಾಗುತ್ತದೆ. ಆದ್ರೆ ಈ ಇಬ್ಬರಲ್ಲಿ ಯಾರು ಬೆಸ್ಟ್ ಎಂಬುದಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಉತ್ತರಿಸಿದ್ದಾರೆ.

ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಈ IPL ತಂಡಗಳ ಆಟಗಾರರಿಲ್ಲ; ಮುಂಬೈ, ಆರ್‌ಸಿಬಿ ಮೇಲುಗೈ!

ಹಾರ್ದಿಕ್ ಮತ್ತು ಬೆನ್‌ ಸ್ಟೋಕ್ಸ್ ಹೋಲಿಕೆ ಕುರಿತು ರಶೀದ್ ಲತೀಫ್ ಅಭಿಪ್ರಾಯ

ಹಾರ್ದಿಕ್ ಮತ್ತು ಬೆನ್‌ ಸ್ಟೋಕ್ಸ್ ಹೋಲಿಕೆ ಕುರಿತು ರಶೀದ್ ಲತೀಫ್ ಅಭಿಪ್ರಾಯ

ಹಾರ್ದಿಕ್ ಪಾಂಡ್ಯ ಮತ್ತು ಬೆನ್‌ಸ್ಟೋಕ್ಸ್‌ರಲ್ಲಿ ಯಾರು ಶ್ರೇಷ್ಟ ಎಂಬ ಪ್ರಶ್ನೆಗೆ ರಶೀದ್ ಲತೀಫ್ ಹೋಲಿಕೆಯೇ ಸರಿಯಲ್ಲ ಎಂಬಂತೆ ಮಾತನಾಡಿದ್ದಾರೆ. ಇತ್ತೀಚಿನ ಐಸಿಸಿ ಟಿ20 ಶ್ರೇಯಾಂಕದಲ್ಲಿ ಪಾಂಡ್ಯ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಈ ವಿಚಾರದಲ್ಲಿ ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕರಾಗಿರುವ ಬೆನ್ ಸ್ಟೋಕ್ಸ್‌ಗೆ ಹಾರ್ದಿಕ್‌ರನ್ನು ಹಲವು ಬಾರಿ ಹೋಲಿಸಲಾಗಿದೆ.

ಆದಾಗ್ಯೂ, ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಇದೀಗ ಹಾರ್ದಿಕ್ ಬಗ್ಗೆ ಯಾವುದೇ ತೀರ್ಪು ನೀಡಲು ಬಯಸುವುದಿಲ್ಲ. ಈ ಆಲ್‌ರೌಂಡರ್ ಮೊದಲು ದೊಡ್ಡ ವೇದಿಕೆಯಲ್ಲಿ ತನ್ನನ್ನು ತಾನು ಸಾಬೀತುಪಡಿಸಬೇಕೆಂದು ಅವರು ಬಯಸುತ್ತಾರೆ. ಆಗ ಮಾತ್ರ ಏನಾದರೂ ಹೋಲಿಕೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಆಲ್‌ರೌಂಡರ್‌ಗಳಲ್ಲಿ ಬೆನ್‌ಸ್ಟೋಕ್ಸ್‌ ಮುಂದಿದ್ದಾರೆ!

ಆಲ್‌ರೌಂಡರ್‌ಗಳಲ್ಲಿ ಬೆನ್‌ಸ್ಟೋಕ್ಸ್‌ ಮುಂದಿದ್ದಾರೆ!

ಲತೀಫ್ ಅವರ ಯೂಟ್ಯೂಬ್ ಚಾನೆಲ್ ಕ್ಯಾಟ್ ಬಿಹೈಂಡ್‌ನಲ್ಲಿ ಹಾರ್ದಿಕ್ ಪಾಂಡ್ಯ ಬಗ್ಗೆ ಕೇಳಿದಾಗ, ಅವರು ಹಾರ್ದಿಕ್ ಅವರನ್ನು ಬೆನ್ ಸ್ಟೋಕ್ಸ್‌ನೊಂದಿಗೆ ಹೋಲಿಕೆ ಮಾಡಿದ್ದಾರೆ. ಇವೆರಡರ ನಡುವೆ ಹೋಲಿಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಗೆಲ್ಲುವಲ್ಲಿ ಬೆನ್ ಸ್ಟೋಕ್ಸ್ ಪ್ರಮುಖ ಪಾತ್ರ ವಹಿಸಿದ್ದರು.

"ಅವರು (ಹಾರ್ದಿಕ್) ಉತ್ತಮ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ ಆದರೆ ಇದು ದ್ವಿಪಕ್ಷೀಯ ಸರಣಿಯಾಗಿದೆ. ದ್ವಿಪಕ್ಷೀಯ ಸರಣಿಗಳಲ್ಲಿ ಇಂತಹ ಇನ್ನಿಂಗ್ಸ್‌ಗಳನ್ನು ನೀವು ನೋಡುತ್ತೀರಿ. ಇತ್ತೀಚೆಗಷ್ಟೇ ಏಷ್ಯಾಕಪ್ ಮುಕ್ತಾಯಗೊಂಡಿದ್ದು, ಆ ಪ್ರದರ್ಶನಗಳನ್ನೂ ಲೆಕ್ಕ ಹಾಕಬೇಕು. ನಾನು ಇಂದಿನ ಪಂದ್ಯದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಬೆನ್ ಸ್ಟೋಕ್ಸ್ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ. ಅವರು ವಿಶ್ವಕಪ್ ಗೆದ್ದಿದ್ದಾರೆ ಮತ್ತು ಅವರು ಇಂಗ್ಲೆಂಡ್‌ಗಾಗಿ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

ಹಾರ್ದಿಕ್ ಅವರ ಕೆಲವು ಇನ್ನಿಂಗ್ಸ್‌ಗಳು ಬೆನ್ ಸ್ಟೋಕ್ಸ್‌ಗಿಂತ ಉತ್ತಮವಾಗಿವೆ

ಹಾರ್ದಿಕ್ ಅವರ ಕೆಲವು ಇನ್ನಿಂಗ್ಸ್‌ಗಳು ಬೆನ್ ಸ್ಟೋಕ್ಸ್‌ಗಿಂತ ಉತ್ತಮವಾಗಿವೆ

ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್, ಹಾರ್ದಿಕ್ ಪಾಂಡ್ಯ ಕುರಿತು ಹೊಗಳಿಕೆಯ ಮಾತುಗಳನ್ನ ಸಹ ಆಡಿದ್ದಾರೆ. "ಮೈದಾನದ ಪ್ರದರ್ಶನಕ್ಕೆ ಬಂದಾಗ ನೀವು ಆತನನ್ನು(ಹಾರ್ದಿಕ್) ಹೋಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಬೆನ್ ಸ್ಟೋಕ್ಸ್ ಹಾರ್ದಿಕ್‌ಗಿಂತ ಬಹಳ ಮುಂದಿದ್ದಾರೆ. ಆದ್ರೆ ಭಾರತದ ಕೆಲವು ಇನ್ನಿಂಗ್ಸ್‌ಗಳು ಬೆನ್ ಸ್ಟೋಕ್ಸ್‌ಗಿಂತ ಹಾರ್ದಿಕ್ ಆಟ ಉತ್ತಮವಾಗಿವೆ, ಆದರೆ ಉತ್ತಮ ಇನ್ನಿಂಗ್ಸ್ ಮತ್ತು ಸ್ಟೋಕ್ಸ್‌ಗಿಂತ ಉತ್ತಮವಾಗಿರುವುದು ಸಂಪೂರ್ಣವಾಗಿ ವಿಭಿನ್ನ ವಿಷಯಗಳು'' ಎಂದು ರಶೀದ್ ಲತೀಫ್ ಹೇಳಿದ್ದಾರೆ.

ಸೆಪ್ಟೆಂಬರ್ 23 ರಂದು ನಾಗ್ಪುರದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಆಡಲಿದ್ದು, ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಅನ್ನು ನಿರೀಕ್ಷೆ ಮಾಡಲಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 22, 2022, 14:25 [IST]
Other articles published on Sep 22, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X